ಉಡುಪಿ: ಕಡಲಾಮೆ ಜೀವ ಉಳಿಸಿ ಮಾನವೀಯತೆ ಮೆರೆದ ಮೀನುಗಾರ
ಉಡುಪಿ: ಗಾಯಗೊಂಡ ಕಡಲಾಮೆಯನ್ನು ರಕ್ಷಣೆ ಮಾಡಿ, ಮತ್ತೆ ನದಿಗೆ ಬಿಟ್ಟ ಘಟನೆ ಜಿಲ್ಲೆಯ ಕೋಟ ಪಡುಕೆರೆ ಕಡಲ ಕಿನಾರೆಯಲ್ಲಿ ನಡೆದಿದೆ.
ಮೀನುಗಾರ ಪ್ರದೀಪ್, ಸಮುದ್ರದಲ್ಲಿ ಬಲೆ ಬೀಸಿ ಮೀನು ಹಿಡಿಯುವ ಸಂದರ್ಭದಲ್ಲಿ ಗಾಯಗೊಂಡಿರುವ ಕಡಲಾಮೆ ಕಣ್ಣಿಗೆ ಬಿದ್ದಿದೆ. ಕೂಡಲೇ ಪ್ರದೀಪ್ ಕೋಟದ ಸಾಮಾಜಿಕ ಸೇವಾ ಸಂಸ್ಥೆಯಾದ, ಗೀತಾನಂದ ಫೌಂಡೇಶನ್ ನ ಸಮಾಜ ಕಾರ್ಯ ವಿಭಾಗದ ರವಿಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ.
ರವಿಕಿರಣ್ ಸಾಮಾಜಿಕ ಕಾರ್ಯಕರ್ತ ವಿನಯಚಂದ್ರರಿಗೆ ಮಾಹಿತಿ ನೀಡಿ, ಅವರ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಎಫ್ಎಸ್ಎಲ್ ಇಂಡಿಯಾ ಸಂಸ್ಥೆಯ ಮಂಜುನಾಥ ಮಾಹಿತಿ ಮೇರೆಗೆ ಕಡಲಾಮೆ ರಕ್ಷಿಸಲಾಗಿದೆ. ಮಾಹಿತಿಗೆ ಸ್ಪಂದಿಸಿದ ಉಪವಲಯ ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ, ಅರಣ್ಯ ರಕ್ಷಕ ಶಿವಪ್ಪ ನಾಯ್ಕ, ಅರಣ್ಯ ವೀಕ್ಷಕ ಪರಶುರಾಮ್ ಮೇಟಿ, ವಾಹನ ಚಾಲಕ ಜೋಯ್ ಕಡಲಾಮೆ ರಕ್ಷಣಾ ಕಾರ್ಯಚರಣೆ ನೆಡೆಸಿದ್ದಾರೆ.
ಕಡಲಲ್ಲಿ ತೆರೆಗಳ ಅಬ್ಬರ ಹೆಚ್ಚಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಹಾರಾಡಿಯ ಸುವರ್ಣ ನದಿ ಮಡಿಲಿಗೆ ಆಮೆಯನ್ನು ಬಿಡಲಾಗಿದ್ದು, ಮಾನವೀಯತೆ ಮೆರೆಯುವಲ್ಲಿ ಸಾಸ್ತನದ ಜನ ಮುಂದಾಗಿದ್ದಾರೆ
Leave A Reply