• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಮನೋರಂಜನೆ ಸುದ್ದಿ 

ಅರ್ಜಿಯಲ್ಲಿ ಚೆಂದದ ಹುಡುಗಿಯ ಫೋಟೋ ಇದ್ದರೆ ಅವಳಿಗೆ ಕರೆ ಹೋಯಿತು ಎಂದೇ ಲೆಕ್ಕ!!

Ganeshraj Posted On August 3, 2018
0


0
Shares
  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಟಾಚಾರದ ಒಂದು ಕೋರ್ಸ್ ಪ್ರಾರಂಭ ಮಾಡಿದ್ರೆ ಅದನ್ನು ಕಲಿಸಲು ಅಲ್ಲಿ ಭ್ರಷ್ಟಾಚಾರದಲ್ಲಿ ಪಿಎಚ್ ಡಿ ಮಾಡಿರುವ ವ್ಯಕ್ತಿಗಳದ್ದೇ ಒಂದು ತಂಡ ಇದೆ. ಒಂದಕ್ಕಿಂತ ಒಂದು ಹಗರಣ ಮಾಡಿರುವವರೇ ಅಲ್ಲಿ ಇರುವುದರಿಂದ ಇವರ ಮೇಲೆನೆ ಒಂದು ಥಿಸಿಸ್ ಬರೆಯಬಹುದು. ವಿಷಯ: ಭ್ರಷ್ಟಾಚಾರದಲ್ಲಿ ಹೇಗೆ ಪರಿಣಿತಿ ಪಡೆಯುವುದು. ಇದಕ್ಕೆ ಮಾರ್ಗದರ್ಶನ ಅಲ್ಲಿನವರೇ ಮಾಡುವಷ್ಟು ಸಮರ್ಥಿದ್ದಾರೆ. ಅವರಲ್ಲಿ ಒಬ್ಬರು ಪ್ರಶಾಂತ್. ಈ ಮನುಷ್ಯ ಕುಲಪತಿಗಳ ಆಪ್ತ ಸಹಾಯಕ ಹುದ್ದೆಯಲ್ಲಿದ್ದಾರೆ. ಭೈರಪ್ಪನವರ ಸ್ವಜಾತಿ ಭಾಂದವ. ಆದ್ದರಿಂದ ಇವರು ವಿವಿ ಕ್ಯಾಂಪಸ್ ನಲ್ಲಿ ಸ್ವಯಂ ಘೋಷಿತ ಕುಲಪತಿಗಳಂತೆ ವರ್ತಿಸುತ್ತಾರೆ. ತಮ್ಮದೇ ಜಾತಿಯವರು ಕುಲಪತಿಯಾಗಿರುವುದರಿಂದ ತಾವು ಏನು ಮಾಡಿದರೂ ಏನು ಆಗುವುದಿಲ್ಲ, ಯಾರೂ ಏನು ಮಾಡಲು ಸಾಧ್ಯವಿಲ್ಲ ಎನ್ನುವ ಧೈರ್ಯ ಇವರಿಗೆ ಇದೆ. ಈ ಪ್ರಶಾಂತ ಕಂಪ್ಯೂಟರ್ ನಲ್ಲಿ ಭಯಂಕರ ಪಳಗಿದ ವ್ಯಕ್ತಿ. ಇನ್ನು ಯಾರಿಗಾದರೂ ಮಸ್ಕಾ ಹಾಕಬೇಕೆಂದರೆ ಇವರಷ್ಟು ನಯಸ್ಸಾಗಿ ಮಾತನಾಡುವವರು ಭೈರಪ್ಪನವರಿಗೆ ಸಿಗಲಿಕ್ಕಿಲ್ಲ.

ಎಲ್ಲಾ ಪೂರೈಸುವುದು ಇದೇ ಪ್ರಶಾಂತ..

