ಅನ್ನ ಭಾಗ್ಯದ ಮೇಲೆ ಬಿಜೆಪಿ ದಾಳಿ!
ರಾಜ್ಯ ಸರಕಾರ ಬಡವರಿಗೆಂದು ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿ ಖಾಸಗಿ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಸಂಗತಿ ಜನಸಾಮಾನ್ಯರ ಗಮನಕ್ಕೆ ಬಂದಿರಬಹುದು. ಅದಕ್ಕೆ ಮಂಗಳೂರಿನಲ್ಲಿ ತಾಜಾ ಉದಾಹರಣೆಯೊಂದು ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.
ಮಂಗಳೂರಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಲಾರಿ ಕೆಎ -19- ಎಎ- 5508 ಇದರಲ್ಲಿ 500 ಕ್ವಿಂಟಲ್ ಅಕ್ಕಿಯನ್ನು ಖಾಸಗಿ ಮಳಿಗೆಯಲ್ಲಿ ಮಾರಾಟ ಮಾಡಲು ತಯಾರಿ ನಡೆದಿತ್ತು. ಈ ಬಗ್ಗೆ ಸುಳಿವರಿತ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ದಿವಾಕರ್ ಪಾಂಡೇಶ್ವರ ಮತ್ತು ಇತರರು ಲಾರಿಯನ್ನು ಪದವಿನಂಗಡಿ ಬಳಿ ಅಡ್ಡ ಹಾಕಿ ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿದೆ.
ಪೊಲೀಸರು ಲಾರಿಯನ್ನು ಜಪ್ತು ಮಾಡಿ ಚಾಲಕನನ್ನು ಬಂಧಿಸಿದ್ದಾರೆ. ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರಕಾರ ಕಿಲೋ ಗೆ 29 ರೂಪಾಯಿ ಮತ್ತು ರಾಜ್ಯ ಸರಕಾರ ಮೂರು ರೂಪಾಯಿ ಭರಿಸುತ್ತದೆ .
ಸ್ಥಳಕ್ಕೆ ಕಾವೂರು ಠಾಣಾಧಿಕಾರಿ ಭೇಟಿ ನೀಡಿದ್ದು ಲಾರಿ ಚಾಲಕ ಪೊಲೀಸ್ ವಶಕ್ಕೆ ಪಡೆದಿದ್ದಾರೆ 500 ಕ್ಕೂ ಅಧಿಕ ಅಕ್ಕಿ ಗೋಣಿ 5 ಕ್ವಿಂಟಲ್ ಅಕ್ಕಿ, ಗೋಡಾನಿನಲ್ಲಿ ಶೇಖರಣೆ. ದಾಳಿಗೆ ಆರ್ಟಿಐ ಕಾರ್ಯಕರ್ತರ ಹನುಮಂತ್ ಕಾಮತ್ ಸಾಥ್, ಮ್ಯಾಂಗುಲರ್ ರೈಸ್ ಮಿಲ್ ನಲ್ಲಿ ಅಕ್ರಮ ಸಾಗಾಟ ಮಂಗಳೂರಿನ ಬೋಂದೆಲ್ ನಲ್ಲಿರುವ ರೈಸ್ ಮಿಲ್ ಪದವಿನಂಗಡಿ ನ್ಯಾಯಬೆಲೆ ಅಂಗಡಿಗೆ ಸಾಗಾಟವಾಗಬೇಕಿದ್ದ ಅಕ್ಕಿ ರೈಸ್‌ಮಿಲ್‌ಗೆ ತಂದು ಗೋಣಿ ಬದಲಾಯಿಸಿ ಮಾರಾಟ ಮಾಡುತಿದ್ದಾರೆ ಎಂದು ಆರೋಪಿಸಲಾಗಿದೆ
Leave A Reply