ಡಿಸಿ ರೋಹಿಣಿ ಸಿಂಧೂರಿಗೆ `ಮೇಡಂ ಎಣ್ಣೆಕಾಟ ತಪ್ಪಿಸಿ’ ಎಂದು ರೇವಣ್ಣ ಮನವಿ
ಹಾಸನ: ಜಿಲ್ಲೆಯ ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರು ಡಿಸಿ ರೋಹಿಣಿ ಸಿಂಧೂರಿ ಅವರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಚಿವ ಸಭೆಯಲ್ಲಿ ಮಾತನಾಡಿದ ಸಚಿವ ರೇವಣ್ಣ, ಜಿಲ್ಲೆಯ ಎಲ್ಲೆಡೆ ಹಳ್ಳಿಗಳಲ್ಲಿ ಇರುವ ಕೆಲ ಟೀ ಕ್ಯಾಂಟೀನ್‍ಗಳು ಈಗ ಮದ್ಯದ ಅಂಗಡಿಯಾಗಿ ಬದಲಾಗಿವೆ. ಪ್ರತಿ ನಿತ್ಯ ಹಳ್ಳಿ ಹೆಂಗಸರು ಬಂದು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದರು.
ಅಕ್ರಮ ಮದ್ಯ ಮಾರಾಟ ಕುರಿತು ಮಾಹಿತಿ ಲಭಿಸಿದರೆ ಅಂತ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲ ಕ್ಯಾಂಟೀನ್‍ಗಳಲ್ಲಿ ಬೆಳಗ್ಗೆಯಿಂದ ರಾತ್ರಿ ವರೆಗೂ ಮಾರಾಟ ಮಾಡಲಾಗುತ್ತದೆ. ಅದ್ದರಿಂದ ಅವುಗಳಿಗೆ ಬೀಗ ಮುದ್ರೆ ಹಾಕಲು ಕೂಡ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರು.
ಮಾಜಿ ಪ್ರಧಾನಿ ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರೇವಣ್ಣ ಅವರು ಗ್ರಾಮೀಣ ಭಾಗದ ಅಕ್ರಮ ಮದ್ಯ ಮಾರಾಟದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆದರು.
Leave A Reply