ಚಂಡಮಾರುತ.., ರೆಡ್ ಅಲರ್ಟ್…!!
Posted On October 11, 2018

ಮಂಗಳೂರು- ಬಂಗಾಳಕೊಲ್ಲಿಯಲ್ಲಿ ವಾಯುಭಾರತ ಕುಸಿದಿಂದ ಮಂಗಳೂರಿಗರು ಆತಂಕಕ್ಕೆ ಒಳಗಾಗಿದ್ದಾರೆ.ತಿತ್ಲಿ ಚಂಡಮಾರುತ ಹಿನ್ನಲೆಯಲ್ಲಿ ಮುಂದಿನ ದಿನದಲ್ಲಿ ಒಡಿಶಾ, ಆಂಧ್ರಪ್ರದೇಶದಲ್ಲಿ ಬಾರಿ ಮಳೆಯಾಗುವ ಸಾಧ್ಯತೆ ಇದೆ . ಮಂಗಳೂರಿನಲ್ಲಿಯು ಕೂಡ ಸಮುದ್ರದ ಅಲೆಗಳ ಅಬ್ಬರ ಜೋರಾಗಿದೆ. ಮಂಗಳೂರಿನ ಉಳ್ಳಾಲ , ಸೋಮೇಶ್ವರ , ಉಚ್ಚಿಲ ಭಾಗದಲ್ಲಿ ಎರಡು ದಿನಗಳಿಂದ ಸಮುದ್ರ ಅಲೆಗಳು ಜೋರಾಗಿದ್ದು ಮನೆಗಳಿಗೆ ನೀರು ನುಗ್ಗಿದ್ದು ಸಮುದ್ರದ ತಟದಲ್ಲಿರುವ ನಿವಾಸಿಗಳು ಆತಂಕದಲ್ಲಿದ್ದಾರೆ.
ಇನ್ನೂ ಅಕ್ಟೋಬರ್ ೧೩ ರವರೆಗೆ ತಿತ್ಲಿ ಚಂಡಮಾರುತದ ಎಪೆಕ್ಟ್ ಮಂಗಳೂರನಲ್ಲಿ ಇದೆ ಎಂಬುವುದನ್ನು ಹವಮಾನ ಇಲಾಖೆ ಸೂಚನೆ ನೀಡಿದ್ದು ..ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ.
ಒಡಿಶಾ ಮತ್ತು ಆಂಧ್ರಪ್ರದೇಶದದಲ್ಲಿ ಬಾರಿ ಮಳೆಯಾಗುವ ಸಾಧ್ಯತೆ ಇದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
- Advertisement -
Leave A Reply