ಕುಮಾರಸ್ವಾಮಿಯವರು ಸಾಲಮನ್ನಾ ವಿಳಂಬ ಮಾಡಿದ್ದಕ್ಕೆ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಾ?
ಅತ್ತ ಎಚ್.ಡಿ.ದೇವೇಗೌಡರೂ ನಾನು ಮಣ್ಣಿನ ಮಗ ಎನ್ನುತ್ತಾರೆ, ಇತ್ತ ಅವರ ಮಗ ಕುಮಾರಸ್ವಾಮಿಯವರೂ ಮಣ್ಣಿನ ಮಗ ಎನ್ನುತ್ತಾರೆ. ಇದರ ಅರ್ಥ ರೈತರನ್ನು ಸೆಳೆಯುವುದೇ ಆಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ಕುಮಾರಸ್ವಾಮಿಯವರು ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡದೆ ಇರುವುದಕ್ಕೆ ಈಗ ರೈತರು ತಮ್ಮ ಪ್ರಾಣವನ್ನೇ ಅರ್ಪಿಸುವಂತಾಗಿದೆ.
ಹೌದು, ರಾಜ್ಯದಲ್ಲಿ ಚುನಾವಣೆಗೂ ಮುನ್ನ ನಾವು ರೈತರ ಪರ ಆಡಳಿತ ನಡೆಸುತ್ತೇವೆ, ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ರೈತರ ಸಾಲ ಮನ್ನಾ ಮಾಡಲು ಸದ್ಯಕ್ಕೆ ಆಗುವುದಿಲ್ಲ ಎಂದರು, ಹಣದ ಕೊರತೆ ಎಂದು ವರಾತ ತೆಗೆದರು. ಅದಾದ ಬಳಿಕ ನಾನು ರಾಜ್ಯದ ಜನರ ಮುಲಾಜಿನಲ್ಲಿಲ್ಲ, ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದು ಮತ ಹಾಕಿದ ಎಲ್ಲರ ಕೆನ್ನೆಗೆ ಬಾರಿಸುವಂತೆ ಮಾತನಾಡಿದರು.
ಇದೆಲ್ಲದರ ನಡುವೆ ರೈತರ ಸಾಲ ಮನ್ನಾ ವಿಷಯವನ್ನು ಕುಮಾರಸ್ವಾಮಿಯವರು ಮರೆತೇ ಬಿಟ್ಟದ್ದರು. ಆದರೆ ರಾಜ್ಯದ ರೈತರೇ ಒತ್ತಾಯ ಮಾಡುವಂತಾಯಿತು. ಸಾಂದರ್ಭಿಕ ಶಿಶುವನ್ನು ಬಡಿದೆಬ್ಬಿಸಬೇಕಾಯಿತು. ಕೊನೆಗೆ ಅಧಿಕಾರಕ್ಕೆ ಬಂದ ಹಲವು ದಿನಗಳ ಬಳಿಕ ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದರು ಕುಮಾರಸ್ವಾಮಿ.
ಆದರೆ ಈ ಅವಧಿಯಲ್ಲೇ ರೈತರು ಸಾಲದಿಂದ ಬೇಸತ್ತು ಹೋಗಿದ್ದರು. ಅಲ್ಲದೆ ಸಾಲ ಮನ್ನಾ ಮಾಡಿ ಹಲವು ದಿನ ಕಳೆದರೂ ಸಾಲ ಮನ್ನಾ ಆಗದ ಕಾರಣ ಬೇಸತ್ತ ಸುಮಾರು 28 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೇಳಿ ಒಬ್ಬ ಮುಖ್ಯಮಂತ್ರಿ ಮೈಮರೆತರೆ, ಆಡಿದ ಮಾತು ಮರೆತು ಹೋದರೆ ಏನಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಮಣ್ಣಿನ ಮಕ್ಕಳು ಇದನ್ನು ಅರ್ಥ ಮಾಡಿಕೊಳ್ಳುವುದು ಯಾವಾಗ?
Leave A Reply