ಆಗಂತುಕ ಮಾವೋಗಳಿಂದಲೇ ದೇಶದಲ್ಲಿ ಹೆಚ್ಚು ಜೀವ ಬಲಿ: ಅಮೆರಿಕದ ಸ್ಫೋಟಕ ವರದಿ ಬಯಲು
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ಹೂಡಿರುವ ಮಾವೋವಾದಿಗಳ ಮತ್ತು ಅವರ ಬೆಂಬಲಿಗರ ಕುರಿತ ಆತಂಕದ ಸುದ್ದಿ ಮರೆಯಾಗುವ ಮುನ್ನವೇ ಮತ್ತೊಂದು ಆಘಾತಕಾಗಿ ವರದಿ ಬಂದಿದ್ದು, ಮಾವೋವಾದಿಗಳು ವಿಶ್ವದ ಪಾಶವಿ ಕೃತ್ಯಗಳನ್ನು ನಡೆಸುವ ಭಯೋತ್ಪಾದಕ ಸಂಘಟನೆಗಳಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ. ಅಮೆರಿಕ ಗೃಹ ಇಲಾಖೆಯು ಈ ಆತಂಕಕಾಗಿ ವರದಿಯನ್ನು ಬಿಡುಗಡೆ ಮಾಡಿದೆ. ಅಲ್ಲದೇ ಇರಾಕ್ ಮತ್ತು ಅಪಘಾನಿಸ್ಥಾನದ ನಂತರ ಅತಿ ಹೆಚ್ಚು ಬಾರಿ ಭಯೋತ್ಪಾದಕ ದಾಳಿಗೆ ಈಡಾಗಿರುವ ದೇಶ ಭಾರತ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ.
2017ರಲ್ಲಿ 295 ಭಯೋತ್ಪಾದಕ ದಾಳಿ ನಡೆಸಿದ ಮಾವೋಗಳು ಜಗತ್ತಿನ ನಾಲ್ಕನೇ ಅಪಾಯಕಾರಿ ಭಯೋತ್ಪಾದಕರಾಗಿದ್ದು, ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಶೇ.53 ರಷ್ಟು ದಾಳಿಗಳನ್ನು ಸಿಪಿಐ ಮಾವೋವಾದಿಗಳೇ ಮಾಡಿದ್ದಾರೆ. 2016ರಲ್ಲಿ ಭಾರತದಲ್ಲಿ 338 ಮಾವೋವಾದಿಗಳ ದಾಳಿ ನಡೆದಿದ್ದು, 2017ರಲ್ಲಿ 295ಕ್ಕೆ ಇಳಿಕೆಯಾಗಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಶೇ.16ರಷ್ಟು ಹೆಚ್ಚಳವಾಗಿದೆ. ಗಾಯಗೊಂಡವರ ಸಂಖ್ಯೆಯಲ್ಲಿ ಶೇ. 50 ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ನಕ್ಸಲರು ಭಾರತದಲ್ಲಿ 295 ಭಯೋತ್ಪಾದಕಾ ದಾಳಿಗಳಿಗೆ ಹೊಣೆಯಾಗಿದ್ದಾರೆ. ಇಸ್ಲಾಮಿಕ್ ಸ್ಟೇಟ್, ತಾಲಿಬಾನ್, ಅಲ್-ಶಬಾಬ್ ನಂತರ ಅತ್ಯಂತ ಮಾರಣಾಂತಿಕ ಭಯೋತ್ಪಾದಕರು ಮಾವೋವಾದಿಗಳೇ ಎಂಬ ಆಘಾತಕಾರಿ ಸಂಘತಿಯನ್ನು ತಿಳಿಸಿದೆ ಉಗ್ರ ಸಂಘಟನೆಗಳು ಎಂಬ ಕುಖ್ಯಾತಿಗೆ ಗುರಿಯಾಗಿರುವ ಇಸ್ಲಾಮಿಕ್ ಸ್ಟೇಟ್ 857 ದಾಳಿ ನಡೆಸಿದ್ದು, ತಾಲಿಬಾನ್ 703 ಭಯೋತ್ಪಾದನಾ ಕೃತ್ಯಗಳನ್ನು ನಡೆಸಿದೆ. ಇನ್ನು, ಅಲ್ ಶಾಬಾಬ್ 2017ರಲ್ಲಿ 353 ಮಾರಣಾಂತಿಕ ದಾಳಿ ನಡೆಸಿದೆ ಎಂದು ವರದಿಯಲ್ಲಿ ಹೇಳಿದೆ.
ಎರಡು ವರ್ಷದಿಂದ ಭಾರತ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 2015ರ ತನಕ ಪಾಕಿಸ್ತಾನ ಮೂರನೇ ಸ್ಥಾನದಲ್ಲಿತ್ತು. ಜಮ್ಮು ಕಾಶ್ಮಿರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಯಲ್ಲಿ ಶೇ.24 ರಷ್ಟು ಹೆಚ್ಚಳವಾಗಿದ್ದು ಮೃತಪಟ್ಟವರ ಸಂಖ್ಯೆಯಲ್ಲಿ 2017ಕ್ಕೆ ಅನ್ವಯವಾಗುವಂತೆ ಶೇ.89 ರಷ್ಟು ಹೆಚ್ಚಳವಾಗಿದೆ. 2017ರಲ್ಲಿ ದೇಶದಲ್ಲಿ 860 ಭಯೋತ್ಪಾದಕ ದಾಳಿಗಳು ನಡೆದಿದ್ದು, ಇವುಗಳ ಪೈಕಿ ಕಾಶ್ಮೀರದಲ್ಲೇ ಶೇ.25 ನಡೆದಿವೆ. ಜಮ್ಮು ಕಾಶ್ಮೀರ, ಛತ್ತೀಸ್ಘಡ ಹಾಗು ಪಶ್ಚಿಮ ಬಂಗಾಳದಲ್ಲೇ ಅರ್ಧಕ್ಕಿಂತ ಹೆಚ್ಚು ಭಯೋತ್ಪಾದಕರ ದಾಳಿ ನಡೆದಿವೆ.
ಈ ಕುರಿತು ಪ್ರತಿಕ್ರಿಯಿಸಿದ ಭಾರತೀಯ ಅಧಿಕಾರಿಯೊಬ್ಬರು, ಭಾರತ ಹಾಗೂ ಪಾಕಿಸ್ತಾನದಲ್ಲಿ ಆಗುತ್ತಿರುವ ಭಯೋತ್ಪಾದಕ ದಾಳಿಗಳಲ್ಲಿ ಭಿನ್ನತೆ ಇದೆ. ಭಾರತದಲ್ಲಿ ಆಗುತ್ತಿರುವ ಬಹುತೇಕ ಭಯೋತ್ಪಾದಕ ದಾಳಿಗಳನ್ನು ಪಾಕಿಸ್ತಾನ ಹಾಗೂ ಅದರ ಸೈನ್ಯ ಸಾಥ್ ನೀಡುತ್ತಿದೆ ಎಂದು ಹೇಳಿದ್ದಾರೆ. ದೇಶದಲ್ಲಿ 43 ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಶೇ.215 ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
Leave A Reply