ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡ್ದಿದ್ದ ಆರೋಪಿಯ ಬಂಧನ!
ಮಂಗಳೂರು : ಕಾಟಿಪಳ್ಳದಲ್ಲಿ ನಡೆದಿದ್ದ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಾಪುರ 4ನೇ ಬ್ಲಾಕ್ ನ್ ಅಲ್ ಬದ್ರಿಯಾ ಜುಮ್ಮಾ ಮಸೀದಿ ಬಳಿ ಸಫ್ವಾನ್ ಯಾನೆ ಚಪ್ಪು 23 ಬಂಧಿತ ಆರೋಪಿ. ಈತ ಪ್ರಕರಣದ ಪ್ರಮುಖ ಆರೋಪಿ ರಿಜ್ವಾನ್ ಯಾನೆ ರಿಜ್ಜು ಎಂಬಾತನ ಸಹೋದರ.
ಕಳೆದ ಜನವರಿ 3ರಂದು ಮಧ್ಯಾಹ್ನ ಮಂಗಳೂರಿನ ಕಾಟಿಪಳ್ಳದ 2ನೇ ಬ್ಲಾಕ್ ನಲ್ಲಿ ಅಬ್ದುಲ್ ಮಜೀದ್ ಎಂಬುವವರ ಮನೆಯ ಎದುರು ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ರನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿ, ಆ ನಂತರ ಪರಾರಿಯಾಗಿತ್ತು
ದೀಪಕ್ ಕೊಲೆ ಕೃತ್ಯಕ್ಕೆ ಸಂಚು ನಡೆಸುತ್ತಿದ್ದ ಬಗ್ಗೆ ಈತನಿಗೆ ಮೊದಲೇ ತಿಳಿದಿದ್ದು, ಆರೋಪಿಗಳಿಗೆ ಸಹಕಾರ ನೀಡಿ, ದೀಪಕ್ ರಾವ್ ಕೊಲೆಯಾದ ದಿನದಿಂದ ತಪ್ಪಿಸಿಕೊಂಡು ಈತ ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡಿತ್ತಿದ್ದ. ಈತನಿಗಾಗಿ ಪೊಲೀಸರು ಹಲವು ದಿನಗಳಿಂದ ಶೋಧ ನಡೆಸುತ್ತಿದ್ದರು.
ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿ ಎಸ್ ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಜೊತೆಗಿದ್ದರು.
Leave A Reply