• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇಸ್ಲಾಂ ಧರ್ಮ- ಹಿಂದೂ ದೃಷ್ಟಿಕೋನದಿಂದ…..

TNN Correspondent Posted On July 25, 2017


  • Share On Facebook
  • Tweet It

“ಇಸ್ಲಾಂ”- ಶಾಂತಿ ಮತ್ತು ಶರಣಾಗತಿ, ಜಗತ್ತಿನ ಶಬ್ದಕೋಶಗಳು ಸೂಚಿಸುವ ಭಾಷಾರ್ಥ. ಹಾಗೆ ಯಾರು ಭಗವಂತನ ಇಚ್ಚೆಗೆ ಸಂಪೂರ್ಣ ಶರಣಾಗತನಾಗಿ ಶಾಂತಿಯುತವಾದ ಜೀವನವನ್ನು ನಡೆಸುತ್ತಾನೆಯೋ ಆತನನ್ನು ಇಸ್ಲಾಂ ಧರ್ಮ “ಮುಸ್ಲಿಂ” ಎಂದು ಹಾಗೂ ಆತನ ಸಮುದಾಯವನ್ನು ಮುಸ್ಲಿಂ ಸಮುದಾಯ ಎಂದು ಕರೆಯುತ್ತದೆ. ಎಷ್ಟೊಂದು ಸುಂದರ ಕಲ್ಪನೆ! ಆದರೆ ಇಂದು ಜಗತ್ತು ಕಾಣುತ್ತಿರುವ ಮುಸ್ಲಿಂ ಸಮುದಾಯವು ಶಬ್ದಕೋಶಗಳ ಅರ್ಥದಿಂದ ತದ್ವಿರುದ್ಧವಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವುದು ನಿಜಕ್ಕೂ ವಿಪರ್ಯಾಸ. ಈ ಸೋಜಿಗದ ಬೆನ್ನೆತ್ತಿ ಕೆಲವು ವರುಷಗಳಿಂದ ಇಸ್ಲಾಂ ದರ್ಮದ ಕುರಿತಾಗಿ ನಡೆಸಿದ ಅಧ್ಯಯನ, ನನ್ನ ಲೇಖನಕ್ಕೆ ಕಾರಣ. ಶಾಂತಿ ಮತ್ತು ಸಹಬಾಳ್ವೆಯಿಂದ ಕೂಡಿದ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರವಾದಿ ಮೊಹಮ್ಮದ್ (ಸ)ರವರು ಕಲಿಸಿಕೊಟ್ಟ ಇಸ್ಲಾಂ ಧರ್ಮ ಅಸಹನೆ, ಅಶಾಂತಿ ಮತ್ತು ಭಯೋತ್ಪಾದನೆಯತ್ತ ಮುನ್ನಡೆಯುತ್ತಿರುವುದೇಕೆ…?

