ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಎಫ್‍ಐಆರ್!
ಮುಂಬೈ: ಲವ್‍ರಾತ್ರಿ ಸಿನಿಮಾದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆಪಾದನೆಯ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಸಿನಿಮಾದ ಸಿಬ್ಬಂದಿ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.
ಬುಧವಾರ ಸಬ್ ಡಿವಿಶನಲ್ ನ್ಯಾಯಾಲಯದ ನ್ಯಾಯಾಧೀಶರಾದ ಶೈಲೇಂದ್ರ ರೈ ಅವರು ವಕೀಲ ಸುಧೀರ್ ಕುಮಾರ್ ಓಜಾ ನೀಡಿದ್ದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸುವಂತೆ ಮಿಥಸ್ಪೂರ ಪೊಲೀಸ್ ಠಾಣೆಗೆ ನಿದೇರ್ಶನ ನೀಡಿದೆ.
ಸುಧೀರ್ ಕುಮಾರ್ ಓಜಾ ಅವರು ಅಕ್ಟೋಬರ್ 5 ರಂದು ಬಿಡುಗಡೆಯಾಗುವ ಲವ್‍ರಾತ್ರಿ ಸಿನಿಮಾ ಸಲ್ಮಾನ್ ಖಾನ್ ಹೋಮ್ ಪ್ರೋಡಕ್ಷನ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಅದರ ಪ್ರೋಮೋವನ್ನು ವಿಕ್ಷಣೆ ಮಾಡಿದ್ದರು. ಸಿನಿಮಾದಲ್ಲಿ ನವರಾತ್ರಿ ಆಚರಣೆಯನ್ನು ನಿಂದಿಸಿದ್ದಾರೆ. ಇದರಿಂದ ಹಿಂದೂ ಭಾವನೆಗಳನ್ನು ನೋಯಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಈ ಘಟನೆ ಸಂಬಂಧ ಐಪಿಸಿ ಸೆಕ್ಷನ್ 295 (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ನೋವುಂಟು ಮಾಡುವುದು), 298(ಯಾವುದೇ ವ್ಯಕ್ತಿಯ ಮೇಲೆ ಧಾರ್ಮಿಕ ಭಾವನೆಗಳನ್ನು ಗಾಯಾಗೊಳಿಸುವುದು), 153, 153ಬಿ, ಹಾಗೂ 120ಬಿ ಅಡಿಯಲ್ಲಿ ಕಳೆದ ವಾರ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು.
Leave A Reply