ಪುತ್ತೂರು ನಗರಸಭೆ ಬಿಜೆಪಿ ತೆಕ್ಕೆಗೆ, ಉಳ್ಳಾಲ, ಬಂಟ್ವಾಳದಲ್ಲಿ ಅತಂತ್ರ, ಕೈಗೆ ಮುಖಭಂಗ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 2 ನಗರ ಸಭೆ ಹಾಗೂ 1 ಪುರಸಭೆಗೆ ನಡೆದ ಚನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಉಳ್ಳಾಲ ಮತ್ತು ಪುತ್ತೂರು ನಗರಸಭೆ ಹಾಗೂ ಬಂಟ್ವಾಳದ ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಈ ಮೂರು ಕಡೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಪುತ್ತೂರಿನಲ್ಲಿ ಬಿಜೆಪಿ ಭಾರೀ ಅಂತರದ ಗೆಲುವಿನೊಂದಿಗೆ ಜಯಭೇರಿ ಬಾರಿಸಿದೆ. ಉಳ್ಳಾಲ ಹಾಗು ಬಂಟ್ವಾಳದಲ್ಲಿ ಸ್ಪಷ್ಟ ಬಹುಮತ ಯಾರಿಗೂ ದೊರೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಉಳ್ಳಾಲ ನಗರ ಸಭೆಯ ಒಟ್ಟು 31 ಸ್ಥಾನಗಳ ಪೈಕಿ ಬಿಜೆಪಿ 6, ಕಾಂಗ್ರೆಸ್ 13 , ಎಸ್ ಡಿಪಿಐ 6, ಜೆಡಿ ಎಸ್ 4 ಸೇರಿದಂತೆ 2 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ರಾಜ್ಯ ವಸತಿ ಖಾತೆ ಸಚಿವ ಹಾಗು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರ ಸ್ವ ಕ್ಷೇತ್ರ ಉಳ್ಳಾಲದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ದೊರೆಯದೇ ಮುಖಭಂಗವಾಗಿದೆ. ಇಲ್ಲಿ ಗಮನಿಸ ಬೇಕಾದ ಇನ್ನೊಂದು ಅಂಶ ಎಂದರೆ ಎಸ್ ಡಿಪಿಐ 6 ಹಾಗೂ ಜೆಡಿಎಸ್ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಸ್ಥಾನಗಳನ್ನು ಕಬಳಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳ್ಳಾಲದಲ್ಲಿ ಬಿಜೆಪಿ ದುರ್ಬಲ ಎಂದೇ ಪರಿಗಣಿಸಲಾಗುತ್ತದೆ.
ಬಿಜೆಪಿ ಇಲ್ಲಿ ಕೇವಲ 6 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಇನ್ನೊಂದು ಕುತೂಹಲದ ಅಂಶ ಎಂದರೆ 16 ನೇ ವಾರ್ಡ್ ನ ಫಲಿತಾಂಶವನ್ನು ಟಾಸ್ ಹಾಕುವ ಮೂಲಕ ನಿರ್ಧರಿಸಲಾಗಿದೆ. ಈ ವಾರ್ಡ್ ನ ಮತ ಎಣಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಅಭ್ಯರ್ಥಿಗಳು ಸಮಾನವಾಗಿ 370 ಮತಗಳನ್ನು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಟಾಸ್ ಗೆಲ್ಲುವ ಮೂಲಕ ಬಿಜೆಪಿ ಅಭ್ಯರ್ಥಿ ರಾಜೇಶ್ ಜಯ ಸಾಧಿಸಿದ್ದಾರೆ. ಉಳ್ಳಾಲದ ಈ ಫಲಿತಾಂಶದ ಮೂಲಕ ಸಚಿವ ಯು .ಟಿ ಖಾದರ್ ಅವರಿಗೆ ಮುಖಭಂಗವಾಗಿದೆ ಎಂದು ಹೇಳಲಾಗಿದೆ.
Leave A Reply