ಪ್ರಧಾನಿಯನ್ನು ತಬ್ಬುವ ನಾಟಕ ಬಿಟ್ಟು ಫರಾಹ್ ಫೈಜ್ ಬೆನ್ನಿಗೆ ನಿಂತಿದ್ದರೆ ನಿಮಗೆ ಮುಸ್ಲಿಮರು ಫಿದಾ ಆಗುತ್ತಿದ್ದರು!
ಒಂದು ವಠಾರ. ಅಲ್ಲಿ ಅಕ್ಕಪಕ್ಕದಲ್ಲಿ ಹಿಂದೂ ಮತ್ತು ಮುಸ್ಲಿಂ ಮನೆಗಳು ಇವೆ ಎಂದು ಇಟ್ಟುಕೊಳ್ಳೋಣ. ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಗು ಹುಟ್ಟುತ್ತದೆ. ಪಕ್ಕದ ಹಿಂದೂ ಮನೆಯಲ್ಲಿ ಕೂಡ ಒಂದು ಹೆಣ್ಣು ಮಗು ಹುಟ್ಟುತ್ತದೆ. ವಯಸ್ಸಿಗೆ ಬಂದ ನಂತರ ಇಬ್ಬರಿಗೂ ಅವರವರ ಧರ್ಮಗಳಲ್ಲಿ ಮದುವೆಯಾಗುತ್ತದೆ. ಮುಸ್ಲಿಂ ಧರ್ಮದ ಯುವತಿಗೆ ಅವಳ ಗಂಡ ಯಾವುದೋ ಕೋಪದಲ್ಲಿ ವಿದೇಶದಿಂದ ಫೋನಿನಲ್ಲಿ ತ್ರಿವಳಿ ತಲಾಖ್ ಹೇಳಿಬಿಡುತ್ತಾನೆ. ಮದುವೆ ಮುರಿದು ಬೀಳುತ್ತದೆ. ನಂತರ ಯಾವತ್ತೋ ಅವನು ಊರಿಗೆ ಬರುತ್ತಾನೆ. ಅವನಿಗೆ ಮತ್ತೆ ಅವಳು ಬೇಕೆನಿಸುತ್ತದೆ. ಅವಳಿಗೂ ಅವನೇ ಗಂಡನಾಗಿ ಇರಬೇಕು ಎಂದು ಅನಿಸುತ್ತದೆ. ಆದರೆ ಮತ್ತೆ ಅವಳಿಗೂ ಅವನಿಗೂ ಒಟ್ಟಿಗೆ ವಾಸಿಸಬೇಕಾದರೆ ಅಂದರೆ ನಿಖಾ ಆಗಿ ಕಾನೂನಾತ್ಮಕವಾಗಿ ಗಂಡ ಹೆಂಡತಿ ಅನಿಸಬೇಕಾದರೆ ಅವಳು ಮೊದಲು ಬೇರೆ ಗಂಡಸನ್ನು ಮದುವೆಯಾಗಬೇಕು. ಒಂದು ರಾತ್ರಿ ಕಳೆಯಬೇಕು. ನಂತರ ಅವನಿಂದ ತ್ರಿವಳಿ ತಲಾಖ್ ಹೇಳಿಸಬೇಕು. ಬಳಿಕ ಹಳೆ ಗಂಡನನ್ನು ಮದುವೆಯಾಗಬೇಕು.
