• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮೂಡಾದಲ್ಲಿ ಸಿನಿಯಾರಿಟಿ ಪ್ರಕಾರ ಕಡತಗಳು ವಿಲೇವಾರಿ ಆಗಬೇಕು, ಮಧ್ಯವರ್ತಿಗಳ ಮೂಲಕ ಅಲ್ಲ!!

Hanumantha Kamath Posted On August 8, 2018
0


0
Shares
  • Share On Facebook
  • Tweet It

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇರುವ ಬಹಳ ದೊಡ್ಡ ಮೈನಸ್ ಅಂದರೆ ಅಲ್ಲಿರುವ ಬ್ರೋಕರ್ ಗಳ ಹಾವಳಿ

ನನ್ನ ಮನವಿಯಲ್ಲಿ ನಾನು ಬರೆದಿರುವ ಪಾಯಿಂಟ್ ಯಾವುದೆಂದರೆ ರೈಲ್ವೆ ಇಲಾಖೆಗೆ ಸಂಬಂಧಪಟ್ಟಂತೆ ಇರುವ ಜಾಗಕ್ಕೆ ಹೊಂದಿಕೊಂಡಂತೆ ಮನೆ ಕಟ್ಟಿದವರ ಸಮಸ್ಯೆಯ ಬಗ್ಗೆ. ಇಂತವರ ಸಮಸ್ಯೆನೆ ಬೇರೆ.

ಈ ರೈಲ್ವೆ ಗಡಿಯ ಆಚೆ ಮೊದಲಿನಿಂದಲೂ ಅಂದರೆ 20-30 ವರ್ಷಗಳಿಗಿಂತಲೂ ಹಿಂದಿನಿಂದಲೂ ಮನೆ ಕಟ್ಟಿ ವಾಸ ಮಾಡುವವರು ಇದ್ದಾರೆ. ಅವರಿಗೆ ಯಾವತ್ತಾದರೂ ಅಗತ್ಯ ಬಿದ್ದಾಗ ಬ್ಯಾಂಕಿನಿಂದ ಸಾಲ ಬೇಕಾಗುತ್ತದೆ ಎಂದು ಇಟ್ಟುಕೊಳ್ಳೋಣ. ಉದಾಹರಣೆಗೆ ಮಗಳ ಮದುವೆಗೋ ಅಥವಾ ಮಗನ ಉನ್ನತ ಶಿಕ್ಷಣಕ್ಕೋ ಹಣ ಬೇಕಾದಾಗ ಅವರು ಬ್ಯಾಂಕಿನಲ್ಲಿ ಜಾಗವನ್ನು ಅಡವಿಟ್ಟು ಸಾಲ ಪಡೆಯಲು ಹೋಗುತ್ತಾರೆ. ಆದರೆ ಅನೇಕ ಸಂದರ್ಭದಲ್ಲಿ ಅವರದ್ದು ಏಕನಿವೇಶನ ಆಗಿರುವುದಿಲ್ಲ. ಅದಕ್ಕೆ ಅವರು ಮಹಾನಗರ ಪಾಲಿಕೆಯಿಂದ ಏಕ ನಿವೇಶನಕ್ಕೆ ಅರ್ಜಿ ಹಾಕಿರುತ್ತಾರೆ. ಆದರೆ ಏಕನಿವೇಶನ ಮಾಡಿಕೊಡಬೇಕಾದರೆ ಅವರಿಗೆ ರೈಲ್ವೆ ಇಲಾಖೆಯಿಂದ ನಿರಪೇಕ್ಷಣಾ ಪತ್ರ ತನ್ನಿ ಎಂದು ಹೇಳಲಾಗುತ್ತದೆ. ರೈಲ್ವೆ ಇಲಾಖೆಯವರು ನಿರಪೇಕ್ಷಣಾ ಪತ್ರ ಕೊಡುವುದೇ ಇಲ್ಲ. ಇದರಿಂದ ಯಾವುದೇ ತಪ್ಪು ಮಾಡದ ವ್ಯಕ್ತಿಗಳು ತಮ್ಮ ಅಗತ್ಯಕ್ಕೆ ಸಾಲ ತೆಗೆದುಕೊಳ್ಳಲು ಕೂಡ ಆಗದ ನಿಯಮ ಈಗ ಇದೆ. ಇದನ್ನು ಸಚಿವ ಯುಟಿ ಖಾದರ್ ಹಾಗೂ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಗಮನಕ್ಕೆ ಲಿಖಿತ ಮೂಲಕ ತಂದಿದ್ದೇನೆ.

