ನೆಲಮಂಗಲ: ರಸ್ತೆ ಅಪಘಾತದಲ್ಲಿ ಕಟೀಲು ಅರ್ಚಕ ಅಸ್ರಣ್ಣ ಪುತ್ರ ಶ್ರಿನಿಧಿ ಅಸ್ರಣ್ಣ ಮೃತ್ಯು!
Posted On July 25, 2018
ಬೆಂಗಳೂರು: ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ ಅವರ ಪುತ್ರ ಶ್ರೀನಿಧಿ ಅಸ್ರಣ್ಣ (21) ಮತ್ತು ತುಮಕೂರಿನ ಹೋಟೆಲ್ ಉದ್ಯಮಿ ಹರಿ ಭಟ್ ಅವರ ಮೊಮ್ಮಗ ಪ್ರಜ್ವಲ್ (20) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ
ಬೆಂಗಳೂರಿನ ನೆಲಮಂಗಲ ಸಮೀಪ ತಾವರೆಕೆರೆ ಬಳಿ ನಡೆದ ಕಾರು ಅಪಘಾತದಲ್ಲಿ ಇವರಿಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಎದುರಿನ ವಾಹನ ಬ್ರೇಕ್ ಹಾಕಿದಾಗ ಕಾರಿನಲ್ಲಿದ್ದವರೂ ಬ್ರೇಕ್ ಹಾಕಿದ್ದಾರೆ. ಆದರೂ ಹಿಂದಿನಿಂದ ಬಂದ ವಾಹನ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ
ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಇವರು ಇನ್ನಿಬ್ಬರು ಸ್ನೇಹಿತರೊಂದಿಗೆ ಪ್ರಾಜೆಕ್ಟ್ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -
Leave A Reply