ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ನಮೋ ಬ್ರಿಗೇಡ್ ಗೆ ಮತ್ತೆ ಚಕ್ರವರ್ತಿ ಸೂಲಿಬೆಲೆ ಸಾರಥ್ಯದಲ್ಲಿ ಚಾಲನೆ?
ಮಂಗಳೂರು: ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ನಮೋ ಬ್ರಿಗೆಡ್ ಗೆ ಮತ್ತೇ ಚಾಲನೆ ದೊರೆಯಲಿದೆ. ಹೌದು, ಈ ಸುದ್ದಿ ಎಲ್ಲೆಡೆ ಈಗ ಕೇಳಿ ಬರುತ್ತಿದೆ. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಮೋದಿ ಅಭಿಮಾನಿಗಳನ್ನೆಲ್ಲ ಅದರಲ್ಲೂ ಯುವ ಸಮೂಹ ಒಟ್ಟಿಗೆ ಸೇರಿಸಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ನಮೋ ಬ್ರಿಗೇಡ್ ಸಂಘಟನೆ ಮತ್ತೊಮ್ಮೆ ಪ್ರಾರಂಭವಾಗುವ ಲಕ್ಷಣ ಕಾಣುತ್ತಿದೆ.
ಕಳೆದ ಬಾರಿ ಮಂಗಳೂರಿನಿಂದ ಪ್ರಾರಂಭವಾದ ಈ ಸಂಘಟನೆ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಹೆಸರು ಮಾಡಲು ಚಕ್ರವರ್ತಿ ಸೂಲಿಬೆಲೆ ಪ್ರಮುಖ ಪಾತ್ರವಹಿಸಿದ್ದರು. ಅದಾಗಲೇ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಕರ್ನಾಟಕ ಬಿಜೆಪಿಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮೋ ಬ್ರಿಗೇಡ್ ಮತ್ತೊಮ್ಮೆ ಜೀವ ತುಂಬಿದ್ದು ಅಲ್ಲಗಳೆಯುವಂತಿಲ್ಲ. ರಾಜ್ಯ ಬಿಜೆಪಿ ನಾಯಕರ ನಡವಳಿಕೆಯಿಂದ ಬೇಸತ್ತ ಹಲವಾರು ಯುವಕರು ಮೋದಿ ಹೆಸರಿನಲ್ಲಿ ಒಟ್ಟು ಸೇರಿ ಮೋದಿಯವರನ್ನು ಪ್ರಧಾನಿಯಾಗಿಸುವ ಏಕೈಕ ಗುರಿಯೊಂದಿಗೆ ಸಂಘಟಿತರಾಗಿದ್ದರು. ರಾಜ್ಯದಲ್ಲಿ ಲೋಕಸಭೆಯ 19 ಸೀಟುಗಳು ಪಡೆದಿರುವುದರ ಹಿಂದೆ ನಮೋ ಬ್ರಿಗೇಡ್ ಪಾತ್ರ ಪ್ರಮುಖವಾಗಿತ್ತು ಅಂತ ಬಿಜೆಪಿ ನಾಯಕರೇ ಅಂದು ಹೇಳಿಕೊಂಡಿದ್ದರು.
ಈಗ ‘ಮತ್ತೊಮ್ಮೆ ಮೋದಿ ‘ ಎಂಬ ಘೋಷವಾಕ್ಯದೊಂದಿಗೆ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಮೋ ಬ್ರಿಗೇಡ್ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಯುವ ಪೀಳಿಗೆಯಲ್ಲಿ ಹೆಚ್ಚಿದ ನಮೋ ಅಭಿಮಾನ ಪರಿಗಣಿಸಿ ಮತ್ತು ಯುವ ಶಕ್ತಿಯಲ್ಲಿ ಅಡಕವಾಗಿರುವ ಅಭಿಮಾನ ವ್ಯರ್ಥವಾಗದ ರೀತಿಯಲ್ಲಿ ಸೂಕ್ತವಾಗಿ ಬಳಸಿ ಒಂದೇ ಸೂರಿನಡಿಯಲ್ಲಿ ಸೇರಿಸುವುದು ಆ ಮೂಲಕ ಕರ್ನಾಟಕದಲ್ಲಿ ಮತ್ತೊಮ್ಮೆ ಮೋದಿಯವರ ಪರ ಅತ್ಯಧಿಕ ಸೀಟು ಗೆಲ್ಲಿಸುವುದು ಇದರ ಮುಖ್ಯ ಉದ್ದೇಶ ಅಂತ ಹೇಳಲಾಗುತ್ತಿದೆ.
ಈ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಅಧಿಕೃತ ಘೋಷಣೆ ಮಾಡದೇ ಇದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ನಮೋ ಬ್ರಿಗೇಡ್ ಮತ್ತೊಮ್ಮೆ ಪ್ರಾರಂಭವಾಗಲೇಬೇಕು ಎಂಬ ಕೂಗು ಕೇಳಿಬರುತ್ತಿದೆ. ಚಕ್ರವರ್ತಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.
Leave A Reply