ಮೋದಿ ಅವರು ಹೊಗಳಿದ್ದ ಆಚಾರ್ಯರ ಕುಂಚದಲ್ಲಿ ಅರಳಿದ ರಾಮನ ಚಿತ್ರ ಮಾಡಿದೆ ಮೋಡಿ
ಮಂಗಳೂರು: ಕಳೆದ ಎರಡು ವರ್ಷಗಳ ಹಿಂದೆ ಕರಣ್ ಆಚಾರ್ಯ ಬಿಡಿಸಿದ ಹನುಮಂತನ ಚಿತ್ರ ದೇಶಾದ್ಯಂತ ಸುದ್ದಿಯಾಗಿತ್ತು. ಯಾರದ್ದೇ ವಾಹನ, ಬೈಕಿನ ಮೇಲೆ ಕರಣ್ ಬಿಡಿಸಿದ ಚಿತ್ರಗಳೇ ರಾರಾಜಿಸುತ್ತಿದ್ದವು. ಎಲ್ಲರೂ ರಾಮನ ಭಕ್ತ ಹನುಮನ ಬಂಟರೇ ಆಗಿದ್ದರು.
ಅಷ್ಟೇ ಏಕೆ, ಹಲವು ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಬಂದಾಗ ಕನ್ನಡದ ಪ್ರತಿಭೆ ಕರಣ್ ಆಚಾರ್ಯರನ್ನು ಮನದುಂಬಿ ಹಾಡಿ ಹೊಗಳಿದ್ದರು. ಹಾಗೆ ಎನ್ನುವಷ್ಟರಮಟ್ಟಿಗೆ ಕರಣ್ ಆಚಾರ್ಯರ ಹನುಮಂತನ ಚಿತ್ರ ಮೋಡಿ ಮಾಡಿತ್ತು.
ಈಗ ಕರಣ್ ಆಚಾರ್ಯ ಅವರು ಮತ್ತೆ ನೂತನ ಚಿತ್ರದೊಂದಿಗೆ ಸುದ್ದಿಯಲ್ಲಿದ್ದು, ವಿರಾಟ್ ರಾಮನ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ವೆಕ್ಟರ್ ಆರ್ಟ್ ಮಾದರಿಯಲ್ಲಿ ಕರಣ್ ಆಚಾರ್ಯ ಅವರು ರಾಮನ ಚಿತ್ರ ಬಿಡಿಸಿದ್ದು ಜನಮನಸೂರೆಗೊಳ್ಳುತ್ತಿದೆ.
ಕೇರಳದಲ್ಲಿ ಆರಂಭವಾಗಿರುವ ರಾಮಾಯಣ ಮಾಸಕ್ಕೆ ಶುಭ ಕೋರುವ ಸಲುವಾಗಿ ಆಚಾರ್ಯರು ರಾಮನ ನಾಲ್ಕು ಚಿತ್ರಗಳನ್ನು ಬಿಡಿಸಿದ್ದು, ಕೇಸರಿ ಹಾಗೂ ಹಳದಿ ಬಣ್ಣದಲ್ಲಿ ಮೂಡಿಬಂದಿರುವ ಚಿತ್ರಗಳು ಜನರಿಗೆ ಇಷ್ಟವಾಗಿವೆ. ಅದರಲ್ಲೂ ಬೆನ್ನಲ್ಲಿ ಇರುವ ಬತ್ತಳಿಕೆ ಬಾಣಗಳು, ಕಪ್ಪು ಬಣ್ಣದ ರೇಖೆಗಳು ಎಲ್ಲರಿಗೂ ಇಷ್ಟವಾಗಿವೆ.
Leave A Reply