ಬುದ್ಧಿವಂತ ಮಂಗಳೂರಿಗರೇ ನಮಗೆ ಇದು ಯಾಕೆ ಗೊತ್ತಾಗಿಲ್ಲ!!
ಭ್ರಷ್ಟಾಚಾರ ಅಂದರೆ ಲಂಚ ಕೊಡದೇ ಸರಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ಆಗುವುದಿಲ್ಲ ಎನ್ನುವ ವಾಕ್ಯವನ್ನು ಪ್ರಾರಂಭದಲ್ಲಿ ಅದ್ಯಾವ ಮಹಾನುಭವ ಹೇಳಿದ್ದನೋ, ಯಾವ ವರ್ಷ ಹೇಳಿದ್ದನೋ ಅದು ಇವತ್ತಿಗೂ ಸತ್ಯವಾಗಿಯೇ ಉಳಿದಿದೆ. ಸೂರ್ಯ ಚಂದ್ರ ಇರುವ ತನಕ ಲಂಚ ಎನ್ನುವುದು ಇರುತ್ತದೆ ಎಂದು ಹೇಳಿದರೆ ಅದು ಅತಿಶಯೋಕ್ತಿ ಆಗುವುದಿಲ್ಲ. ಏನು ಬದಲಾದರೂ ಲಂಚ ಕೊಡುವುದು, ಸ್ವೀಕರಿಸುವುದು ಬದಲಾಗುವುದಿಲ್ಲ ಎನ್ನುವುದು ಕೂಡ ನಿಜ. ಹಾಗಂತ ನಮ್ಮ ರಾಜ್ಯವನ್ನು ಇಲ್ಲಿಯವರೆಗೆ ಆಳಿದ ಯಾವುದೇ ಸರಕಾರ ಭ್ರಷ್ಟಾಚಾರವನ್ನು ಇಳಿಸುವ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡಿಲ್ಲ ಎಂದಲ್ಲ. ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಈ ಬಗ್ಗೆ ಸಾಕಷ್ಟು ಯೋಚಿಸಿತ್ತು.
ಸಕಾಲದಲ್ಲಿ ಆಗಬೇಕಾದರೆ ಲಂಚ ಕೊಡುವುದನ್ನು ನಾವು ನಿಲ್ಲಿಸಬೇಕು..
ಮುಖ್ಯವಾಗಿ ಈ ಲಂಚಾವತಾರ ಎಲ್ಲಿಂದ ಪ್ರಾರಂಭವಾಗುತ್ತದೆ ಎಂದರೆ ನೀವು ಒಂದು ಪ್ರಮಾಣಪತ್ರ ಪಡೆಯಬೇಕು ಎಂದು ಬಯಸಿ ಸರಕಾರಿ ಕಚೇರಿಗೆ ಹೋಗುತ್ತೀರಿ. ಅವರು ನೀವು ಇವತ್ತು ಅಕ್ಟೋಬರ್ 18 ಕ್ಕೆ ಅರ್ಜಿ ಕೊಟ್ಟರೆ ಒಂದು ತಿಂಗಳು ಬಿಟ್ಟು ನಂತರ ಬನ್ನಿ ಎನ್ನುತ್ತಾರೆ. ನಂತರ ನೀವು ಬಂದಾಗ ಅದ್ಯಾರೋ ಸಹಿ ಹಾಕುವವರು ರಜೆಯಲ್ಲಿದ್ದಾರೆ, ಮುಂದಿನ ಶನಿವಾರ ಬನ್ನಿ ಎಂದು ಹೇಳಿ ಸಾಗಾ ಹಾಕುತ್ತಾರೆ. ನಂತರ ನೀವು ಬಂದಾಗ ಅಧಿಕಾರಿಯವರು ಸಹಿ ಹಾಕಬೇಕು ಎಂದು ರೆಡಿ ಆದಾಗ ಅರ್ಜೆಂಟ್ ಬೇರೆ ಕೆಲಸ ಬಂದು ಎದ್ದು ಹೋದರು ಎಂದು ಸಬೂಬು ಹೇಳಿ ನಿಮ್ಮನ್ನು ಕಳುಹಿಸಿಕೊಡುತ್ತಾರೆ. ಇಷ್ಟಾಗುವಾಗ ನಿಮಗೆ ದಾರಿಯಲ್ಲಿ ಯಾರಾದರೂ ಸಿಕ್ಕಿ ಎಲ್ಲಿಗೆ ಹೋಗಿದ್ರಿ ಮಾರಾಯ್ರೆ ಎಂದು ಕೇಳುತ್ತಾರೆ. ನೀವು ಕಳೆದ ಮೂರು ತಿಂಗಳಿನಿಂದ ಒಂದು ಜಾತಿ ಪ್ರಮಾಣ ಪತ್ರಕ್ಕೆ ಅಲೆದಾಡುತ್ತಿರುವ ಸಂಗತಿ ಹೇಳುತ್ತೀರಿ. ಅದಕ್ಕೆ ನಿಮಗೆ ಸಿಕ್ಕಿದವರು ” ಓ ಅವನಾ ( ನಿಮ್ಮಿಂದ ಲಂಚ ಕೇಳಿ ಕೆಲಸ ಮಾಡಿಕೊಟ್ಟ ವ್ಯಕ್ತಿಯ ಹೆಸರು ಹಾಕಿಕೊಳ್ಳಿ) ಅವನಿಗೆ ಇನ್ನೂರು ರೂಪಾಯಿ ಕೊಟ್ಟರೆ ಇವತ್ತೇ ಮಾಡಿಕೊಡುತ್ತಾನೆ. ಹೀಗಿರುವಾಗ ನೀವು ಹಣ ಕೊಟ್ಟು ನಾಳೆಯೇ ಸರ್ಟಿಫಿಕೇಟ್ ತೆಗೆದುಕೊಳ್ಳಿ, ಅದು ಬಿಟ್ಟು ಹೀಗೆ ಯಾಕೆ ಅಲೆದಾಡುತ್ತೀರಿ ಎನ್ನುತ್ತಾರೆ. ನೀವು ಮರುದಿನ ಹೋಗಿ ಆ ಸಿಬ್ಬಂದಿಯ ಮುಂದೆ ಇನ್ನೂರು ರೂಪಾಯಿ ಹಿಡಿಯುತ್ತೀರಿ. ಅವನು ಹಲ್ಲುಗಿಂಜುತ್ತಾ ಪ್ರಮಾಣಪತ್ರ ಕೂಡಲೇ ಮಾಡಿಕೊಡುತ್ತಾನೆ. ಅಲ್ಲಿಗೆ ನಿಮ್ಮ ಕೆಲಸ ಸಲೀಸು. ನೀವು ಮುಂದಿನ ಬಾರಿ ಏನಾದರೂ ಸರ್ಟಿಫೀಕೆಟ್ ಮಾಡುವಾಗ ಮತ್ತೆ ಅಲೆದಾಡುವ ಕೆಲಸವೇ ಮಾಡುವುದಿಲ್ಲ. ನೇರವಾಗಿ ಇನ್ನೂರು ರೂಪಾಯಿ ಕೊಡುತ್ತೀರಿ, ಸರ್ಟಿಫಿಕೇಟ್ ಮಾಡಿಸಿಕೊಂಡು ಹೋಗುತ್ತೀರಿ. ಅಂದರ ನಂತರ ನಿಮ್ಮ ಯಾವುದೇ ಗೆಳೆಯ, ಹಿತೈಷಿ, ಸಂಬಂಧಿ ಸಿಕ್ಕಿದಾಗ ಅವರಿಗೆ ಇದೇ ರೀತಿಯ ಸಲಹೆ ಕೊಡುತ್ತೀರಿ. ಅವರು ಕೂಡ ಹೀಗೆ ಹಣ ಕೊಟ್ಟು ಮಾಡಿಸುತ್ತಾರೆ. ನಂತರ ಎಲ್ಲರೂ ಒಂದು ದಿನ ಸೇರಿದಾಗ ಈ ಲಂಚದ ಹಾವಳಿ ಎಷ್ಟು ದೊಡ್ಡದಾಗಿ ವ್ಯಾಪಿಸಿದೆಯಲ್ಲ ಎಂದು ಮಾತನಾಡಿ ಬೇಸರ ವ್ಯಕ್ತಪಡಿಸುತ್ತಿರಿ. ಹಾಗಾದರೆ ಇದನ್ನೆಲ್ಲ ಸರಿ ಮಾಡಲು ಸರಕಾರ ಏನು ಮಾಡಲಿಲ್ಲವಾ? ಮಾಡಿದೆ. ನಿಮಗೆ ಸಕಾಲದಲ್ಲಿ ಕೇಳಿದ ಸರ್ಟಿಫಿಕೇಟ್ ಸಿಗಬೇಕು ಎನ್ನುವ ಕಾರಣಕ್ಕೆ “ಸಕಾಲ” ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಕರಾವಳಿಯ ನಮ್ಮ ಪ್ರಜ್ಞಾವಂತ, ಬುದ್ಧಿವಂತ ಜನರಿಗೆ ಈ ಬಗ್ಗೆ ಕೇಳಿದರೆ “ಹೌದಾ” ಎನ್ನುತ್ತಾರೆ. ಆರೇಳು ವರ್ಷಗಳ ಹಿಂದೆ ಬಂದ ಈ ಯೋಜನೆಯ ಬಗ್ಗೆ ಮಂಗಳೂರಿನವರಿಗೆ ಗೊತ್ತಿರುವುದು ಕೇವಲ ಸಾಸಿವೆಯಷ್ಟು.
ಬೋರ್ಡ್ ಹಾಕಲು ಮೀನಾಮೇಷ ಯಾಕೆ?
