ಎರಡನೇ ಬಾರಿಯೂ ಪಾಕಿಸ್ಥಾನವನ್ನು ಎಡಮುರಿ ಕಟ್ಟಿದ ಭಾರತ..!!
ದುಬೈ: ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರ ಶತಕಗಳ ನೆರವಿನಿಂದ ಭಾರತ ತಂಡ ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ 9 ವಿಕೆಟ್ಗಳ ಭಾರೀ ಗೆಲುವು ದಾಖಲಿಸಿದೆ.ಭಾನುವಾರ ನಡೆದ ಸೂಪರ್-4 ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವನ್ನು 7 ವಿಕೆಟ್ಗೆ 238 ರನ್‍ಗಳಿಗೆ ನಿಯಂತ್ರಿಸಿದ ಭಾರತ ತಂಡ 39.3 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.ಸ್ಪರ್ಧಾತ್ಮಕ ಮೊತ್ತ ಗುರಿ ಬೆಂಬತ್ತಿದ ಭಾರತ ತಂಡಕ್ಕೆ ರೋಹಿತ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್ಗೆ 210 ರನ್ ಜೊತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ನಂತರ ಬಂದ ಅಂಬಟಿ ರಾಯುಡು ಮತ್ತು ರೋಹಿತ್ ಗೆಲುವಿನ ದಡ ಸೇರಿಸಿದರು.ನಾಯಕ ರೋಹಿತ್119 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 111 ರನ್ ಬಾರಿಸಿ ಔಟಾಗದೇ ಉಳಿದರು. ಇದು ರೋಹಿತ್ಗೆ 19ನೇ ಏಕದಿನ ಶತಕವಾಗಿದೆ. ಮತ್ತೊಬ್ಬ ಬ್ಯಾಟ್ಸ್ ಮನ್ ಶಿಖರ್ ಧವನ್ 100 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 114 ರನ್ ಸಿಡಿಸಿ ಔಟಾದರು. ಇದು ಧವನ್ಗೆ 15ನೇ ಶತಕವಾಗಿದೆ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಸರ್ಫಾರಾಜ್ ಅಹ್ಮದ್ (44) ಮತ್ತು ಶೋಯೆಬ್ ಮಲಿಕ್ (78) 4ನೇ ವಿಕೆಟ್ಗೆ 107 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು.ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ಜಸ್ ಪ್ರೀತ್ ಬುಮ್ರಾ, ಯಜುರ್ವೆಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 50 ಓವರ್ 7 ವಿಕೆಟ್ಗೆ 237 (ಮಲಿಕ್ 78, ಸರ್ಫರಾಜ್ 44, ಜಮಾನ್ 31, ಆಸೀಫ್ 30, ಬುಮ್ರಾ 29/2, ಚಾಹಲ್ 46/2, ಕುಲದೀಪ್ 41/2).
ಭಾರತ 39.3 ಓವರ್ 1 ವಿಕೆಟ್ 237 (ರೋಹಿತ್ ಅಜೇಯ 111, ಧವನ್ 114, ರಾಯುಡು ಅಜೇಯ 12).
ಪಂದ್ಯಶ್ರೇಷ್ಠ: ಶಿಖರ್ ಧವನ್
Leave A Reply