ಕಟೀಲು ಯಕ್ಷಗಾನ ಟ್ರಸ್ಟ್ ಮೇಲೆ 420 ಕೇಸ್….!!!
ಮಂಗಳೂರು- ಕಟೀಲು – ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಕ್ಕೆ ಸಂಬಂಧಿಸಿದ ಬೋಧಿನಿ ಚಾರಿಟೇಬಲ್ ಟ್ರಸ್ಟ್ ನ ವ್ಯಾವಹಾರ ಗಳು ಸಮರ್ಪಕ ವಾಗಿಲ್ಲ ಎಂಬುವು ದಾಗಿ ಜಿಲ್ಲಾಧಿಕಾರಿಗಳು ಎತಡು ತಿಂಗಳ ಹಿಂದೆ ಸರಕಾರಕ್ಕೆ ಸಲ್ಲಿಸಿದ್ದ ವರದಿ ಆಧರಿಸಿ ಈಗ ಟ್ರಸ್ಟ್ ವಿರುದ್ಧ ಪೊಲೀಸ್ ತನಿಖೆಗೆ ಮಂಗಳೂರಿನ 3 ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಧೀಶರ ಮತ್ತು ಜೆ.ಎಂ ಎಫ್.ಸಿ ನ್ಯಾಯಾಲಯ ಸೂಚಿಸಿದೆ.
10 ಜನರನ್ನು ಅರೋಪಿಗಳನ್ನಾಗಿ ಹೆಸರಿಸಲಾಗಿದೆ. ಬಜಪೆ ಪೊಲೀಸರು ಕಟೀಲಿನ ಟ್ರಸ್ಟ್ ಅಧ್ಯಕ್ಷ ಸಹಿತ ಆಡಳಿತ ಮಂಡಳಿ ವಿರುದ್ಧ ಶನಿವಾರ ಕೇಸು ದಾಖಲಿಸಿ ಕೊಂಡಿದ್ದಾರೆ.ಟ್ರಸ್ಟ್ ಗಳ ಅರೋಪಿಗಳಾದ ಅಧ್ಯಕ್ಷ ರಾಘವೇಂದ್ರ ಆಚಾರ್ಯ, ದ್ವಿತೀಯ ಅರೋಪಿ ಕಾರ್ಯದರ್ಶಿ ಶಿವಾಜಿ ಶೆಟ್ಟಿ . ಇನ್ನೂ 8 ಮಂದಿಯ ಮೇಲೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
ನ್ಯಾಯಾಲಯ ಸೂಚನೆಯಂತೆ ಎಲ್ಲ ಅರೋಪಿಗಳ ವಿರುದ್ಧ ಐಪಿಸಿ ಕಾಯ್ದೆ _406,417,418, 420, 109 ಮತ್ತು 120 ಬಿ ಸೆಕ್ಷನ್ ಗಳಡಿ ಕೇಸು ದಾಖಲಿಸಿ ಕೊಳ್ಳಲಾಗಿದೆ. ಬಜೆಪೆ ಪೊಲೀಸರು ಎಫ್ಐಆರ್ ಪ್ರತಿಯನ್ನು ಸೋಮವಾರ ನ್ಯಾಯಲಕ್ಕೆ ಸಲ್ಲಿಸಲಿದ್ದಾರೆ.ಪೊಲೀಸರು ತನಿಖೆ ನಡೆಸಿ ಡಿಸೆಂಬರ್ 27 ರೊಳಗೆ ನ್ಯಾಯಲಕ್ಕೆ ವರದಿ ಸಲ್ಲಿಸಬೇಕಾಗಿದೆ.
Leave A Reply