ಸಕಾಲ ಯೋಜನೆಯಲ್ಲಿ ಎಷ್ಟು ಪ್ರಯೋಜನವಿದೆ ಎಂದರೆ ನಮಗೆ ಅತೀ ಹೆಚ್ಚು ಅಗತ್ಯ ಬೀಳುವ ಜಾತಿ ಪ್ರಮಾಣಪತ್ರದಿಂದ ಹಿಡಿದು ಆದಾಯ, ಜನನ, ಮರಣ, ಉದ್ದಿಮೆ ಪರವಾನಿಗೆ, ರಿನಿವಲ್ ನಿಂದ ಹಿಡಿದು ಒಟ್ಟು 897 ಪ್ರಮಾಣಪತ್ರವನ್ನು ಅರ್ಜಿ ಕೊಟ್ಟ ಇಂತಿಷ್ಟೆ ದಿನಗಳ ಒಳಗೆ ಪಡೆದುಕೊಳ್ಳಬಹುದು ಎನ್ನುವ ಅವಕಾಶವಿದೆ. ಆದರೆ ನಮಗೆ ಈ ಬಗ್ಗೆ ಯಾಕೆ ಸರಿಯಾದ ಮಾಹಿತಿ ಇಲ್ಲ ಎಂದರೆ ಯಾವ ಇಲಾಖೆಯಲ್ಲಿ ಯಾವ ರೀತಿಯ ಸೌಲಭ್ಯ ಸಕಾಲದಡಿಯಲ್ಲಿ ಸಿಗುತ್ತದೆ ಎಂದು ನಮಗೆ ಸ್ಪಷ್ಟತೆ ಇಲ್ಲ. ಆ ಸ್ಪಷ್ಟತೆ ಕೊಡುವ ಕಾರ್ಯವನ್ನು ಮಾಡಬೇಕಿರುವುದು ಆಯಾಯಾ ಸರಕಾರಿ ಕಚೇರಿಗಳು. ಉದಾಹರಣೆಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಯಾವೆಲ್ಲ ಸೌಲಭ್ಯ ಸಕಾಲದ ಮೂಲಕ ಸಿಗುತ್ತದೆ ಎನ್ನುವ ದೊಡ್ಡ ಬೋರ್ಡ್ ಬರೆದು ಅಲ್ಲಿ ಎದುರಿಗೆ ಹಾಕಿದರೆ ಆಗ ಅಲ್ಲಿಗೆ ಬರುವ ಎಲ್ಲರಿಗೂ ಗೊತ್ತಾಗುತ್ತಿತ್ತು. ಆದರೆ ಇಲ್ಲಿಯವರೆಗೆ ಅಂತಹ ಬೋರ್ಡನ್ನು ನಮ್ಮ ಪಾಲಿಕೆಯ ಅಂಗಳದಲ್ಲಿ ಎಲ್ಲಿ ಕೂಡ ಹಾಕಿಲ್ಲ. ತಹಶೀಲ್ದಾರ್ ಕಚೇರಿಯಲ್ಲಿಯೂ ಸೌಲಭ್ಯಗಳ ಪಟ್ಟಿ ಬರೆದು ಬೋರ್ಡ್ ಹಾಕಬೇಕು, ಕಂದಾಯ ವಿಭಾಗದಲ್ಲಿ, ಮೂಡಾ ಕಚೇರಿಯಲ್ಲಿ, ಆರ್ ಟಿಒ ಕಚೇರಿಯಲ್ಲಿ ಎಲ್ಲಾ ಕಡೆ ಹಾಕಬೇಕು. ಆದರೆ ಎಷ್ಟು ಸರಕಾರಿ ಕಚೇರಿಗಳಲ್ಲಿ ಇಂತಹ ಬೋರ್ಡ್ ನೀವು ನೋಡಿದ್ದಿರಿ. ಯಾಕೆ ಇಲ್ಲಿಯ ತನಕ ಹಾಕಿಲ್ಲ ಎಂದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ.
ಮಂಗಳವಾರ ಸಕಾಲ ಮಿಶನ್ ಆಡಳಿತಾಧಿಕಾರಿ ಮಥಾಯ್ ಅವರು ಮಂಗಳೂರಿಗೆ ಭೇಟಿ ಕೊಡುತ್ತಾರೆ ಎಂದಾಗ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಡಿಬಿಡಿಯಲ್ಲಿ ಬೋರ್ಡ್ ತಂದು ನಿಲ್ಲಿಸಿದ್ದಾರೆ. ಇಲ್ಲಿಯ ತನಕ ಅದರ ಸುದ್ದಿಯೇ ಇರಲಿಲ್ಲ. ಯಾಕೆ ಸುದ್ದಿ ಇರಲಿಲ್ಲ ಎಂದರೆ ಜನರು ತಮ್ಮ ಎಲ್ಲಾ ಕೆಲಸಗಳನ್ನು ಸಕಾಲದಲ್ಲಿ ಪಡೆದುಕೊಳ್ಳಲು ಹೋದರೆ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ಕಥೆ ಏನಾಗಬಹುದು
Leave A Reply