ಶಿರಾಡಿ ಘಾಟ್‍ನಲ್ಲಿ ಆ.23ರವರೆಗೆ ಲಘುವಾಹನ, ಆ.25 ವರೆಗೆ ಭಾರೀ ವಾಹನಗಳ ಸಂಚಾರ ನಿರ್ಬಂಧ

ಹಾಸನ: ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್‍ನಲ್ಲಿ ಗುಡ್ಡ ಕುಸಿದಿದ್ದು, ಆಗಸ್ಟ್ 20ರವರೆಗೆ ಲಘು ವಾಹನಗಳ ಸಂಚಾರ ಹಾಗೂ 25ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ರಸ್ತೆ ಮೇಲೆ ಬಿದ್ದಿರುವ ಮಣ್ಣು ಕುಸಿತ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದ್ದರಿಂದ ಕಾರ್ಯಾಚರಣೆಗಾಗಿ ಹತ್ತು ದಿನಗಳ ಕಾಲ ವಾಹನ ಸಂಚಾರ ನಿಷೇಧ ಮಾಡಲಾಗಿದೆ. ಆಗಸ್ಟ್ 20ರವರೆಗೆ ಎಲ್ಲಾ ವಾಹನ ಹಾಗೂ ಆಗಸ್ಟ್ 25 ರವರೆಗೆ ರಾಷ್ಟ್ರೀಯ ಹೆದ್ದಾರಿ-75 ಶಿರಾಡಿಘಾಟ್ ರಸ್ತೆಯಲ್ಲಿ ಭಾರಿ ವಾಹನಗಳು ನಿಷೇಧ ಮಾಡಿ ಈ ಬಗ್ಗೆ ಸಕಲೇಶಪುರ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಪತ್ರದಲ್ಲಿ ಏನಿದೆ?:
ಜಿಲ್ಲೆಯಾದ್ಯಂತ ಮುಂದಿನ ಮೂರು ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಅರಬ್ಬಿ ಸಮುದ್ರದ ಅಲೆಗಳು 3 ರಿಂದ 4 ಮೀಟರ್ ಗಳಷ್ಟು ಎತ್ತರವಿದ್ದು, ಮೀನುಗಾರರು ಸುಮುದ್ರಕ್ಕೆ ಇಳಿಯಬಾರದು. ಸಂಪಾಜೆ, ಶಿರಾಡಿ ಘಾಟ್ ಬಂದ್ ಆಗಿದ್ದು ಚಾರ್ಮಾಡಿ ಘಾಟಿಯಲ್ಲಿ ವಾಹನಗಳು ಸಂಚರಿಸಬಹುದು.
ನೇತ್ರಾವತಿ, ಕುಮಾರಧಾರ ನದಿ ಪಾತ್ರದ ತಗ್ಗು ಪ್ರದೇಶದ ಜನರು ಎತ್ತರ ಪ್ರದೇಶಗಳಿಗೆ ತೆರಳುವುದು. ಎಂದಿನಂತೆ ಶಾಲಾ ಕಾಲೇಜುಗಳು ನಡೆಯುತ್ತವೆ. (ಮಳೆಯ ಪ್ರಮಾಣ ಹೆಚ್ಚಾದಲ್ಲಿ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು ರಜೆ ಫೋಷಿಸಬಹುದು ಎಂದು ಜಿಲ್ಲಾ ವಿಪತ್ತು ಮಿರ್ವಹಣಾ ಪ್ರಾಧಿಕಾರ ಇಲಾಖೆಯಿಂದ ಪತ್ರದ ಮೂಲಕ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಚಾರ್ಮಾಡಿ ಘಾಟ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ದೊಡ್ಡತಪ್ಲು ಬಳಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದ್ದು, ಲಾರಿಯಲ್ಲಿದ್ದ ಕೆ.ಆರ್.ಪೇಟೆ ಮೂಲದ ಸಂದೀಪ್ ಹಾಗು ಮಾನ್ವಿ ಮೂಲದ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಟ್ಯಾಂಕರ್ ನೋಡಲು ಹೋದ ಮಂಗಳೂರು ಮೂಲದ ರಾಮದೇವ್ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಘಟನೆ ನಡೆದ ಸ್ಥಳಕ್ಕೆ ಸಚಿವ ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹೆತ್ತೂರು ಹೋಬಳಿ ಪಟ್ಲ ಗ್ರಾಮದ ಬಳಿ ರಸ್ತೆ ಬಿರುಕು ಬಿಟ್ಟಿದೆ. ಗುಡ್ಡ ಕುಸಿತಕ್ಕೆ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತವಾಗಿದೆ. 4 ವರ್ಷಗಳ ಬಳಿಕ ಬೇಲೂರಿನ ಯಗಚಿ ಜಲಾಶಯ ಭರ್ತಿಯಾಗಿದೆ.
Leave A Reply