• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಿಖಾ ಹಲಾಲ್ ಮುಸ್ಲಿಂ ಹೆಣ್ಣಿಗೆ ಅಲ್ಲ ಯಾವ ಮಹಿಳೆಗೂ ಬರಬಾರದು!!

Hanumantha Kamath Posted On July 19, 2018


  • Share On Facebook
  • Tweet It

ನಿಖಾ ಹಲಾಲ್ ಎನ್ನುವ ವಿಶಿಷ್ಟ ಆದರೆ ಅನಿಷ್ಟ ಪದ್ಧತಿಯ ಬಗ್ಗೆ ನೀವು ಕೇಳಿದ್ದಿರಾ? ಮುಸ್ಲಿಂ ಸಮುದಾಯದಲ್ಲಿ ನೀವು ಹುಟ್ಟಿದ್ದರೆ ಅಥವಾ ಆ ಧರ್ಮದವರ ಅತ್ಯಂತ ನಿಕಟ ಒಡನಾಟ ಇದ್ದರೆ ಅಥವಾ ಮುಸ್ಲಿಂ ಸಂಪ್ರದಾಯದ ಬಗ್ಗೆ ಅಧ್ಯಯನ ಮಾಡಿದ್ದರೆ ನಿಮಗೆ ಈ ಶಬ್ದದ ಬಗ್ಗೆ ಗೊತ್ತಿರುತ್ತದೆ. ಒಂದು ವೇಳೆ ಗೊತ್ತಿಲ್ಲದಿದ್ದರೆ ನೀವು ಈ ಶಬ್ದವನ್ನು ಗೂಗಲ್ ನಲ್ಲಿ ಹಾಕಿದರೆ ಅದರ ಅರ್ಥ ಗೊತ್ತಾಗುತ್ತದೆ. ಅಷ್ಟಕ್ಕೂ ನಿಖಾ ಹಲಾಲ್ ಎನ್ನುವ ಅನಿಷ್ಟ ಇವತ್ತಿಗೂ ನಮ್ಮ ಮಧ್ಯದಲ್ಲಿದೆ ಎನ್ನುವ ವಿಷಯವೇ ಅತ್ಯಂತ ಅಸಹ್ಯ. ಅಷ್ಟಕ್ಕೂ ನಿಖಾ ಹಲಾಲ್ ಅಂದರೇನು?

