ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಬೆತ್ತಲೆ ಫೋಟೋ ಹಾಕಿದ್ದ ಯುವಕರ ಸೆರೆ
Posted On July 17, 2018
0
ಮಂಗಳೂರು: ಯುವತಿಯೊಬ್ಬಳ ನಗ್ನ ಚಿತ್ರವನ್ನು ರಹಸ್ಯವಾಗಿ ತೆಗೆದು, ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪದ ಮೇಲೆ ಮೂವರು ಯುವಕರನ್ನು ಉಪ್ಪಿನಂಗಡಿ ಪೋಲೀಸರು ಬಂದಿಸಿದ್ದಾರೆ. ಈ ಘಟನೆ ಕುರಿತು ಸಂತ್ರಸ್ತ ಯುವತಿ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಂದೇಶ್, ಜಗದೀಶ್ ಮತ್ತು ನವೀನ್ ಬಂಧಿತರು. ಆರೋಪಿ ಸಂದೇಶ್ ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಆತ ಯುವತಿಯನ್ನು ಪರಿಚಯ ಮಾಡಿಕೊಂಡು, ಆಕೆಯೊಂದಿಗೆ ಪ್ರೀತಿಯ ನಾಟಕವಾಡಿದ್ದಾನೆ. ಆ ನಂತರ ಪುಸಲಾಯಿಸಿ ರಹಸ್ಯವಾಗಿ ಯುವತಿಯ ನಗ್ನ ಚಿತ್ರಗಳನ್ನು ಸೆರೆ ಹಿಡಿದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಗತಿ ಗೊತ್ತಾದ ಮೇಲೆ ಯುವತಿಯು ಸಂದೇಶ್ ನಿಂದ ದೂವಾಗಿದ್ದಳು. ಆದರೆ ಸಂದೇಶ್ ಆಕೆಯ ನಗ್ನ ಫೋಟೋಗಳನ್ನು ತನ್ನ ಸ್ನೇಹಿತರಾದ ಜಗದೀಶ್ ಮತ್ತು ನವೀನ್ ಗೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ. ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತ ಯುವತಿ ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ತನಿಖೆ ನಡೆಸಿದ ಪೊಲೀಸರು ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
December 23, 2025