ಹಿಂದೂ ಮಹಿಳೆಗೆ ಕಾನೂನಿನ ರಕ್ಷಣೆ…
ಅದೇ ಪಕ್ಕದ ಹಿಂದೂ ಫ್ಯಾಮಿಲಿಯಲ್ಲಿ ಗಂಡ ಹೆಂಡತಿಗೆ ಜಗಳ ಆಯಿತು ಎಂದು ಇಟ್ಟುಕೊಳ್ಳೋಣ. ಇಬ್ಬರೂ ಕೋರ್ಟಿಗೆ ಹೋದರು ಎಂದೇ ಅಂದುಕೊಳ್ಳೋಣ. ಕೋರ್ಟ್ ಇವರು ಬಂದ ಕೂಡಲೇ ವಿಚ್ಚೇದನ ನೀಡಲ್ಲ. ಇವರಿಗೆ ಸಮಯಾವಕಾಶ ಕೊಡುತ್ತದೆ. ಇವರು ಮತ್ತೆ ಒಂದಾಗಲು ಸಮಯ ನೀಡುತ್ತದೆ. ಕೋರ್ಟಿನಲ್ಲಿ ಯಾರಿಗೆ ವಿಚ್ಚೇದನ ಅನಿವಾರ್ಯ ಮತ್ತು ಅದಕ್ಕಿರುವ ಕಾರಣಗಳ ಬಗ್ಗೆ ವಾದ ವಿವಾದ ನಡೆಯುತ್ತದೆ. ಎಲ್ಲವೂ ನಡೆದು ಕೊನೆಗೆ ಯಾವುದೂ ಸುಖಾಂತ್ಯವಾಗುವುದಿಲ್ಲ ಎಂದು ಖಚಿತವಾದಾಗ ಮಾತ್ರ ವಿಚ್ಚೇದನ ನಡೆಯುತ್ತದೆ. ಕ್ರೈಸ್ತ ಸಮುದಾಯದಲ್ಲಿಯೂ ಮುಸ್ಲಿಂರಲ್ಲಿ ಇದ್ದಂತೆ ವಿಚ್ಚೇದನ ಇಲ್ಲ. ಆದರೆ ಮುಸ್ಲಿಂ ಮಹಿಳೆ ಮಾತ್ರ ಯಾಕೆ ಹಾಗೆ ತ್ರಿವಳಿ ತಲಾಖ್ ಎನ್ನುವ ಭಯದ ನೆರಳಿನಲ್ಲಿ ಇರಬೇಕಾಗುತ್ತದೆ. ಇದಕ್ಕೆ ಉತ್ತರ ಇದೆಯಾ? ರಾಹುಲ್ ಗಾಂಧಿಯವರೇ, ನಿಮಗೆ ಯಾಕೆ ಮುಸ್ಲಿಂ ಮಹಿಳೆಯ ಕಷ್ಟ ಗೊತ್ತಾಗುತ್ತಿಲ್ಲ. ಇದಕ್ಕೆ ಏನು ಕಾರಣ ಗೊತ್ತಾ? ಮೊದಲನೇಯದಾಗಿ ನೀವು ಮುಸ್ಲಿಂ ಮೂಲಭೂತವಾದಿಗಳನ್ನು ಮಾತ್ರ ಕರೆಸಿ ಮಾತನಾಡುತ್ತಿರುವುದು. ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ವಾದಿಸಿ ಇಂತಹ ಅನಿಷ್ಟ ಪದ್ಧತಿಯ ವಿರುದ್ಧ ಪಂಚ ಬೆಂಚಿನ ನ್ಯಾಯಾಧೀಶರ ವಿರುದ್ಧ ಗೆದ್ದರಲ್ಲ, ಫರಾಹ್ ಫೈಜ್ ಎನ್ನುವ ಧೈರ್ಯಶಾಲಿ ಮಹಿಳಾ ವಕೀಲೆ. ಅವರನ್ನು ಕರೆದು ಮಾತನಾಡಿದ್ದಿರಾ ರಾಹುಲ್. ಹೋಗಲಿ, ಆ ಮಹಿಳೆಗೆ ಟಿವಿ ವಾಹಿನಿಯೊಂದರ ಡಿಬೆಟಿನಲ್ಲಿ ಮೌಲಾನಾ ಈಜಾಝ್ ಅರ್ಶದ್ ಕಾಜ್ಮಿ ಎನ್ನುವವರು ಮೂರು ಮೂರು ಬಾರಿ ಹೊಡೆದರಲ್ಲ, ನೀವು ಅದಕ್ಕೆ ಕನಿಷ್ಟ ವಿರೋಧ ವ್ಯಕ್ತಪಡಿಸಿದ್ದಿರಾ? ಒಂದು ಹೆಣ್ಣು ಬಹಿರಂಗವಾಗಿ ತ್ರಿವಳಿ ತಲಾಖ್ ವಿರುದ್ಧ ಹೋರಾಡುವುದೇ ದೊಡ್ಡ ಸಾಹಸ. ಅದರಲ್ಲಿಯೂ ನ್ಯಾಯಾಲಯದಲ್ಲಿ ಗೆಲುವು ಸಾಧಿಸಿರುವುದು ಇನ್ನೊಂದು ದೊಡ್ಡ ಸಾಹಸ. ಅಂತವರಿಗೆ ಬೆನ್ನು ತಟ್ಟಿ ಶಹಬ್ಬಾಶ್ ಹೇಳಿದ್ದರೆ ನಿಮ್ಮ ತೂಕವೂ ಏರುತ್ತಿತ್ತು. ಆದರೆ ನಿಮ್ಮದೇನಿದ್ದರೂ ಪ್ರಧಾನ ಮಂತ್ರಿಯನ್ನು ತಬ್ಬಿಕೊಳ್ಳುವುದು, ಈಚೆ ಬಂದು ಕಣ್ಣು ಹೊಡೆಯುವುದು ಇಷ್ಟೇ.
