ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಕ್ರಮ ಸರ್ಪ ಸಂಸ್ಕಾರ ಪೂಜೆ ವಿರುದ್ಧ ಜನಜಾಗೃತಿ ಸಭೆ
ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಲವರು ನಡೆಸುತ್ತಿರುವ ಅಕ್ರಮ ಸರ್ಪ ಸಂಸ್ಕಾರ ಪೂಜೆ ವಿರುದ್ಧ ಹೋರಾಟ ಆರಂಭವಾಗಿದೆ. ಸಂಪುಟ ನರಸಿಂಹ ಮಠದಲ್ಲಿ ನಡೆಯುತ್ತಿರುವ ಅಕ್ರಮ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಪೂಜೆ ಹಾಗೂ ಇತರ ಸೇವೆಗಳನ್ನು ವಿರೋಧಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಭಕ್ತ ಹಿತರಕ್ಷಣಾ ವೇದಿಕೆ ಸುಬ್ರಹ್ಮಣ್ಯದಲ್ಲಿ ಜನಜಾಗೃತಿ ಸಭೆ ನಡೆಸಿದೆ.
ಸಂಪುಟ ನರಸಿಂಹ ಸ್ವಾಮಿ ಎಂದಿದ್ದ ಮಠದ ಹೆಸರನ್ನು ಮಠದ ಸ್ವಾಮೀಜಿ ಸುಬ್ರಹ್ಮಣ್ಯ ಮಠ ದಎಂದು ಹೆಸರು ಬದಲಾಯಿಸಿರುವುದು ಸರಿಯಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಧರ್ಮದ ಬಗ್ಗೆ, ಧರ್ಮದ ಜಾಗೃತಿಯ ಬಗ್ಗೆ ಗಮನ ಹರಿಸಬೇಕಾದ ಮಠದ ಸ್ವಾಮೀಜಿ ಕೇವಲ ಹಣ ಮಾಡುವುದಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರನ್ನು ದುರುಪಯೋಗ ಪಡಿಸುವುದನ್ನು ತಕ್ಷಣ ನಿಲ್ಲಿಸಬೇಕೆಂದು ಸಭೆಯಲ್ಲಿ ಸೇರಿದ ಮುಖಂಡರು ಆಗ್ರಹಿಸಿದ್ದಾರೆ.
ನಾಗದೋಷ ಪರಿಹಾರಕ್ಕೆ ಸೂಕ್ತ ಸ್ಥಳ ಸ್ವಯಂ ಭೂ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವಾಗಿದ್ದು, ಉಳಿದ ಯಾವ ಕಡೆ ಸರ್ಪ ಸಂಸ್ಕಾರ ಪೂಜೆ ಮಾಡುದರೂ ದೋಷ ಪರಿಹಾತ ಸಾಧ್ಯವಿಲ್ಲ ಎನ್ನುವ ವಿಚಾರವನ್ನೂ ನೆರೆದಿದ್ದ ಭಕ್ತಾಧಿಗಳಿಗೆ ತಿಳಿಸುವ ಪ್ರಯತ್ನವೂ ಜಾಗೃತಿ ಸಭೆ ಮೂಲಕ ನಡೆಸಲಾಯಿತು.
Leave A Reply