• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರನ್ನು ಮಾಹಿತಿ, ತಂತ್ರಜ್ಞಾನದ ಪರ್ಯಾಯ ನೆಲೆಯನ್ನಾಗಿ ಮಾಡಲು ನಳಿನ್ ಮನವಿ.

TNN Correspondent Posted On July 27, 2017


  • Share On Facebook
  • Tweet It

ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲು ಅವರು ಭಾರತದ ಸನ್ಮಾನ್ಯ ಕಾನೂನು ರಾಜ್ಯ ಸಚಿವ ಪಿ ಪಿ ಚೌಧರಿಯವರನ್ನು ಭೇಟಿಯಾಗಿ ಮಂಗಳೂರನ್ನು ಮಾಹಿತಿ ತಂತ್ರಜ್ಞಾನದ ಹಬ್ ಆಗಿ ಮಾಡಲು ಮನವಿ ಸಲ್ಲಿಸಿದರು. ಕೇಂದ್ರ ಸಚಿವರಿಗೆ ಮಂಗಳೂರಿನ ಬಗ್ಗೆ ಸಮಗ್ರ ಮಾಹಿತಿ, ಇಲ್ಲಿನ ಭೌಗೋಳಿಕ ಪ್ರದೇಶದ ಬಗ್ಗೆ ವಿವರ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನದ ಶಿಕ್ಷಣ ಸಂಸ್ಥೆಯನ್ನು ಮಂಗಳೂರಿನಲ್ಲಿ ಪ್ರಾರಂಭಿಸಿಲು ಒತ್ತಾಯಿಸಿದರು.

