• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಜನ್ಮಾಷ್ಟಮಿಯ ವೇಳೆ ವೇಷ ಧರಿಸುವ ಈ ವ್ಯಕ್ತಿ ಬಡಮಕ್ಕಳ ಪಾಲಿನ ಆಶಾಕಿರಣ

Tulunadu News Posted On September 4, 2018
0


0
Shares
  • Share On Facebook
  • Tweet It

ಉಡುಪಿ: ಜಿಲ್ಲೆಯ ಅದೆಷ್ಟೋ ಬಡ ಕುಟುಂಬಗಳ ಪಾಲಿಗೆ ಈತ ದೇವರ ಸಮ. ಈತನಿಂದ ಬದುಕುಳಿದ ಜೀವಗಳು ಇವರ ಒಳ್ಳೆಯದಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಉಡುಪಿ ಸೇರಿದಂತೆ ಕರಾವಳಿಯ ಭಾಗದ ಜನರಿಗೆ ರವಿ ಕಟಪಾಡಿ ಎಂಬ ಹೆಸರು ಕೇಳುವಾಗ ನೆನಪಿಗೆ ಬರುವುದು ಬಡವರ ಬಂಧು, ಆಪದ್ಬಾಂಧವ. ಈ ಬಾರಿ ಉಡುಪಿಯ ಬಡವರ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಬಡ ಮಕ್ಕಳ ಪಾಲಿಗೆ ಆಶಾಕಿರಣ ಮೂಡಿಸುವ ಸಲುವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಮತ್ತು ಫ್ರೆಂಡ್ಸ್‌ ಕಟಪಾಡಿ ಈ ಬಾರಿ ಅಷ್ಟಮಿಯ ಸೆ. 2 ಮತ್ತು ಸೆ.3ರಂದು ಅಮೇಜಿಂಗ್‌ ಮಾನ್‌ಸ್ಟರ್‌ ವೇಷ ಧರಿಸಿ ದೇಣಿಗೆ ಸಂಗ್ರಹ ಮಾಡಲಿದ್ದಾರೆ.

ವಾರಂಬಳ್ಳಿಯ ಉಪ್ಪಿನಕೋಟೆ ರಿಕ್ಷಾ ಚಾಲಕ ಉಮೇಶ್‌ ಕುಂದರ್‌ ಮಗಳಾದ ನಾಲ್ಕು ವರ್ಷ ಪ್ರಾಯದ ಬ್ಲಡ್‌ ಕ್ಯಾನ್ಸರ್‌ ನಿಂದ ಬಳಲುತ್ತಿರುವ ದೀಕ್ಷಾ ಕುಂದರ್‌, ಕುಂದಾಪುರ ಕೋಡಿಯ ಹಂಝ ಅವರ ಪುತ್ರ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ 13 ವರ್ಷದ ಝುಲ್ಫಿನ್‌, ಉಡುಪಿಯ ಜಗದೀಶ್‌ ಎಂಬವರ ತಲಸೀಮಿಯದಿಂದ ಬಳಲುತ್ತಿರುವ ಪನ್ವಿಕಾ ಎಂಬ 2 ವರ್ಷ 8 ತಿಂಗಳ ಬಾಲೆ… ಕುಂದಾಪುರ ತಾಲೂಕಿನ ಆನಗಳ್ಳಿಯ ರವಿರಾಜ್‌ ಮಗ ಎರಡೂ ಕಾಲಿನ ಬಲ ಸ್ವಾಧೀನ ಕಳಕೊಂಡಿರುವ 10 ವರ್ಷದ ರಜತ್‌ ಇಂತಹ 4 ಬಡಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶವನ್ನು ತಂಡ ಹೊಂದಿದೆ.

ತಾನು ವೇಷ ಧರಿಸಿ ಸಂಗ್ರಹವಾದ ಮೊತ್ತವನ್ನು ಸೆ.9ರಂದು ಮಲ್ಪೆ ಕೊಳದ ಹನುಮಾನ್‌ ವಿಠೋಭ ಭಜನ ಮಂದಿರದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಎಸ್‌.ಪಿ. ಲಕ್ಷ್ಮಣ ನಿಂಬರಗಿ, ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಸಮಕ್ಷಮದಲ್ಲಿ ಬಡಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ರವಿ ಕಟಪಾಡಿ ಹೇಳಿದ್ದಾರೆ.

ಪ್ರತಿ ವರ್ಷ ಅಷ್ಟಮಿಯಂದು ವೈವಿಧ್ಯಮಯವಾದ ವೇಷವನ್ನು ಧರಿಸುವ ರವಿ, ಒಂದೊಂದು ಬಾರಿಯೂ ಒಂದೊಂದು ಯೋಜನೆಗಳನ್ನು ಇಟ್ಟುಕೊಂಡಿರುತ್ತಾರೆ. ಕಳೆದ ಬಾರಿ ಕೂಡ ಬಡ ಮಕ್ಕಳ ಪಾಲಿಗೆ ರವಿ ದೇವರಾಗಿದ್ದಾರೆ. ತನ್ನ ವೇಷದ ಮೂಲಕ ಜನರಿಗೆ ಮನರಂಜನೆ ನೀಡುವ ರವಿ ಕಟಪಾಡಿ, ಸಾಮಾಜಿಕವಾಗಿ ಜನರಿಗೆ ಸಹಾಯ ಮಾಡುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

0
Shares
  • Share On Facebook
  • Tweet It




Trending Now
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
Tulunadu News November 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
  • Popular Posts

    • 1
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 2
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search