ಗೋರಕ್ಷಕರ ಹಿಂಸೆ ಬಗ್ಗೆ ಮಾತನಾಡುವವರು ಗೋಭಕ್ಷಕರ ಈ ದೌರ್ಜನ್ಯದ ಬಗ್ಗೆ ಏನೆನ್ನುತ್ತಾರೆ?
ಬೆಂಗಳೂರು: ಗೋರಕ್ಷಣೆ ಹೆಸರಲ್ಲಿ ಯಾವುದೇ ಹಿಂಸೆ ತೊಡಗಬಾರದು, ಹೀಗೆ ಮಾಡುವುದು ಸಮಾಜವಿರೋಧಿ ಕೃತ್ಯ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಹೀಗಿದ್ದರೂ, ಪ್ರತಿಪಕ್ಷಗಳು ಸೇರಿ ಹಲವು ಬುದ್ಧಿಜೀವಿಗಳು, ಎಡಬಿಡಂಗಿಗಳು ನರೇಂದ್ರ ಮೋದಿಯವರು ಗೋರಕ್ಷಣೆ ಹೆಸರಲ್ಲಿ ನಡೆಯುವ ಹಿಂಸೆಯನ್ನು ಬೆಂಬಲಿಸುತ್ತಿದ್ದಾರೆ, ಆ ಮೂಲಕ ದಲಿತರು ಹಾಗೂ ಮುಸ್ಲಿಮರ ಹತ್ಯೆಗೆ ಪ್ರಚೋದಿಸುತ್ತಿದ್ದಾರೆ ಎಂದು ಬೊಬ್ಬೆ ಹಾಕುತ್ತಾರೆ.
ಆದರೆ ಈ ರಾಜಕಾರಣಿಗಳು, ಬುದ್ಧಿಜೀವಿಗಳು, ಪ್ರಗತಿಪರರು, ಜೀವಪರರು ಗೋಹತ್ಯೆ ಮಾಡುವವರು, ಗೋವುಗಳ ಅಕ್ರಮ ಸಾಗಣೆಯಲ್ಲಿ ತೊಡಗಿರುವವರು, ಗೋಮಾಂಸ ದಂಧೆಯಲ್ಲಿ ತೊಡಗಿರುವವರ ಹಿಂಸೆ ಬಗ್ಗೆ ಒಂದೇ ಒಂದು ಮಾತನಾಡುವುದಿಲ್ಲ. ಗೋಮಾಂಸ ಅಕ್ರಮ ದಂಧೆ ನಿಲ್ಲಿಸಿ, ಹಿಂಸೆಯಲ್ಲಿ ತೊಡಗಬೇಡಿ ಎಂದು ಗುಟುರು ಹಾಕುವುದಿಲ್ಲ, ತುಟಿಕ್ ಪಿಟಿಕ್ ಎನ್ನುವುದಿಲ್ಲ.
ಇದಕ್ಕೆ ಸಾಕ್ಷಿಯಾಗಿ ಕರ್ನಾಟಕದ ರಾಮನಗರದಲ್ಲೇ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿರುವ ಕುರಿತು ವರದಿ ಮಾಡಲು ಹೋದ ಇಂಡಿಯಾ ಟುಡೇ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ಹೌದು, ರಾಮನಗರ ಜಿಲ್ಲೆ ಕೋಡಿಪಾಳ್ಯದ ಕಸಾಯಿಖಾನೆಯೊಂದರಲ್ಲಿ 200 ಗೋವಿನ ಕರುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ. ಈ ಕುರಿತು ಮಾಹಿತಿ ಪಡೆದ ಪ್ರಾಣಿ ಪ್ರೇಮಿಗಳು ಹಾಗೂ ಕುಡೂರು ಪೊಲೀಸರು ಕಸಾಯಿಖಾನೆಗೆ ದಾಳಿ ಮಾಡಿದ್ದಾರೆ.
ಈ ವೇಳೆ ಸ್ಥಳದಲ್ಲೇ ಇದ್ದ ಇಂಡಿಯಾ ಟುಡೇ ವರದಿಗಾರ ಎಲ್ಲವೂ ವೀಡಿಯೋ ಮಾಡುತ್ತಿದ್ದರು. ವರದಿ ಮಾಡುತ್ತಿದ್ದರು. ಇದರಿಂದ ಕುಪಿತಗೊಂಡ ಕಸಾಯಿಖಾನೆ ನಡೆಸುತ್ತಿದ್ದವರು ವರದಿಗಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೊನೆಗೆ ಪೊಲೀಸರು ಮಧ್ಯಸ್ಥಿಕೆ ವಹಿಸಿ ಪ್ರಕರಣ ಬಗೆಹರಿಸಿದ್ದಾರೆ. ಅಲ್ಲದೆ ಸುಮಾರು 71 ಕರುಗಳನ್ನು ರಕ್ಷಿಸಿದ್ದಾರೆ.
Leave A Reply