ಈಗಾಗಲೇ ಅನೇಕ ಮಾಹಿತಿ ಮತ್ತು ತಂತ್ರಜ್ಞಾನದ ದಿಗ್ಗಜ ಸಂಸ್ಥೆಗಳು ಬೆಂಗಳೂರಿನಲ್ಲಿ ಬೇರು ಬಿಟ್ಟಿದ್ದು ಇದರಿಂದ ಮಂಗಳೂರು ಸೇರಿ ಕರಾವಳಿ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಯುವಕ, ಯುವತಿಯರು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ರಾಜಧಾನಿಯಲ್ಲಿ ಸಹಜವಾಗಿ ಒತ್ತಡ ಬಿದ್ದಿದೆ. ಇದರ ಬದಲಾಗಿ ರಾಜ್ಯದಲ್ಲಿ ವಿಮಾನ, ರೈಲು, ರಾಷ್ಟ್ರೀಯ ಹೆದ್ದಾರಿ, ಬಂದರನ್ನು ಒಳಗೊಂಡ ಏಕೈಕ ನಗರವಾಗಿರುವ ಮಂಗಳೂರನ್ನು ಮಾಹಿತಿ, ತಂತ್ರಜ್ಞಾನದ ಪರ್ಯಾಯ ಕೇಂದ್ರವನ್ನಾಗಿ ಮಾಡಿದರೆ ಇಲ್ಲಿನ ಪ್ರತಿಭಾವಂತರಿಗೆ ಊರಿನಲ್ಲಿಯೇ ಸೇವೆ ಸಲ್ಲಿಸುವ ಅವಕಾಶ ಸಿಗುತ್ತದೆ. ಇಷ್ಟೇ ಇಲ್ಲದೆ ಮಂಗಳೂರು ಕೇಂದ್ರ ಸರಕಾರದ ಮಹೋನ್ನತ ಯೋಜನೆಯಾದ ಸ್ಮಾರ್ಟ್ ಸಿಟಿಯ ಪಟ್ಟಿಯಲ್ಲಿ ಕೂಡ ಗುರುತಿಸಿಕೊಂಡಿರುವುದರಿಂದ ಇಲ್ಲಿ ತಂತ್ರಜ್ಞಾನ ಸಂಬಂಧಿತ ಸಂಸ್ಥೆಗಳು ನೆಲೆ ಕಾಣಲು ಪೂರಕ ವ್ಯವಸ್ಥೆಗಳನ್ನು ರಾಜ್ಯ ಮತ್ತು ಕೇಂದ್ರದ ಸಹಭಾಗಿತ್ವದಲ್ಲಿ ಮಾಡಲು ಸಾಧ್ಯವಿದೆ. ನಮ್ಮ ಕೇಂದ್ರದ ಯೋಜನೆಯಾದ ಸ್ಟಾರ್ಟ್ ಅಪ್ ಯೋಜನೆ ಉತ್ತಮ ಗತಿಯಲ್ಲಿ ಸಾಗುತ್ತಿದ್ದು ಅದಕ್ಕೆ ಮಂಗಳೂರಿನಲ್ಲಿ ಆಶಾದಾಯಕ ಪ್ರಗತಿ ಕಾಣಿಸುತ್ತಿದೆ. ಅಷ್ಟೇ ಅಲ್ಲದೆ ಇಂತಹ ತಂತ್ರಜ್ಞಾನ ಸಂಬಂಧಿತ ಕೈಗಾರಿಕೆಗಳು ಬಂದರೆ ಅದರಿಂದ ಪರಿಸರ ನಾಶ ಕೂಡ ಆಗುವುದಿಲ್ಲ ಮತ್ತು ಇಲ್ಲಿನ ಪರಿಸರ ಸೂಕ್ಷ್ಮ ಪ್ರಭೇದಗಳಿಗೂ ಹಾನಿಯಾಗುವುದಿಲ್ಲ ಎಂದು ಕಟೀಲ್ ಅವರು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈಗಾಗಲೇ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರು ವಿಶ್ವಮಟ್ಟದಲ್ಲಿ ತನ್ನ ಸ್ಥಾನವನ್ನು ಗುರುತಿಸಿಕೊಂಡಿದೆ. ಅದಕ್ಕೆ ಕಾರಣ ಇಲ್ಲಿನ ಜನರ ದೂರದೃಷ್ಟಿ ಮತ್ತು ಅಗಾಧ ಪರಿಶ್ರಮ. ಹಾಗಿರುವಾಗ ಇನ್ನು ಮುಂದಿನ ಜನಾಂಗ ಮಾಹಿತಿ, ತಂತ್ರಜ್ಞಾನದಲ್ಲಿ ಭವಿಷ್ಯ ಹುಡುಕುವ ಕೆಲಸಕ್ಕೆ ಮುಂದಾಗುವಾಗ ಕೇಂದ್ರ ಸರಕಾರದ ಇದರ ಅಗತ್ಯತೆಯನ್ನು ಮನಗಂಡು ಸಕಲ ಸೌಲಭ್ಯವನ್ನು ಮಂಗಳೂರಿಗೆ ನೀಡುವ ಕೆಲಸ ನಡೆಯಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ವಿವರವಾಗಿ ಕೇಂದ್ರ ಸಚಿವರಿಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಬೆಂಗಳೂರಿನ ಮೇಲೆನೆ ತಂತ್ರಜ್ಞಾನ ದಿಗ್ಗಜರು ಒತ್ತಡ ಹಾಕುವುದಕ್ಕಿಂತ ಟೈಯರ್-2 ಸಿಟಿಯಾಗಿರುವ ಮಂಗಳೂರನ್ನು ಪರಿಗಣಿಸಬೇಕು. ಅದಕ್ಕೆ ತಳಹದಿಯಾಗಿ ನ್ಯಾಶನಲ್ ಇನ್ಸಟಿಟ್ಯೂಟ್ ಫಾರ್ ಇಲೆಕ್ಟ್ರಾನಿಕ್ ಎಂಡ್ ಐಟಿ ಅನ್ನು ಆದಷ್ಟು ಶೀಘ್ರವಾಗಿ ಸ್ಥಾಪಿಸಲು ಮುಂದಾಗಬೇಕು ಎಂದು ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.

ನಳಿನ್ ಕುಮಾರ್ ಕಟೀಲ್ ಅವರ ಈ ಪ್ರಯತ್ನ ಶೀಘ್ರದಲ್ಲಿ ಫಲ ಕಂಡರೆ ಭವಿಷ್ಯದಲ್ಲಿ ಮಂಗಳೂರು ಮಾಹಿತಿ, ತಂತ್ರಜ್ಞಾನದ ಪರ್ಯಾಯ ಕೇಂದ್ರವಾಗಿ ಬೆಳೆದು ಬೆಂಗಳೂರಿಗೆ ಸ್ಪರ್ಧೆ ಕೊಡುವುದರಲ್ಲಿ ಆಶ್ಚರ್ಯವಿಲ್ಲ. ಹಾಗೇ ಆಗಲಿ ಎನ್ನುವುದು ಅಸಂಖ್ಯಾತ ಪ್ರತಿಭಾವಂತರ ಆಶಯ

  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
Tulunadu News September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
Tulunadu News September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search