ಮಂಗಳೂರು ವಿವಿಗೆ ಬರುವ ಅತಿಥಿಗಳು ಉಳಿದುಕೊಳ್ಳುವುದಾದರೆ ಅವರಿಗೆ ವಿವಿಯ ಗೆಸ್ಟ್ ಹೌಸಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಬೇಕು. ಆದರೆ ಭೈರಪ್ಪನವರ ಸೂಚನೆ ಮೇರೆಗೆ ಅತಿಥಿಗಳನ್ನು ಮಂಗಳೂರು ಕ್ಲಬ್ ಸಹಿತ ನಗರದ ಪ್ರತಿಷ್ಟಿತ ಹೋಟೇಲ್ ಗಳಲ್ಲಿ ಉಳಿಸಲಾಗುತ್ತದೆ. ಇದರ ಉದ್ದೇಶ ಏನೆಂದರೆ ಭವಿಷ್ಯದಲ್ಲಿ ಭೈರಪ್ಪನವರ ಭ್ರಷ್ಟಾಚಾರದ ಹಗರಣಗಳು ಬಯಲಿಗೆ ಬಂದರೆ ಅಥವಾ ಭೈರಪ್ಪನವರ ಸ್ವ “ಅಭಿವೃದ್ಧಿಗೆ” ಯಾವುದಾದರೂ ಅನುಕೂಲ ಆಗಬೇಕಾದರೆ ಆಗ ಈ ಅತಿಥಿಗಳು ಸಹಾಯಕ್ಕೆ ಬರಲಿ ಎನ್ನುವ ನಿರೀಕ್ಷೆ. ಆದರೆ ಅದಕ್ಕೆ ಭೈರಪ್ಪ ವ್ಯಯಿಸುತ್ತಿರುವುದು ನಮ್ಮ ನಿಮ್ಮ ತೆರಿಗೆ ಹಣ. ಉದಾಹರಣೆಗೆ ಗೆಸ್ಟ್ ಗಳಿಗೆ ಊಟ ಕೊಡುವ ಅವಶ್ಯಕತೆ ಇರುತ್ತದೆ. ಅದನ್ನು ಮಂಗಳೂರು ವಿವಿ ಭರಿಸುತ್ತದೆ. ಆದರೆ ಪ್ರಶಾಂತ್ ಅವರು ಅತಿಥಿಗಳನ್ನು ಖುಷಿ ಮಾಡುವುದಕ್ಕಾಗಿ ಅವರಿಗೆ ಬೇಕಾದಷ್ಟು ಮದ್ಯವನ್ನು ಕೂಡ ಒದಗಿಸುತ್ತಾರೆ. ಆ ಮದ್ಯದ ಬಿಲ್ ಅನ್ನು ಊಟದ ಬಿಲ್ ಎಂದು ಮಾಡಿ ಅದನ್ನು ಮಂಗಳೂರು ವಿವಿಯಿಂದ ತೆಗೆದುಕೊಳ್ಳಲಾಗುತ್ತದೆ. ಇನ್ನು ಇವರು ಊಟದ ಬಿಲ್ಲಿನಲ್ಲಿ ಮಾಡುವ ಮೋಸ ಎಷ್ಟು ನಿಕೃಷ್ಟ ಎಂದರೆ ಬಹುಶ: ಭಗವಂತ ಇವರನ್ನು ಯಾವತ್ತೂ ಕ್ಷಮಿಸಲಾರರು.

ಅರ್ಜಿಯಲ್ಲಿ ಫೋನ್ ನಂಬ್ರ ಮತ್ತು ಚೆಂದದ ಹುಡುಗಿ..

