• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸಚಿವರು ಒಂದೂವರೆ ಗಂಟೆ ತಡವಾಗಿ ಬಂದದ್ದು ಯಾರೂ ಹೇಳುವುದೇ ಇಲ್ಲ!

Hanumantha Kamath Posted On August 6, 2018
0


0
Shares
  • Share On Facebook
  • Tweet It

ಶನಿವಾರ ಮಂಗಳೂರಿನಲ್ಲಿ ಮೂಡಾ ಅದಾಲತ್ ನಡೆಯಿತು. ಉರ್ವಾಸ್ಟೋರ್ ಸನಿಹದಲ್ಲಿರುವ ಮಂಗಳೂರು ನಗರಾಭಿವೃದ್ಧಿ ಕಚೇರಿಯಲ್ಲಿ ಮೂಡಾ ಅದಾಲತ್ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಅವರು ಅಲ್ಲಿ ಏಳು ಗಂಟೆಗಳ ತನಕ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಸುದ್ದಿಯಾಯಿತು. ಕೆಲವು ಸಚಿವರ ಆಪ್ತ ವರದಿಗಾರರು ಅದನ್ನು ದೊಡ್ಡದಾಗಿ ಸುದ್ದಿ ಮಾಡಿರಬಹುದು. ಆದರೆ ಯಾರೂ ಕೂಡ ಬೆಳಿಗ್ಗೆ ನಡೆದ ವಿದ್ಯಮಾನಗಳನ್ನು ಬರೆದಿಲ್ಲ. ಅದನ್ನು ನಾನು ಬರೆಯುತ್ತಿದ್ದೇನೆ. ಮಾಧ್ಯಮಗಳಲ್ಲಿ ವರದಿಯಾದಂತೆ, ಸಚಿವರ ಬೆಂಬಲಿಗರು ಅಲ್ಲಲ್ಲಿ ಫ್ಲೆಕ್ಸ್ ಹಾಕಿದಂತೆ ಸಭೆ ಬೆಳಿಗ್ಗೆ ಹತ್ತು ಗಂಟೆಗೆ ನಿಗದಿಯಾಗಿತ್ತು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು, ಅಹವಾಲುಗಳನ್ನು ತೆಗೆದುಕೊಂಡು ಬೆಳಿಗ್ಗೆ ಹತ್ತು ಗಂಟೆಗೆ ಅಲ್ಲಿ ಬಂದಿದ್ದರು. ಆದರೆ ಯುಟಿ ಖಾದರ್ ಸಾಹೇಬ್ರು ಬಂದದ್ದು ಎಷ್ಟೊತ್ತಿಗೆ ಗೊತ್ತಾ? ಬರೊಬ್ಬರಿ ಹನ್ನೊಂದುವರೆ ಗಂಟೆಗೆ. ಅವರು ಬರುವ ಮೊದಲೇ ಅಲ್ಲಿ ನೆರೆದಿದ್ದ ಅಸಂಖ್ಯಾತ ಜನ ಗೇಟಿನ ಬಳಿ ಕುಳಿತು ಪ್ರತಿಭಟನೆ ಮಾಡಿಯಾಗಿತ್ತು. ಒಬ್ಬ ಜನಪ್ರತಿನಿಧಿಯ ಮುಖ್ಯ ಜವಾಬ್ದಾರಿ ಎಂದರೆ ಸಮಯಪಾಲನೆ. ಅದನ್ನು ಜನಪ್ರತಿನಿಧಿಗಳು ನಿರ್ವಹಿಸದಿದ್ದರೆ ನಂತರ ಎಷ್ಟು ಹೊತ್ತು ಕುಳಿತುಕೊಂಡರೂ ಅದರಿಂದ ಹೋದ ಸಮಯ ಮತ್ತೆ ಬರುತ್ತದಾ? ಹೀಗೆ ಪ್ರತಿ ಕಾರ್ಯಕ್ರಮಕ್ಕೂ ಇಷ್ಟಿಷ್ಟು ಸಮಯ ತಡ ಮಾಡಿ ಹೋದರೆ ಆ ಇಡೀ ದಿನದ ಎಲ್ಲರಿಗೂ ತೊಂದರೆ ಅಲ್ವಾ? ಯಾಕೆಂದರೆ ಒಂದೊಂದು ಇಂತಹ ಸಾರ್ವಜನಿಕ ಸಭೆ, ಅದಾಲತ್ ಗಳು ಎಂದರೆ ಎಷ್ಟೋ ಜನ ತಮ್ಮ ಕೆಲಸಗಳನ್ನು ಪಕ್ಕಕ್ಕೆ ಇಟ್ಟು ಅಲ್ಲಿ ಆದಷ್ಟು ಬೆಳಿಗ್ಗೆನೆ ಧಾವಿಸಿ ಬಂದಿರುತ್ತಾರೆ. ಜನಪ್ರತಿನಿಧಿಗಳಿಗಾಗಿ ಬಾಗಿಲ ಬಳಿ ಕುಳಿತು ಕಾಯುತ್ತಾ ಇರುತ್ತಾರೆ. ಎಲ್ಲರಿಗೂ ಸಚಿವರ ಆಪ್ತರಿಗೆ ಕೇಳಿ ಅವರು ಬಂದ ಮೇಲೆ ಅಲ್ಲಿ ಬರಲು ಆಗುವುದಿಲ್ಲ. ಜನಪ್ರತಿನಿಧಿಗಳು ತಡವಾಗಿ ಬಂದರೆ ಎಲ್ಲರ ಸಮಯ ಪೋಲು. ಇನ್ನು ಅದಾಲತ್ ಎಂದರೆ ಏನು? ಎಲ್ಲರ ಎದುರು ಸಾರ್ವಜನಿಕವಾಗಿ ನಡೆಯುವಂತಹ ಕಾರ್ಯಕ್ರಮ. ಆದರೆ ಇದು ಹಾಗೆ ನಡೆಯಲಿಲ್ಲ. ಒಬ್ಬೊಬ್ಬರನ್ನೇ ಕರೆದು ಗುಪ್ತವಾಗಿ ಸಭೆ ಮಾತನಾಡುವ ಅಗತ್ಯ ಏನಿತ್ತು? ನಾನು ಕೂಡ ಮೂಡಾ ಅದಾಲತ್ ಗೆ ಹೋಗಿದ್ದೆ.

