ಓವರ್ ಟೇಕ್ ಮಾಡೋ ಭರದಲ್ಲಿ ಬೈಕಂಪಾಡಿಯಲ್ಲಿ ಬಸ್ ಪಲ್ಟಿ: ಹಲವರಿಗೆ ಗಾಯ
Posted On September 13, 2018
0
ಮಂಗಳೂರು: ಮಂಗಳೂರು ಹೊರವಲಯದಲ್ಲಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬೈಕಂಪಾಡಿಯಲ್ಲಿ ಈ ಅಪಘಾತ ಸಂಭವಿಸಿದ್ದು, ವಾಹನ ಒಂದನ್ನು ಓವರ್ ಟೇಕ್ ಮಾಡೋ ಭರದಲ್ಲಿ ಬಸ್ ಪಲ್ಟಿಯಾಗಿದೆ.
ಬಸ್ ಸುರತ್ಕಲ್ ಕಡೆಯಿಂದ ಮಂಗಳೂರಿಗೆ ಬರುವಾಗ ಈ ಘಟನೆ ನಡೆದಿದ್ದು, ಚಾಲಕನ ಅಜಾಗರೂಕತೆಯ ಚಾಲನೆಯಿಂದ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ. ಗಾಯಾಳುಗಳನ್ನು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಳಗ್ಗಿನ ವೇಳೆಯಾದ ಕಾರಣ ಪ್ರಯಾಣಿಕರಿಂದ ಬಸ್ ತುಂಬಿಕೊಂಡಿದ್ದು, ಶಾಲಾ ,ಕಾಲೇಜು ವಿದ್ಯಾರ್ಥಿಗಳು, ಕಚೇರಿಗಳಿಗೆ ತೆರಳುತ್ತಿದ್ದವರು ಇದರಲ್ಲಿದ್ದರು. ಅವಘಡ ನಡೆದ ಸ್ಥಳದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ವರದಿಯಾಗಿದೆ.
ಅಪಘಾತದಲ್ಲಿ ಕೆಲವರ ಮೂಳೆ ಮುರಿತಕ್ಕೊಳಗಾಗಿದೆ ಎಂಬ ಸುದ್ದಿಯೂ ತಿಳಿದು ಬಂದಿದೆ. ಅದೃಷ್ಟವಷಾತ್ ಎಲ್ಲಾ ಗಾಯಾಳುಗಳು ಪ್ರಾಯಾಪಾಯದಿಂದ ಪಾರಾಗಿದ್ದಾರೆ.
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
December 23, 2025









