“ಪ್ರೋಫೆಷನೋವಾ” ಉಚಿತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ!
ಮಂಗಳೂರು ನಗರದ ಕೆನರಾ ಹೆಣ್ಮಕ್ಕಳ ಪ್ರೌಢಶಾಲೆಯ ಸುಧೀಂದ್ರ ಆಡಿಟೋರಿಯಂನಲ್ಲಿ “ಪ್ರೋಫೆಷನೋವಾ” ಉಚಿತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಗಸ್ಟ್ 26 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30ರ ತನಕ ಈ ಕಾರ್ಯಕ್ರಮ ನಡೆಯಲಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಭಿಜ್ಞಾ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ ಈ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದೆ. ಈಗಿನ ಯುವಪೀಳಿಗೆಗೆ ವೃತ್ತಿ ಮಾರ್ಗದರ್ಶನ ಅಗತ್ಯವಾಗಿದ್ದು, ಯಾವ ಕೋಸರ್್ ಮಾಡಿದವರು ಯಾವ ಕ್ಷೇತ್ರಕ್ಕೆ ಹೋದರೆ ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ಏರಬಹುದು ಎಂದು ತಿಳಿದುಕೊಳ್ಳುವ ಅಗತ್ಯ ಇದೆ. ಇವತ್ತಿನ ಆಧುನಿಕ ಕಾಲದಲ್ಲಿ ಅಸಂಖ್ಯಾತ ಕ್ಷೇತ್ರಗಳು ಯುವಜನಾಂಗವನ್ನು ಕೈಬೀಸಿ ಕರೆಯುತ್ತಿದ್ದು ಸೂಕ್ತ ಉದ್ಯೋಗದ ಆಯ್ಕೆ ಕೂಡ ಬಹಳಷ್ಟು ಅಗತ್ಯವಾಗಿದೆ. ಇನ್ನು ಸ್ವಉದ್ಯೋಗ ಮಾಡುವವರು ಕೂಡ ಸರಿಯಾದ ಮಾರ್ಗದರ್ಶನ ಇದ್ರೆ ತಾವು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಅಪಾರ ಲಾಭವನ್ನು ಗಳಿಸಬಹುದು. ಈ ನಿಟ್ಟಿನಲ್ಲಿ ಅವರಿಗೆ ಯೋಗ್ಯ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಅಗತ್ಯ ಇದೆ.
ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾಥರ್ಿಗಳನ್ನು ಒಳಗೊಂಡು ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ, ಬಿಎ, ಎಂಬಿಎ, ಎಂಟೆಕ್, ಎಂಎಸ್, ಸಾಗರೋತ್ತರ ಉದ್ಯೋಗ, ಸಿಎ, ಸಿಎಸ್, ಸಿಎಂಎ, ಸಿಎಲ್ ಎಟಿ, ಎವಿಯೇಶನ್, ಬ್ಯಾಂಕಿಂಗ್, ಸರಕಾರಿ ಉದ್ಯೋಗ, ಸ್ವಂತ ಉದ್ಯೋಗ ಹಾಗೂ ಇನ್ನಿತರ ವಿಷಯಗಳ ಕುರಿತಂತೆ ಎಂಟು ಮಂದಿ ಸಂಪನ್ಮೂಲ ವ್ಯಕ್ತಿಗಳು ಶಿಬಿರಾಥರ್ಿಗಳೊಡನೆ ಸಂವಾದ ನಡೆಸಲಿದ್ದಾರೆ. ಈಗಾಗಲೇ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಶಿಬಿರದ ಕುರಿತು ಮಾಹಿತಿ ನೀಡಲಾಗಿದ್ದು, ಸುಮಾರು 700 ವಿದ್ಯಾಥರ್ಿಗಳು ಈಗಾಗಲೇ ಹೆಸರನ್ನು ನೊಂದಾವಣೆ ಮಾಡಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದಾರೆ. ಎಂಟು ಮೂವತ್ತಕ್ಕೆ ಶಿಬಿರಾಥರ್ಿಗಳಿಗೆ ಬೆಳಗ್ಗಿನ ಉಪಹಾರವನ್ನು ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ ವೇದವ್ಯಾಸ ಕಾಮತ್ ವಿನಂತಿಸಿದ್ದಾರೆ.
Leave A Reply