ನಿಜಕ್ಕೂ ಇಂದು ಇದರ ಬಗ್ಗೆ ಅಧ್ಯಯನ, ಅವಲೋಕನ ನಡೆಸುವುದು ಪ್ರಸ್ತುತ ಹಾಗೂ ಅತ್ಯವಶ್ಯಕ. ಏಕೆಂದರೆ ಕೇವಲ ಐಸಿಸ್ ನಂತಹ ಉಗ್ರಗಾಮಿ ಸಂಘಟನೆಗಳನ್ನು ಬಹಿಷ್ಕರಿಸುವುದರಿಂದಲೋ, ಡಾ| ಝಾಕಿರ್ ನಾಯ್ಕ್ ನಂತಹ ಪ್ರಚೋದನಕಾರಿ ಇಸ್ಲಾಮಿಕ್ ಪಂಡಿತರನ್ನು ಬಂಧಿಸುವುದರಿಂದಲೋ, ಸಮಾಜಘಾತುಕ ಚಟುವಟಿಕೆಗಳಿಗೆ ಪೂರ್ಣ ವಿರಾಮ ಹಾಕುವುದು ಅಸಾಧ್ಯ. ಹಾಗಾಗಿ ಇಂದು ಬೌದ್ಧಿಕ ಮಟ್ಟದಲ್ಲಿ ಕೂಡ ಜಾಗೃತಿ ಮೂಡಿಸಬೇಕಾಗಿದೆ. ಮುಸ್ಲಿಂ ಸಮುದಾಯದಿಂದ ಉಂಟಾಗಿರುವ ಅಶಾಂತಿ, ಅಸಹಿಷ್ಣುತೆ, ಭಯೋತ್ಪಾದನೆ ಮುಂತಾದವುಗಳ ಮೂಲ ಹುಡುಕುತ್ತಾ ಹೊರಟಾಗ ಸಿಕ್ಕಿದ್ದು “ತೌಹೀದ್”- ಏಕದೇವ ವಿಶ್ವಾಸ. ಇದು ಇಸ್ಲಾಂ ಧರ್ಮದ ತಾಯಿ ಬೇರು. ಏಕದೇವ ವಿಶ್ವಾಸ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾದದ್ದು ನಿಜಕ್ಕೂ ಆಶ್ಚರ್ಯಕರ. ಆದರೆ ಇದು ಕಹಿಸತ್ಯ. ಹೌದು, ಕಾರಣ ಪ್ರತಿಯೊಬ್ಬರ ಏಕದೇವ ವಿಶ್ವಾಸ ಭಿನ್ನ ಭಿನ್ನವಾಗಿದ್ದು, ಅದನ್ನು ಏಕರೂಪಗೊಳಿಸಿ ಹೊರಟ ಹೋರಾಟವೇ ಇಷ್ಟೆಲ್ಲಾ ರಾದ್ಧಾಂತಗಳಿಗೆ ಕಾರಣ..! ಬೇರೆಯವರ ಶಾಂತಿ, ನೆಮ್ಮದಿ ಕದಡುತ್ತಿರುವುದು ಬಿಡಿ, ಸ್ವತ: ತಮ್ಮೊಳಗೆ ನೂರೆಂಟು ಪಂಗಡಗಳನ್ನು ಹುಟ್ಟಿ ಹಾಕಿಕೊಂಡು ಇಂದು ಮುಸ್ಲಿಂ ಮುಸ್ಲಿಂ (ಶಿಯಾ-ಸುನ್ನಿ, ಸುನ್ನಿ-ಸಲಾಫಿ, ಇತ್ಯಾದಿ) ಬಾಂಧವರು ಕಾದಾಟ ನಡೆಸುತ್ತಿರುವುದು ಇದೇ ಏಕರೂಪ ವಿಶ್ವಾಸದ ಹೆಸರಿನಲ್ಲಿ.ಆದರೆ ಇತ್ತ ಭರತ ಖಂಡ, ಜಗತ್ತಿಗೆ ಕಲಿಸಿದ್ದು “ವಿವಿಧತೆಯಲ್ಲಿ ಏಕತೆ”. ಇದು ಶಾಂತಿ, ಸಹನೆ, ಸಹಬಾಳ್ವೆಗೆ ಮೂಲಮಂತ್ರ. ಏಕೆಂದರೆ ವಿವಿಧತೆಯಲ್ಲಿ ಏಕತೆಯನ್ನು ಕಂಡಾಗ ಮಾತ್ರವೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಋಷಿ ಮುನಿಗಳನ್ನೊಳಗೊಂದು ಪ್ರತಿಯೊಬ್ಬ ಹಿಂದೂ ಕೂಡ ಇದನ್ನು ಅರ್ಥೈಸಿಕೊಂಡಿದ್ದಾನೆ, ಅಳವಡಿಸಿಕೊಂಡಿದ್ದಾನೆ.

“ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ, ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ”
ಹೌದು, ನಮ್ಮ ವಿಶ್ವಾಸ ಹೇಗೆ ಪ್ರತಿಯೊಂದು ಮಳೆ ಹನಿ ಆಕಾಶದಿಂದ ಧರೆಗುರುಳಿದ ನಂತರ ಸಮುದ್ರವನ್ನು ಸೇರುತ್ತಿದೆಯೋ, ಹಾಗೆಯೇ ಸರ್ವ ಜನರ ಪ್ರಾರ್ಥನೆಗಳು ಅದೇ ಏಕ ಭಗವಂತನಿಗೆ ತಲುಪುತ್ತವೆ. ಎಷ್ಟೊಂದು ಮಧುರ ಕಲ್ಪನೆ. ಇದೇ ಕಾರಣದಿಂದಾಗಿ ನಮ್ಮ ದೇಶದ ಜನ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ, ಬೌದ್ಧರಿಗೆ ಮುಂತಾದ ಎಲ್ಲಾ ಧರ್ಮದವರಿಗೆ ತಮ್ಮ ನೆಲದಲ್ಲಿ ಸುಖ, ನೆಮ್ಮದಿಯಿಂದ ಶಾಂತಿಯುತವಾಗಿ ಅವರವರ ವಿಶ್ವಾಸಗಳನ್ನು ಪಾಲಿಸುತ್ತಾ ಬದುಕು ಸಾಗಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದು. ಏಕೆಂದರೆ ಪ್ರತಿಯೊಬ್ಬರ, ಪ್ರಾರ್ಥನೆಗಳನ್ನು ಆಲಿಸುವವ ಒಬ್ಬನೇ ಎಂಬುದು ಹಿಂದೂ ಸಮುದಾಯದ ವಿಶ್ವಾಸ. ಹಾಗಾಗಿ ಇಷ್ಟು ಅನೋನ್ಯವಾಗಿ ಜೀವನ ನಡೆಸಲು ಈ ಭರತಖಂಡದ ಜನತೆಗೆ ಸಾಧ್ಯವಾದದ್ದು.

ಒಮ್ಮೆ ಯೋಚಿಸಿ, ಈ ದೇಶದ ಜನತೆ ಕೂಡ ಏಕದೇವ ವಿಶ್ವಾಸವನ್ನು ಏಕರೂಪಗೊಳಿಸುವ ಪ್ರಯತ್ನ ಮಾಡಿರುತ್ತಿದ್ದರೆ..? ಇಂದು ಭಾರತ ದೇಶ ಮತ್ತೊಂದು ಸಿರಿಯಾ ಆಗಿ ಬಿಡುತ್ತಿತ್ತು ಎಂಬುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಏಕತೆ ಎನ್ನುವುದು ವಿವಿಧತೆಯಲ್ಲಿ ಒಪ್ಪಿಕೊಂಡಾಗ ಬರುವಷ್ಟು ಸುಲಭವಾಗಿ ಏಕತೆಯ ಕನಸನ್ನು ವಿಶ್ವಾಸಗಳ ಏಕರೂಪಗೊಳಿಸುವ ಪ್ರಯತ್ನದಲ್ಲಿ ಶತಾಯಗತಾಯ ಕಾಣಲು ಸಾಧ್ಯವಿಲ್ಲ.

 

ನಮ್ಮ ವಿಶ್ವಾಸ ಮಾತ್ರವೇ ಸರಿ, ನಿಮ್ಮದು ತಪ್ಪು, ನಮ್ಮ ವಿಶ್ವಾಸವನ್ನು ನೀವು ಅಳವಡಿಸಿ ಇಹಪರದಲ್ಲಿ ಜಯಶಾಲಿಗಳಾಗಿ ಎಂದು ಸಾರುವ ಮೂರ್ಖರಿಂದ ದೂರವಿರುವ ಅಗತ್ಯವಿದೆ. ಇಂತಹ ಜನರಿಂದಲೇ ಇಂದು ಇಷ್ಟೆಲ್ಲ ಅನಾಚಾರಗಳು, ಅಶಾಂತಿ ತಲೆದೂರಿರುವುದು. ನಮ್ಮ ನಿಮ್ಮೆಲ್ಲರನ್ನು ಭಗವಂತನು ಸಂಕುಚಿತತೆಯಿಂದ ವಿಶಾಲತೆಯೆಡೆಗೆ, ಅಂಧಕಾರದಿಂದ ಬೆಳಕಿನೆಡೆಗೆ ಮುನ್ನಡೆಸಲಿ ಎಂದು ಪ್ರಾರ್ಥಿಸುತ್ತಾ…
ಇಂತಿ ನಿಮ್ಮ ಸಹೋದರ….

  • Share On Facebook
  • Tweet It


- Advertisement -


Trending Now
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Tulunadu News March 24, 2023
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
Tulunadu News March 23, 2023
Leave A Reply

  • Recent Posts

    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
  • Popular Posts

    • 1
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 2
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 3
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 4
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 5
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search