ರೈಲ್ವೆ ಇಲಾಖೆಯ ಹೆಸರಿನಲ್ಲಿ ಸತಾಯಿಸಬೇಡಿ…

ಮೊದಲೇ ಲೈಸೆನ್ಸ್ ಮಾಡಿ ಮನೆ ಕಟ್ಟಿದವರಿಗೆ ಏಕನಿವೇಶನ ವಸತಿ ವಿನ್ಯಾಸ ನೀಡಲು ರೈಲ್ವೆ ಇಲಾಖೆಯಿಂದ ಎನ್ ಒಸಿ ಕೇಳುವುದು ತಪ್ಪು. ಬೇಕಾದರೆ ಮಹಡಿ ಕಟ್ಟಲು ಹೊರಟಾಗ ಅಂತವರಿಂದ ರೈಲ್ವೆ ಇಲಾಖೆಯಿಂದ ನಿರಪೇಕ್ಷಣಾ ಪತ್ರ ತರಲು ಹೇಳಿದರೆ ರವಾಗಿಲ್ಲ, ಹಾಗೆ ಖಾಲಿ ಜಮೀನು ಇರುವಾಗ ಅದನ್ನು ಏಕನಿವೇಶನ ಮಾಡುವುದಾದರೆ ಆಗಲೂ ಬೇಕಾದರೆ ನಿರಪೇಕ್ಷಣಾ ಪತ್ರ ತರಲು ಹೇಳಿದರೆ ತಪ್ಪಿಲ್ಲ. ಆದರೆ ಕಾರಣಗಳನ್ನು ಸರಿಯಾಗಿ ಕೇಳದೆ ರೈಲ್ವೆ ಬಾರ್ಡರ್ ಹತ್ತಿರದ ಜಾಗ ಎಂದ ಕೂಡಲೇ ರೈಲ್ವೆ ಇಲಾಖೆಯಿಂದ ನಿರಪೇಕ್ಷಣಾ ಪತ್ರ ತನ್ನಿ ಎನ್ನುವುದು ಸರಿಯಲ್ಲ ಎಂದು ಮನವರಿಕೆ ಮಾಡಲು ಯತ್ನಿಸಿದ್ದೇನೆ. ಇದಕ್ಕೆ ಜಿಲ್ಲಾಧಿಕಾರಿಗಳು “ಇದು ರೈಲ್ವೆ ಇಲಾಖೆ ಮತ್ತು ನಮ್ಮ ನಡುವಿನ ಪ್ರಶ್ನೆಯಾಗಿರುವುದರಿಂದ ಅವರಲ್ಲಿ ಪತ್ರ ವ್ಯವಹಾರ ಮಾಡಿ ಒಂದು ಅಂತಿಮ ನಿರ್ಧಾರಕ್ಕೆ ಬರುತ್ತೇವೆ” ಎಂದು ತಿಳಿಸಿದ್ದಾರೆ. ಈ ಸಮಸ್ಯೆ ಪರಿಹಾರವಾದರೆ ಅನೇಕ ಜನರು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ.

ಇನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇರುವ ಬಹಳ ದೊಡ್ಡ ಮೈನಸ್ ಅಂದರೆ ಅಲ್ಲಿರುವ ಬ್ರೋಕರ್ ಗಳ ಹಾವಳಿ. ಯಾವುದೇ ವಾಹಿನಿಯ ನೇರಪ್ರಸಾರದಲ್ಲಿ ಮೂಡಾ ಆಯುಕ್ತರನ್ನೊ ಅಥವಾ ಅಧ್ಯಕ್ಷರನ್ನೊ ಕೂರಿಸಿದರೆ ಹತ್ತರಲ್ಲಿ ಏಳು ಜನ ಹೇಳುವುದು ಅಲ್ಲಿ ಮಧ್ಯವರ್ತಿಗಳನ್ನು ನಿಯಂತ್ರಿಸಬೇಕು ಎನ್ನುವುದು. ಅನೇಕ ಬಾರಿ ಮಧ್ಯವರ್ತಿಗಳ ಕೆಲಸ ಮೂಡಾದಲ್ಲಿ ಬೇಗ ಆಗುತ್ತದೆ. ಆದ್ದರಿಂದ ನನ್ನ ಮನವಿ ಏನಿತ್ತು ಎಂದರೆ ಸಿನಿಯಾರಿಟಿ ಪ್ರಕಾರ ಕಡತಗಳು ಹೋಗಬೇಕು. ಬ್ರೋಕರ್ ಕಡೆಯಿಂದ ಬಂದ ಫೈಲ್ ಎಂದು ಅದನ್ನು ಬೇಗ ಮಾಡಿಕೊಟ್ಟರೆ ಉಳಿದವರಿಗೆ ಅನ್ಯಾಯವಾಗುತ್ತದೆ.

