ವಂದೇ ಮಾತರಂ ಕಡ್ಡಾಯಗೊಳಿಸಿದ “ಒಂದು ಮಾರ್ಕಿನ ಕಥೆ”
ರಾಜ್ಯ ನೇಮಕಾತಿ ಪರೀಕ್ಷೆಯಲ್ಲಿ ವಂದೇ ಮಾತರಂ ಗೀತೆ ಯಾವ ಭಾಷೆಯಲ್ಲಿದೆ ಎಂಬ ಪ್ರಶ್ನೆಗೆ ವೀರಮಣಿ ಎಂಬುವವರು ಬೆಂಗಾಲಿ ಅಂತ ಬರೆದು ಒಂದು ಅಂಕ ಕಳೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ವೀರಮಣಿ ಹೈಕೋರ್ಟ್ ಮೆಟ್ಟಲೇರಿದ್ದರು. ಜೂನ್ 13ರಂದು ಅಡ್ವೋಕೇಟ್ ಜನರಲ್ ಆರ್ ಮುತ್ತುಕುಮಾರಸ್ವಾಮಿ ಅವರು ಇದಕ್ಕೆ ಸ್ಪಷ್ಟೀಕರಣ ನೀಡಿ, ವಂದೇ ಮಾತರಂನ ಮೂಲ ಭಾಷೆ ಸಂಸ್ಕೃತ ಆದ್ರೆ ಬೆಂಗಾಲಿಯಲ್ಲಿ ಬರೆಯಲಾಗಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ವೀರಮಣಿ ಅವರು ಪರೀಕ್ಷೆಯಲ್ಲಿ ಕಳೆದುಕೊಂಡಿದ್ದ 1 ಅಂಕವನ್ನು ನೀಡಬೇಕೆಂದು ಕೋರ್ಟ್ ನಿರ್ಧರಿಸಿದೆ. ಅಲ್ಲದೆ ಎಲ್ಲಾ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಾರಕ್ಕೆ ಕನಿಷ್ಠ ಒಂದು ಬಾರಿ (ಪ್ರಮುಖವಾಗಿ ಸೋಮವಾರ ಅಥವಾ ಶುಕ್ರವಾರ) ವಂದೇ ಮಾತರಂ ಕಡ್ಡಾಯವಾಗಿ ಹಾಡಬೇಕು. ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳು ಹಾಗೂ ಫ್ಯಾಕ್ಟರಿಗಳಲ್ಲಿ ತಿಂಗಳಿಗೆ ಕನಿಷ್ಠ ಒಂದು ಬಾರಿ ವಂದೇ ಮಾತರಂ ಹಾಡುವುದು ಕಡ್ಡಾಯ ಎಂದು ಕೋರ್ಟ್ ಹೇಳಿದೆ. ಆದರೆ ವಂದೇ ಮಾತರಂ ಹಾಡಲೇಬೇಕೆಂದು ಯಾರೀಗೂ ತಾಕೀತು ಮಾಡುವಂತಿಲ್ಲ ಎಂಬ ಮಾತನ್ನು ಕೂಡ ಹೈ ಕೋರ್ಟ್ ಹೇಳಿದೆ.
ಪ್ರಶ್ನೆ ಇರುವಂತದ್ದು ಭಾರತ ದೇಶದಲ್ಲಿ ವಾಸಿಸುವರಿಗೆ ವಂದೇ ಮಾತರಂ ಹಾಡಲು ಅಂಜಿಕೆ ಏಕೆ. ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಅಡ್ಡಿಯಾಗುತ್ತದೆ ಎಂದು ಕೆಲವರ ಅಭಿಪ್ರಾಯ ಇದ್ದು ಆದರೆ ನಿಜವಾದ ದೇಶಭಕ್ತ ಮುಸಲ್ಮಾನ ವಂದೇ ಮಾತರಂ ಗೀತೆಯನ್ನು ಖಂಡಿತ ಹಾಡುತ್ತಾನೆ, ಕೆಲವು ಕಟ್ಟರ್ ಪಂಥಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ವಂದೇ ಮಾತರಂ ಬಗ್ಗೆ ಮುಸಲ್ಮಾನರಲ್ಲಿ ತಪ್ಪು ಅಭಿಪ್ರಾಯ ಸ್ರಷ್ಟಿಸುತ್ತಿದ್ದಾರೆ ಅಂತ ಬಹುತೇಕ ಮುಸಲ್ಮಾನರು ಅಭಿಪ್ರಾಯ ಪಟ್ಟಿದ್ದಾರೆ. ಈಗ ತಮಿಳುನಾಡಿನಲ್ಲಿ ಮಾತ್ರ ವಂದೇ ಮಾತರಂ ಕಡ್ಡಾಯ ಅಂತ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ಮುಂದೆ ಸುಪ್ರೀಂ ಕೋರ್ಟ್ ಈ ಬಗ್ಗೆ ಯಾವ ನಿರ್ಧಾರಕ್ಕೆ ಬರುತ್ತದೆ, ದೇಶದೆಲ್ಲೆಡೆ ವಂದೇ ಮಾತರಂ ಕಡ್ಡಾಯವಾಗುತ್ತದೆಯೋ ಕಾದುನೋಡಬೇಕಾಗಿದೆ.

Leave A Reply