ಪ್ರಶಾಂತ್ ಮಾಡುವ ಕರ್ಮಕಾಂಡ ಇಷ್ಟೇ ಇಲ್ಲ. ಈ ವ್ಯಕ್ತಿ ಮಂಗಳೂರು ವಿವಿಯ ವಿದ್ಯಾರ್ಥಿನಿಯರನ್ನು ಕೂಡ ಹೇಗೆ ತನ್ನ ಚಪಲಕ್ಕೆ ಬಳಸಿಕೊಳ್ಳುತ್ತಾನೆ ಎನ್ನುವುದರ ಬಗ್ಗೆ ರಸವತ್ತಾದ ಕಥೆಗಳಿವೆ. ಎನ್ ಇಟಿ/ ಎಸ್ ಎಲ್ ಇಟಿಯಂತಹ ಪರೀಕ್ಷೆಗಳ ಅರ್ಜಿಗಳನ್ನು ಸ್ಕ್ರೂಟಿನಿ ಮಾಡುವುದು ಇದೇ ಪ್ರಶಾಂತ್. ಎಪ್ಲಿಕೇಶನ್ ಪ್ರಶಾಂತ್ ಕೈಗೆ ಬಂದಾಗ ಇವರು ಏನು ಮಾಡುತ್ತಾರೆ ಎಂದರೆ ಯುವತಿ ಚೆಂದ ಇದ್ದರೆ ಅವಳ ಫೋನ್ ನಂಬ್ರವನ್ನು ತಾವು ನೋಟ್ ಮಾಡಿಟ್ಟುಕೊಳ್ಳುತ್ತಾರೆ. ಹೇಗೂ ಎಪ್ಲಿಕೇಶನ್ ನಲ್ಲಿ ಫೋನ್ ನಂಬ್ರ ಬರೆಯಲೇಬೇಕಾಗಿರುವುದರಿಂದ ಯಾವ ಚೆಂದದ ಹುಡುಗಿ ಕೂಡ ತನಗೆ ಗೊತ್ತಿಲ್ಲದೆ ತನ್ನ ಮೊಬೈಲ್ ನಂಬ್ರವನ್ನು ಪ್ರಶಾಂತ್ ಕೈಗೆ ಕೊಟ್ಟುಬಿಟ್ಟಿರುತ್ತಾಳೆ. ಬಳಿಕ ಅವಳನ್ನು ಕರೆಸಿ ಪುಸಲಾಯಿಸಿ ಅವಳನ್ನು ಮರಳು ಮಾಡುವ ಪ್ರಯತ್ನ ಕೂಡ ಪ್ರಶಾಂತ್ ಮಾಡುತ್ತಾರೆ. ಅನೇಕ ಯುವತಿಯರಿಗೆ ಪ್ರಶಾಂತ್ ಅಸಹ್ಯ ಬೇಡಿಕೆಯನ್ನು ಇಟ್ಟಿದ್ದಾರೆ.
ಇತ್ತೀಚೆಗೆ ನ್ಯೂಸ್ 18 ರಲ್ಲಿ ಸರ್ಜಿಕಲ್ ಸ್ರ್ಟೈಕ್ ಎನ್ನುವ ಕಾರ್ಯಕ್ರಮ ಬಂದಿತ್ತಲ್ಲ. ಅದರ ನಿರೂಪಕಿಯಾಗಿರುವ ವಿಜಯಲಕ್ಷ್ಮಿ ಶಿಬರೂರು ಅವರು ವಿವಿಯ ರಿಜಿಸ್ಟ್ರಾರ್ ಕೊಠಡಿಯಲ್ಲಿ ಕುಳಿತು ರಿಜಿಸ್ಟ್ರಾರ್ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಈ ಪ್ರಶಾಂತ್ ಏನು ಮಾಡಿದ್ದಾರೆ ಎಂದರೆ ವಿಜಯಲಕ್ಷ್ಮಿ ಮತ್ತು ರಿಜಿಸ್ಟ್ರಾರ್ ಮಾತನಾಡುತ್ತಿರುವ ಫೋಟೋ ಕ್ಲಿಕ್ಕಿಸಿದ್ದಾರೆ. ಅದನ್ನು ನೇರವಾಗಿ ಭೈರಪ್ಪನವರಿಗೆ ತಲುಪಿಸಿದ್ದಾರೆ. ಇನ್ನು ಭೈರಪ್ಪನವರ ಸಮಸ್ತ ಭ್ರಷ್ಟಾಚಾರದ ವಿಷಯವನ್ನು ನ್ಯೂಸ್ 18 ಗೆ ನೀಡಿದ್ದು ರಿಜಿಸ್ಟ್ರಾರ್ ಎಂದು ಸುಳ್ಳು ಸುದ್ದಿಯನ್ನು ಭೈರಪ್ಪನವರಿಗೆ ತಿಳಿಸಿದ್ದಾರೆ. ಯಾವಾಗ ಪ್ರಪಂಚದ ಮೂಲೆ ಮೂಲೆಯಲ್ಲಿ ಇರುವವರಿಗೂ ನ್ಯೂಸ್ 18 ಅವರ ಸರ್ಜಿಕಲ್ ಸ್ಟ್ರೈಕ್ ಕಾರ್ಯಕ್ರಮದ ಮೂಲಕ ಭೈರಪ್ಪ ಮತ್ತು ತಂಡ ಅಸಲಿ ಮುಖ ಗೊತ್ತಾಯಿತೋ, ತನಿಖೆಯಾದರೆ ತನ್ನ ಅಷ್ಟೂ ಹಗರಣ ಹೊರಗೆ ಬರುತ್ತದೆ ಎಂದರೆ ಹೆದರಿದ ಭೈರಪ್ಪ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮುಂದೆ ಹೇಳಿದ್ದು ಏನು ಗೊತ್ತೆ? ಅದನ್ನು ನಾಳೆ ತಿಳಿಯೋಣ!

0
Shares
  • Share On Facebook
  • Tweet It




Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Ganeshraj July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
Ganeshraj July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search