ಸ್ಥಳೀಯಾಡಳಿತ ಚುನಾವಣೆ: ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಫೈಟ್
ಬೆಂಗಳೂರು : ರಾಜ್ಯದಲ್ಲಿ ಸ್ಥಳಿಯಾಡಳಿತ ಚುಣಾವಣೆ ಬಿರುಸಿನಿಂದ ನಡೆಯುತ್ತಿದೆ. ಈ ವೇಳೆ ಹಲವೆಡೆ ಗೊಂದಲಗಳು ಉಂಟಾಗಿದೆ. ಯಾದಗಿರಿಯ ವಾರ್ಡ್ ಸಂಖ್ಯೆ 28 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವದ ಉಂಟಾಗಿದೆ.
ಮತದಾನ ಮಾಡುವಾಗ ವಿಳಂಬವಾಗಿದೆ ಎಂದು ಆರೋಪಿಸಿ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಗಳ ಉಂಟಾಗಿದೆ. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರವಿರುವುದರಿಂದ ಈ ಚುಣಾವಣೆಯಲ್ಲಿ ಫ್ರೆಂಡ್ಲಿ ಫೈಟ್ ಮಾತ್ರ ಎಂದು ಉಭಯ ಪಕ್ಷಗಳು ಘೋಷಿಸಿದ್ದವು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.
ಹಣ ಹಂಚುತ್ತಿದ್ದ ಅಭ್ಯರ್ಥಿ ಅಂದರ್: ಬೀದರ್ ಹಳ್ಳಿಕೇಡ್ ನ 14 ನೇ ವಾರ್ಡ್ನಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಆಸಿಫ್ ಬಂಧಿತ ಅಭ್ಯರ್ಥಿ.
ಪ್ರತಿಭಟನೆ: ತುಮಕೂರಿನ ಕೆ.ಆರ್.ಬಡಾವಣೆಯ 5ನೇ ವಾರ್ಡ್ ನಲ್ಲಿ ಮತದಾರರು ಚುಣಾವಣಾಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಹೆಸರು ವೋಟಿಂಗ್ ಲಿಸ್ಟ್ ನಲ್ಲಿ ಇಲ್ಲ ಎಂದು ಪ್ರತಿಭಟನೆ ನಡೆಸಲಾಗಿದೆ. ಸುಮಾರು ನೂರಕ್ಕೂ ಹೆಚ್ಚು ಮಂದಿಯ ಹೆಸರುಗಳು ವೋಟಿಂಗ್ ಲಿಸ್ಟ್ ನಿಂದ ನಾಪತ್ತೆಯಾಗಿದೆ ಎಂದು ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗೆಸಭೆಯ ವಾರ್ಡ್ 19ರ ಮತಯಂತ್ರದಲ್ಲಿ ದೋಷ ಕಂಡು ಬಂದಕಾರಣ ಕಾಂಗ್ರೆಸ್ ಅಭ್ಯರ್ಥಿಯ ಎಜೆಂಟ್ ನಿಂದ ಚುಣಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
Leave A Reply