ಬಿಜೆಪಿ ಇದ್ದಾಗ ಒಂದು, ಕಾಂಗ್ರೆಸ್ ಬಂದ ಮೇಲೆ ಮತ್ತೊಂದು ನಿಯಮ…

ನನ್ನ ಒಂದಿಷ್ಟು ಅಂಶಗಳನ್ನು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಸಚಿವರ, ಶಾಸಕರ, ಜಿಲ್ಲಾಧಿಕಾರಿಗಳ, ಮೂಡಾ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಅದರಲ್ಲಿ ಪ್ರಥಮವಾಗಿ ನಾನು ಅವರ ಸಮಕ್ಷಮ ಇಟ್ಟ ಸಮಸ್ಯೆ ಏನೆಂದರೆ ಪಕ್ಷಗಳು ಅಧಿಕಾರಕ್ಕೆ ಬಂದಂತೆ ರೆವಿನ್ಯೂ ಇಲಾಖೆಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಅದರಿಂದ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆ.
ಹಿಂದೆ ಭಾರತೀಯ ಜನತಾ ಪಾರ್ಟಿಯ ಸರಕಾರ ಅಧಿಕಾರದಲ್ಲಿದ್ದಾಗ ಭೂಪರಿವರ್ತನೆ ಆಗಿರುವ 99 ಸೆಂಟ್ಸ್ ಜಮೀನಿಗೆ ದಂಡನಾ ಶುಲ್ಕ ವಿಧಿಸಿ ಉಪವಿಭಜನೆ ಮಾಡಲು ಅವಕಾಶ ಇತ್ತು. ನಂತರ ಕಾಂಗ್ರೆಸ್ ಸರಕಾರ ಬಂತು. ನಿಯಮ ಬದಲಾಯಿತು. 25 ಸೆಂಟ್ಸ್ ತನಕ ಮಾತ್ರ ವಿಭಜನೆ ಮಾಡಲು ಸಾಧ್ಯ ಎಂಬ ಆದೇಶ ಜಾರಿಗೊಳಿಸಲಾಯಿತು. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಅದು ಹೇಗೆ ಎನ್ನುವುದನ್ನು ವಿವರಿಸುತ್ತೇನೆ. ಒಬ್ಬ ತಂದೆಗೆ ಒಂದೆರಡು ಎಕ್ರೆ ಜಮೀನಿದ್ದು ಅದನ್ನು ಅವರ ಐದು ಮಕ್ಕಳಿಗೆ ಪಾಲು ಮಾಡಿ ನೀಡುವಾಗ ರಸ್ತೆಗೆ ಒಂದಿಪ್ಪತ್ತು ಸೆಂಟ್ಸ್ ಹೋಗಿ ಒಬ್ಬೊಬ್ಬರಿಗೆ 35 ಸೆಂಟ್ಸ್ ಬರಬಹುದು. ಅವರ ಸ್ವಂತಕ್ಕೆ 10 ಸೆಂಟ್ಸ್ ಜಾಗ ಇಟ್ಟುಕೊಂಡು ಉಳಿದ 25 ಸೆಂಟ್ಸ್ ಮಾರಾಟ ಮಾಡಲು ಈಗ ಇರುವ ಕಾನೂನಿನಲ್ಲಿ ಅವಕಾಶ ಇಲ್ಲ. ಬಡವರು ಸ್ವಂತ ಜಮೀನು ಇದ್ದು ಕೂಡ ಅಗತ್ಯಕ್ಕೆ ಮಾರಾಟ ಮಾಡುವ ಅವಕಾಶ ಇಲ್ಲ. ನೀವು ಮಲ್ಟಿ ಸೈಟ್ ಮಾಡಿ ಹೇಳುತ್ತಾರೆ. ಮಲ್ಟಿ ಸೈಟ್ ಮಾಡಲು ಮಾತ್ರ ಮಾಡಲು ಅವಕಾಶವಿರುತ್ತದೆ. ಇದು ಅವೈಜ್ಞಾನಿಕ ನಿಯಮ. ಇದರಿಂದ ಕುಟುಂಬದ ಜಮೀನು ಯಾರಿಗೆಲ್ಲ ವಿಭಾಗ ಪತ್ರದ ಮೂಲಕ ಬರುವ ಜಮೀನುಗಳಿಗೆ ತುಂಬಾ ತೊಂದರೆಯಾಗುತ್ತದೆ. ನಮ್ಮ ಸರಕಾರಗಳು ಇರುವುದು ಜನರ ಉಪಯೋಗಕ್ಕೆ ವಿನ: ಬಿಲ್ಡರ್ ಗಳದ್ದು ಅಲ್ಲ. ಆದ್ದರಿಂದ ಜನರಿಗೆ ಉಪಯುಕ್ತವಾಗುವಂತಹ ಯೋಜನೆಗಳನ್ನು, ನಿಯಮಗಳನ್ನು ಜಾರಿಗೆ ತರಬೇಕು. ಇದನ್ನು ಸಚಿವ ಯುಟಿ ಖಾದರ್ ಅವರ ಗಮನಕ್ಕೆ ತಂದೆ. ಹಿಂದೆ ಬಿಜೆಪಿ ಸರಕಾರ ಇದ್ದಾಗ ಮಾಡಿದ್ದ ಆದೇಶವನ್ನೇ ಈಗ ಮತ್ತೆ ಜಾರಿಗೆ ತರಬೇಕು ಎಂದು ಸಾಮಾನ್ಯ ಜನರ ಪರವಾಗಿ ಕೇಳಿಕೊಂಡಿದ್ದೇನೆ. ಪರಿಶೀಲಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ. ನೋಡ್ಬೇಕು, ಏನು ಆಗುತ್ತದೆ ಅಂತ.

ಕೆರೆ ಅಭಿವೃದ್ಧಿ ಒಂದಾದರೂ ತೋರಿಸಿ…

ಇನ್ನೂ ಮೂಡಾದಲ್ಲಿ ಕೆರೆ ಅಭಿವೃದ್ಧಿ ಶುಲ್ಕ ಎಂದು ಕೋಟಿಗಟ್ಟಲೆ ಹಣ ಇದೆ. ಇವರು ಇಲ್ಲಿಯವರೆಗೆ ಮಂಗಳೂರಿನ ಯಾವುದೇ ಕೆರೆಯನ್ನು ಅಭಿವೃದ್ಧಿ ಮಾಡಿದ ಉದಾಹರಣೆ ಇಲ್ಲ. ಹಾಗಂತ ಇವರು ಕೆರೆ ಅಭಿವೃದ್ಧಿ ಶುಲ್ಕವನ್ನು ವಸೂಲಿ ಮಾಡದೇ ಬಿಡುವುದಿಲ್ಲ. ಇದರಿಂದ 2,3,5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟುವವರಿಗೆ ತುಂಬಾ ತೊಂದರೆಯಾಗುತ್ತದೆ. ಈ ಬಗ್ಗೆ ಕೂಡ ಸಚಿವರೊಂದಿಗೆ, ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮೂಡಾದ ಒಳಗಿರುವ ವಿನ್ಯಾಸ ನಕ್ಷೆಯ ಸಮಸ್ಯೆಯ ಬಗ್ಗೆ ಕೂಡ ಹೇಳಿದ್ದೇನೆ. ಆ ಕುರಿತು ನಾಳೆ ಬರೆಯುತ್ತೇನೆ.

0
Shares
  • Share On Facebook
  • Tweet It


MUDA UT Khader Mangaluru


Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Hanumantha Kamath December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Hanumantha Kamath December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search