ಸೈನಿಕರ ದರ್ಪಕ್ಕೆ ಪೊಲೀಸರ ಹಲ್ಲು ಮುರಿತ….!!!
			      		
			      		
			      			Posted On October 1, 2018			      		
				  	
				  	
							0
						
						
										  	
			    	    ಮಂಗಳೂರುಕಡಬ- ಪಾನಮತ್ತ ಇಬ್ಬರು ಸೈನಿಕರು ಕರ್ತವ್ಯ ನಿರತ ಪೊಲಿಸರ ಮೇಲೆ ಹಲ್ಲೆ ನಡೆಸಿ ಪೊಲೀಸ್ ವಾಹನಕ್ಕೆ ಹಾನಿಗೈದ ಘಟನೆ ರವಿವಾರ ರಾತ್ರಿ ಕಡಬದ ಮರ್ದಳದಲ್ಲಿ ನಡೆದಿದೆ.ಕಡವ ಠಾಣೆಯ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀ ಶೈಲ ಶಿವ ಪ್ರಸಾದ್ ಪುಟ್ಟಸ್ವಾಮಿ ಗೃಹರಕ್ಷಕದಳ ಸಿಬ್ಬಂದಿ ಯೋಗೀಶ್ ಅವರ ಮೇಲೆ ರಜೆಯಲ್ಲಿ ಊರಿಗೆ ಬಂದಿರುವ ನೂಜಿಬಾಳ್ತಿಲ ಗ್ರಾಮದ ನಿವಾಸಿಗಳಾದ ವೃತ್ತಿ ಯಲ್ಲಿ ಸೈನಿಕರಾಗಿರುವ ರತ್ನಾಕರ ಹರೀಶ್ ಮತ್ತು ಅವರ ಸ್ನೇಹಿತರಾದ ದಿನೇಶ್ ಪ್ರಶಾಂತ್ ಮತ್ತಿತರರು ಪಾನ ಮತ್ತಾಗಿ ಹಲ್ಲೆ ನಡೆಸಿದ್ದಾರೆ…

ನಾವು ಸೈನಿಕರು ನಮ್ಮನ್ನು ನೀವು ತಡೆಯಲು ಸಾಧ್ಯವೇ….!?
ಕಡಬ ಮರ್ದಾಳದ ಪೊಲೀಸರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ .. ಭಾನುವಾರ ರಾತ್ರಿ ವೇಳೆ ಪಾನಮತ್ತ ರಾಗಿ ಬಂದ ಸೈನಿಕರಾದ ಹರೀಶ್ ಮತ್ತು ಸ್ನೇಹಿತರನ್ನು ಪೊಲೀಸರು ನಿಲ್ಲಿಸಿದರು. ಆಸಮಯದಲ್ಲಿ ನಮ್ಮನ್ನು ತಡೆಯಲು ನೀವು ಯಾರು ನಾವು ಸೈನಿಕರು ಎಂದು ಹೇಳಿದರು.. ಬಳಿಕ ನಿಲ್ಲಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಬಂದ ಪೊಲೀಸರು ಅರೋಪಿಗಳನ್ನು ಬಂಧಿಸಿದರು….

		    				        
								    
								    