ಎಲ್ಲರಿಂದಲೂ ರಸ್ತೆಗೆ ಜಾಗ ಬಿಟ್ಟುಕೊಡಿ ಎಂದರೆ…

ಮೂಡಾದಲ್ಲಿ ಜನಸಾಮಾನ್ಯರು ಐದು, ಹತ್ತು ಸೆಂಟ್ಸ್ ಜಾಗವನ್ನು ಏಕನಿವೇಶನ ಮಾಡಲು ಹೋದಾಗ ಟಿಪಿಎಂನವರು ಏಕನಿವೇಶನ ಮಾಡಲು ನಿಮ್ಮ ಮನೆಯಿಂದ ರಸ್ತೆ ಮುಂದುವರೆಸಬೇಕು. ರಸ್ತೆಗೆ ಜಾಗ ಬಿಟ್ಟುಕೊಡಿ ಎನ್ನುತ್ತಾರೆ. ಕೆಲವರ ಮನೆಯಿಂದ ರಸ್ತೆ ಮುಕ್ತಾಯಗೊಳ್ಳುವ ಹಂತದಲ್ಲಿರುತ್ತದೆ. ಅಂತಹ ಮನೆಗಳಿಂದ ರಸ್ತೆಯನ್ನು ಮುಂದುವರೆಸುವ ಅಗತ್ಯ ಇರುವುದಿಲ್ಲ. ಹಿಂದುಗಡೆಯಿರುವ ಜಮೀನಿಗೆ ಬೇರೆ ಪರ್ಯಾಯ ರಸ್ತೆ ಇರುತ್ತದೆ. ಆದರೆ ಟಿಪಿಎಂನವರು ಈ ಮನೆಯವರಿಗೂ ಜಾಗ ಬಿಟ್ಟುಕೊಡಬೇಕು ಎಂದು ಒತ್ತಡ ಹೇರುತ್ತಾರೆ. ಇದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತದೆ. ಇರುವ ಐದು ಸೆಂಟ್ಸ್  ಜಮೀನಿನಲ್ಲಿ ರಸ್ತೆ ಮುಂದುವರೆಸಿದರೆ ಮನೆ ಕಟ್ಟಲು ಉಳಿಯುವ ಜಾಗವಾದರೂ ಎಷ್ಟು?. ಹಿಂದುಗಡೆ ಇರುವ ಜಮೀನಿಗೆ ರಸ್ತೆಯೇ ಇಲ್ಲವೆಂದರೆ ರಸ್ತೆ ಮುಂದುವರಿಸಲು ಒತ್ತಡ ಹಾಕುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದೆ. ಅದಕ್ಕೆ ಸಚಿವ ಯುಟಿ ಖಾದರ್ ಮತ್ತು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಏನು ಹೇಳಿದ್ದಾರೆ ಎಂದರೆ ” ಅಂತಹ ಸಮಸ್ಯೆ ಇರುವ ಸೈಟ್ ಗಳಿಗೆ ಸ್ವತ: ಮೂಡಾ ಆಯುಕ್ತರೇ ಹೋಗಿ ಪರಿಶೀಲಿಸುವಂತೆ ಮಾಡಲಾಗುವುದು. ಒಂದು ವೇಳೆ ಜಾಗ ರಸ್ತೆಗೆ ಬಿಟ್ಟುಕೊಡುವ ಅವಶ್ಯಕತೆ ಇಲ್ಲದಿದ್ರೆ ಅದನ್ನು ಕ್ಯಾನಲ್ಸ್ ಮಾಡಿ ಸಿಂಗಲ್ ಸೈಟ್ ಅನುಮತಿ ನೀಡಲಾಗುವುದು” ಎಂದಿದ್ದಾರೆ.
ಇನ್ನು ನಾನು ಮನವಿಯಲ್ಲಿ ಕೊಟ್ಟ ಏಳನೇ ಅಂಶ ಯಾವುದೆಂದರೆ ಭೂಪರಿವರ್ತನೆ ಆಗಿರುವ ಜಮೀನನ್ನು ವಿಭಜನೆಗೊಳಿಸಿ ಪಡಕೊಳ್ಳುವ ಜಮೀನಿಗೆ ಈಗ ಮೂರು ಸೆಂಟ್ಸ್ ನವರೆಗೆ ದಂಡನಾ ಶುಲ್ಕ ಪಾವತಿಸಲು ಇರುವುದಿಲ್ಲ. ಐದು ಸೆಂಟ್ಸ್ ವರೆಗೆ ದಂಡನಾ ಶುಲ್ಕ ಇಲ್ಲದಂತೆ ಆದೇಶ ನೀಡಬೇಕು ಎಂದು ಕೇಳಿಕೊಂಡಿದ್ದೇನೆ. ಸದ್ಯಕ್ಕೆ ಎಲ್ಲವೂ ಪರಿಶೀಲನೆಯ ಹಂತದಲ್ಲಿರುವಂತೆ ಕಾಣಿಸುತ್ತದೆ.
ಇದರೊಂದಿಗೆ ಇನ್ನು ಕೆಲವು ಅಂಶಗಳನ್ನು ಕೂಡ ಸಚಿವರ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಮೂಡಾದ ಅಧಿಕಾರಿಗಳ ಕಚೇರಿ ಟೈಮಿಂಗ್, ಅವರು ಯಾವ ಹೊತ್ತಿಗೆ ಬರುತ್ತಾರೆ, ಹೋಗುತ್ತಾರೆ ಹೀಗೆ, ಇದನ್ನೆಲ್ಲಾ ನಾಳೆ ಬರೆದು ಮೂಡಾ ಅದಾಲತ್ ಗೆ ಸದ್ಯ ವಿರಾಮ ಹಾಕಲಿದ್ದೇನೆ. ಮುಂದಿನ ಮೂಡಾ ಅದಾಲತ್ ಕರೆಯುವ ಒಳಗೆ ಇದನ್ನೆಲ್ಲ ಸರಿ ಮಾಡಿಕೊಡದಿದ್ದರೆ ಆಗ ಇವರ ಅದಾಲತ್ ಕೇವಲ ಪ್ರಚಾರಕ್ಕೆ ಮಾತ್ರವೋ ಅಥವಾ ಜನರ ಸಮಸ್ಯೆ ಕೂಡ ಸುಧಾರಿಸುತ್ತದೆಯೋ ಎಂದು ಗೊತ್ತಾಗುತ್ತದೆ!

0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
Hanumantha Kamath July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Hanumantha Kamath July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search