ನವ ವಿವಾಹಿತೆಯ ಅನುಮಾನಾಸ್ಪದ ಸಾವು
Posted On September 1, 2018
0
ಕಲಬುರಗಿ: ನವ ವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ನಡೆದಿದೆ.
24 ವರ್ಷದ ಪುಷ್ಪಾ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ನವವಿವಾಹಿತೆ. ಎರಡು ತಿಂಗಳ ಹಿಂದೆ ಕಮಲಾಪುರ ಪಟ್ಟಣದ ನಿವಾಸಿ ಬಾಬುರಾವ್ ಎಂಬವರ ಜೊತೆ ಹಾಪುರ ತಾಲೂಕಿನ ಸಗರ್ ಗ್ರಾಮದ ನಿವಾಸಿ ಪುಷ್ಪಾರ ಮದುವೆ ಆಗಿತ್ತು. ಪುಷ್ಪಾರ ಶವವನ್ನು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಇರಿಸಿದ ಅತ್ತೆ ಕಮಲಾಬಾಯಿ ಮತ್ತು ಪತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಮಗಳ ಸಾವಿನ ಸುದ್ದಿ ಸ್ಥಳಕ್ಕಾಗಮಿಸಿದ ಪುಷ್ಪಾ ಪೋಷಕರು ಕೊಲೆ ಅಂತಾ ಆರೋಪಿಸಿದ್ದಾರೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025