ಪರಪುರುಷ ಮತ್ತು ಆ ರಾತ್ರಿ…

ಮುಸ್ಲಿಂ ಧರ್ಮದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ತಮ್ಮ ಜೀವನದಲ್ಲಿ ಯಾವತ್ತಿಗೂ ನಿಖಾ ಹಲಾಲ್ ಬರದಿರಲಿ ಎಂದೇ ಹಾರೈಸುತ್ತಾರೆ. ಯಾಕೆಂದರೆ ತನ್ನ ಗಂಡನೊಂದಿಗೆ ಬಾಳು ಮುಂದುವರೆಸಲು ಮತ್ತೊರ್ವ ಗಂಡಸಿನೊಂದಿಗೆ ಒಂದು ರಾತ್ರಿ ಕಳೆಯುವುದು ಎಂದರೆ ಅದಕ್ಕಿಂತ ಅಸಹ್ಯ ಭಾರತೀಯ ಮಣ್ಣಿನಲ್ಲಿ ಇನ್ನೂ ನಡೆಯುತ್ತಿರುವುದೇ ಬೇಸರ.  ನೀವು ತ್ರಿವಳಿ ತಲಾಖ್ ಬಗ್ಗೆ ಕೇಳಿರುತ್ತೀರಿ. ಇತ್ತೀಚೆಗಂತೂ ನರೇಂದ್ರ ಮೋದಿ ಸರಕಾರ ತ್ರಿವಳಿ ತಲಾಖ್ ನಿಷೇಧಿಸಲು ತೀರ್ಮಾನಿಸಿ ಲೋಕಸಭೆಯಲ್ಲಿ ಅದು ಪಾಸ್ ಆದ ನಂತರ ಬೇರೆ ಸಮುದಾಯದವರು ಕೂಡ ಇದರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ಆಸಕ್ತಿ ತೋರಿಸಿದ್ದರು. ಆದರೆ ತ್ರಿವಳಿ ತಲಾಖ್ ಎನ್ನುವ ಪೆಡಂಭೂತಕ್ಕಿಂತ ದೊಡ್ಡದು ನಿಖಾ ಹಲಾಲ್. ಆದರೆ ಇದು ಅನುಭವಿಸುವ ಮೊದಲು ಆ ಹೆಣ್ಣು ತ್ರಿವಳಿ ತಲಾಖ್ ಅನ್ನು ಮೊದಲು ಎದುರಿಸುತ್ತಾಳೆ. ಅದರ ನಂತರ ಅವಳಿಗೆ ಮತ್ತೆ ತನ್ನ ಗಂಡನನ್ನು ಮದುವೆಯಾಗಬೇಕಾದರೆ ಆಕೆ ಮೊದಲು ಪರಪುರುಷನನ್ನು ಮದುವೆಯಾಗಬೇಕಾಗುತ್ತದೆ. ಅದರ ನಂತರ ಆಕೆ ಒಂದು ರಾತ್ರಿ ಆತನೊಂದಿಗೆ ಕಳೆಯಬೇಕಾಗುತ್ತದೆ. ಬಳಿಕ ಆ ಪರಪುರುಷ ಆಕೆಗೆ ತ್ರಿವಳಿ ತಲಾಖ್ ಕೊಡಬೇಕಾಗುತ್ತದೆ. ಅದರ ನಂತರ ಅವಳು ಹಿಂದಿನ ಗಂಡನೊಂದಿಗೆ ನಿಖಾ ಅಂದರೆ ಮದುವೆಯಾಗಬಹುದು. ಈ ಸಂಪ್ರದಾಯವನ್ನು ಎಷ್ಟು ಭಾರತೀಯ ಮಹಿಳೆಯರು ಒಪ್ಪುತ್ತಾರೆ ಎನ್ನುವುದನ್ನು ಕೇಳಿ ನೋಡಿ. ಮುಸ್ಲಿಂ ಮಹಿಳೆಯೇ ಆಗಬೇಕಾಗಿಲ್ಲ. ಯಾವುದೇ ಮಹಿಳೆಯನ್ನು ಕೇಳಿ ನೋಡಿ, ಆಕೆ ನಿಜಕ್ಕೂ ಬೆರಗಾಗುತ್ತಾಳೆ. ಇದರ ವಿರುದ್ಧ ಹೋರಾಡುತ್ತಾಳೆ. ಮಹಿಳೆ ಆಕೆ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಅಥವಾ ಯಾವುದೇ ಧರ್ಮ, ಜಾತಿಯವಳಾಗಿರಲಿ, ಆಕೆ ಈ ಭಾರತೀಯ ನೆಲದ ಹೆಣ್ಣುಮಗಳಾಗಿದ್ದಲ್ಲಿ ಆಕೆ ನಿಖಾ ಹಲಾಲ್ ಒಪ್ಪುವುದೇ ಇಲ್ಲ.

ಕಾಂಗ್ರೆಸ್ ಇವತ್ತಿಗೂ ವಿರೋಧ..

