ಜಗತ್ತಿನಾದ್ಯಂತ ಇಂಟರ್ ನೆಟ್ ಸೇವೆ ಸ್ತಬ್ಧ….!!!!
ರಷ್ಯಾ-ಮುಂದಿನ 48 ಗಂಟೆಗಳಲ್ಲಿ ಜಗತ್ತಿನಾದ್ಯಂತ ಇಂಟರ್ನೆಟ್ ಸೇವೆ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ ಎಂದು ರಷ್ಯಾ ಎಚ್ಚರಿಸಿದೆ.ರಷ್ಯಾದಲ್ಲಿನ ಪ್ರಮುಖ ಡೊಮೆನ್ ಸೇವೆಯಲ್ಲಿ ತೊಂದರೆ ಕಾಣಿಸಿಕೊಳ್ಳಲಿದ್ದು, ಇದರಿಂದ ಇಂಟರ್ನೆಟ್ ದಿನ ಬಳಕೆಯ ಗ್ರಾಹಕರಿಗೆ ತೊಂದರೆ ಆಗಲಿದೆ ಎಂದು ರಷ್ಯಾ ತಿಳಿಸಿದೆ.
ಇಂಟರ್ನೆಟ್ ಕಾರ್ಪೊರೇಷನ್ ಆಫ್ ಅಸೈನ್ಡ್ ನೇಮ್ಸ್ ಅಂಡ್ ನಂಬರ್ (ಎಸಿಎಎನ್ಎನ್ಎನ್) ಸಂಸ್ಥೆ ಪ್ರಮುಖ ಸರ್ವರ್ನಲ್ಲಿ ದುರಸ್ತಿ ಕಾರ್ಯ ಇರುವುದರಿಂದ ಇಂಟರ್ ನೆಟ್ ಬಳಕೆದಾರರಿಗೆ ಸಮಸ್ಯೆ ಆಗಬಹುದು. ಸಣ್ಣಪುಟ್ಟ ವ್ಯತ್ಯಾಸ ಆದರೂ ಸ್ತಬ್ಧಗೊಳ್ಳುವ ಸಾಧ್ಯತೆಯೂ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಇಂಟರ್ನೆಟ್ ಅಡ್ರೆಸ್ ಬುಕ್ ಮತ್ತು ಡೊಮೆನ್ ಹೆಸರು ಬಳಕೆಯ ವ್ಯವಸ್ಥೆ ರಕ್ಷಣೆ ಮಾಡುವ ಉದ್ದೇಶದಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಸೈಬರ್ ದಾಳಿಯನ್ನು ತಡೆಯಲು ಮತ್ತಷ್ಟು ತಾಂತ್ರಿಕ ಸೌಲಭ್ಯ ಹೆಚ್ಚಿಸಲಾಗುತ್ತಿದೆ ಎಂದು ರಷ್ಯಾ ಪ್ರಕಟಣೆಯಲ್ಲಿ ತಿಳಿಸಿದೆ.
ದುರಸ್ತಿ ಕಾರ್ಯದ ವೇಳೆ ಇತರೆ ಇಂಟರ್ನೆಟ್ ವ್ಯವಸ್ಥೆಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳದೇ ಇದ್ದರೆ ಅದರಿಂದ ದುಷ್ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಇಂಟರ್ನೆಟ್ ಸರ್ವರ್ ವ್ಯವಸ್ಥೆ ನೋಡಿಕೊಳ್ಳುವ ಸಂಸ್ಥೆಗಳು ಹಾಗೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ರಷ್ಯಾ ಮುನ್ನೆಚ್ಚರಿಕೆ ನೀಡಿದೆ.
Leave A Reply