ಕರಾವಳಿಗರಿಗೆ ಸಿಹಿಸುದ್ದಿ..!!!!
Posted On October 4, 2018

ನಿನ್ನೆಯಿಂದ ಬಸ್ಸು.., 10 ರಿಂದ ರೈಲು….,
ಮಂಗಳೂರು-ಶಿರಾಡಿ- ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ರಂದು ರೈಲು ಸಂಚಾರ ಪುನಾರಂಭವಾಗಲಿದೆ
ಎಂದು ರೈಲ್ವೇ ಇಲಾಖೆಯ ಮೂಲಗಳು ತಿಳಿಸಿವೆ.ಮಹಾಮಳೆಯಿಂದ ಶಿರಾಡಿ ಘಾಟ್ ಭಾಗದಲ್ಲಿ ಪದೇ ಪದೆ ಭೂಕುಸಿತ ಆಗಿತ್ತು .ಇದರಿಂದ ಬಸ್ಸು ಸಂಚಾರ ರೈಲು ಸಂಚಾರ ಸ್ಥಗಿತ ಗೊಂಡಿತ್ತು. ನಿನ್ನೆಯಿಂದ ಬಸ್ಸು ಸಚಾರ ಆರಂಭವಾಗಿದ್ದು, ಅಕ್ಟೋಬರ್ ೧೦ ರಿಂದ ರೈಲು ಸಂಚಾರ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಗೂಡ್ಸ್ ರೈಲುಗಳು ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಿವೆ ಉನ್ನತ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿದ ನಂತರ ಅಕ್ಟೋಬರ್ 10 ರಿಂದ ಯಶವಂತಪುರ- ಮಂಗಳೂರು ಕಾರವಾರ ಬೆಂಗಳೂರು ನಡುವಿನ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದ ಹಳಿಗಳ ಮೇಲೆ ಭೂಕುಸಿತ ಉಂಟಾಗಿ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು.
- Advertisement -
Leave A Reply