ಆದರೆ ಇದನ್ನು ಇಷ್ಟು ವರ್ಷ ನಮ್ಮನ್ನು ಆಳಿದ ಯಾವುದೇ ಸರಕಾರಗಳು ಅರ್ಥ ಮಾಡಿಕೊಳ್ಳಲೇ ಇಲ್ಲ. ಯಾಕೆಂದರೆ ಅದನ್ನು ವಿರೋಧಿಸಿದರೆ ಅದರಿಂದ ಮುಸ್ಲಿಂ ಪುರುಷರು ಬೇಸರಗೊಳ್ಳುತ್ತಾರೆ ಎನ್ನುವ ಹೆದರಿಕೆ ಕಾಂಗ್ರೆಸ್ ಸಹಿತ ಇತರ ಸಣ್ಣಪುಟ್ಟ ಪಕ್ಷಗಳಿಗೆ ಇತ್ತು. ಹೇಗೂ ಮುಸ್ಲಿಂ ಗಂಡಸರು ಎಲ್ಲಿ, ಯಾರಿಗೆ ವೋಟ್ ಹಾಕಲು ಹೇಳುತ್ತಾರೆ, ಅವರಿಗೆನೆ ಮುಸ್ಲಿಂ ಮಹಿಳೆಯರು ವೋಟ್ ಹಾಕುವುದರಿಂದ ಮುಸ್ಲಿಂ ಪುರುಷರನ್ನು ಎದುರು ಹಾಕಿಕೊಳ್ಳುವುದು ಬೇಡಾ, ವೋಟ್ ಗೀಟ್ ನಷ್ಟವಾಗುತ್ತದೆ ಎನ್ನುವ ಆತಂಕ ಕಾಂಗ್ರೆಸ್ ಪಕ್ಷಕ್ಕೆ ಇತ್ತು. ಆದ್ದರಿಂದ ಕಾಂಗ್ರೆಸ್ ತ್ರಿವಳಿ ತಲಾಖ್ ಎನ್ನುವ ಅನಿಷ್ಟವನ್ನು ತೊಡೆದು ಹಾಕಲು ಯಾವತ್ತೂ ಒಪ್ಪಲೇ ಇಲ್ಲ. ಆದರೆ ಮೋದಿ ನೇತೃತ್ವದ ಎನ್ ಡಿಎ ಸರಕಾರಕ್ಕೆ ಮುಸ್ಲಿಂ ಹೆಣ್ಣುಮಗಳು ನಮ್ಮ ದೇಶದ ಬೇರೆ ಹೆಣ್ಣುಮಕ್ಕಳಂತೆ ಸಾಮಾಜಿಕ ಜೀವನವನ್ನು ಕಾಣಬೇಕು ಎನ್ನುವ ಗುರಿ ಇತ್ತು. ಅವರು ವೋಟ್ ಹಾಕುತ್ತಾರೋ ಇಲ್ವೋ ಅವರಿಗೆ ನಿಖಾ ಹಲಾಲ್ ನಂತಹ ಅನಿಷ್ಟ ಪದ್ಧತಿ ಶಾಪವಾಗಬಾರದು ಎಂದು ಮೋದಿ ನಿಶ್ಚಯಿಸಿಬಿಟ್ಟಿದ್ದರು. ಯಾಕೆಂದರೆ ನೀವು ಸರಿಯಾಗಿ ಗಮನಿಸಿ, ಒಂದು ಮುಸ್ಲಿಂ ಹೆಣ್ಣು ತ್ರಿವಳಿ ತಲಾಖ್ ನಿಂದ ನರಳಿದರೆ ಅದು ಕೇವಲ ಅವಳ ನೋವು ಅಗಿರುವುದಿಲ್ಲ. ಅದು ಅವಳ ತಂದೆಯ ಸಂಕಟವೂ ಆಗಿರುತ್ತದೆ. ಅವಳನ್ನು ಹೆತ್ತ ತಾಯಿಯ ಒಡಲ ಬೆಂಕಿಯೂ ಆಗುತ್ತದೆ. ಅವಳ ಸಹೋದರರ ಮನಸ್ಸಿನ ತುಮುಲವೂ ಆಗಿರುತ್ತದೆ. ಅವಳ ಸಹೋದರಿಯರ ಬದುಕಿನ ಸಂಕಷ್ಟವೂ ಆಗುತ್ತದೆ. ಆದರೆ ಇದನ್ನು ಅರಿಯುವಷ್ಟು ವ್ಯವಧಾನ ಕಾಂಗ್ರೆಸ್ಸಿಗೆ ಯಾವತ್ತೂ ಇರಲಿಲ್ಲ. ಅದು ಇವತ್ತಿಗೂ ಇಲ್ಲ. ಅದಕ್ಕಾಗಿ ರಾಜ್ಯಸಭೆಯಲ್ಲಿ ಈ ಮಸೂದೆ ಪಾಸ್ ಆಗಲು ಬಿಡುತ್ತಿಲ್ಲ!

  • Share On Facebook
  • Tweet It


- Advertisement -


Trending Now
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
Hanumantha Kamath May 30, 2023
ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
Hanumantha Kamath May 29, 2023
Leave A Reply

  • Recent Posts

    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
  • Popular Posts

    • 1
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 2
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 3
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 4
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search