ಸ್ತ್ರೀ ಸನ್ಮಾನ್ ಗೊತ್ತಿದೆಯಾ…
ಸ್ತ್ರೀ ಸನ್ಮಾನ ಎನ್ನುವ ಶಬ್ದವನ್ನು ಏನು ಎಂದು ನೀವು ತಿಳಿದುಕೊಂಡಿದ್ದಿರೋ ಗೊತ್ತಿಲ್ಲ. ಬಹುಶ: ಆಗಾಗ ವಿದೇಶಕ್ಕೆ ಹಾರಿ ಅಲ್ಲಿ ಮೋಜು ಮಸ್ತಿಯಲ್ಲಿ ಇರುವ ನಿಮಗೆ ಅದರ ಅರ್ಥ ಗೊತ್ತಾಗುವ ಚಾನ್ಸ್ ಇಲ್ಲ. ಹೆಣ್ಣನ್ನು ಬೇಕೆಂದಾಗ ನಿಖಾ ಮಾಡುವುದು ಬೇಡಾ ಎಂದಾಗ ತ್ರಿವಳಿ ತಲಾಖ್ ನೀಡುವುದು ಮತ್ತೆ ಬೇಕೆಂದರೆ ನಿಖಾ ಹಲಾಲ್ ಮಾಡಿಕೊಳ್ಳುವುದು ಇದಾ ನಾರಿ ಸನ್ಮಾನ್. ಒಂದು ಶರ್ಟ್ ಅನ್ನು ಒಮ್ಮೆ ಹಾಕಿ ರಾತ್ರಿ ತೆಗೆದು ಹ್ಯಾಂಗರಿಗೆ ಹಾಕಿ ಎರಡು ದಿನ ಬಿಟ್ಟು ಮತ್ತೆ ತೆಗೆದು ಹಾಕುವ ಲೆವೆಲ್ಲಿಗೆ ಒಂದು ಹೆಣ್ಣು ಒಂದು ಧರ್ಮದಲ್ಲಿ ಅನುಭವಿಸುತ್ತಿರುವ ನೋವು ನಿಮಗೆ ಗೊತ್ತಾಗಲ್ವಾ? ನೀವು ಅಧಿಕಾರದಲ್ಲಿದ್ದಾಗ ನಿಮಗೆ ಮಾಡಲಾಗಲಿಲ್ಲ. ಈಗ ಕನಿಷ್ಟ ಬಿಲ್ ರಾಜ್ಯಸಭೆಯಲ್ಲಿ ಪಾಸ್ ಮಾಡಲು ಸಹಕಾರ ನೀಡಿ. ನಿಮ್ಮದೇ ಪಕ್ಷದ ಮುಸ್ಲಿಂ ಮಹಿಳಾ ಮುಖಂಡರಾದರೂ ಕನಿಷ್ಟ ನೆಮ್ಮದಿಯ ನಿಟ್ಟುಸಿರು ಬಿಡಬಹುದು!
Leave A Reply