• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಗತ್ಯ ಇರುವ ರಸ್ತೆ ಬಿಟ್ಟು ತಮಗೆ ಲಾಭ ಇರುವ ರಸ್ತೆ ಅಗಲ ಮಾಡಲು ಪಾಲಿಕೆ ರೆಡಿ!!

TNN Correspondent Posted On November 12, 2018


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆ ಕಳೆದ ಐದು ವರ್ಷಗಳಲ್ಲಿ ಮಂಗಳೂರಿನ ಅಭಿವೃದ್ಧಿಗೆ ಏನು ಮಾಡಿದೆ ಎಂದು ಎದೆತಟ್ಟಿ ಹೇಳುತ್ತದೆ ಎಂದು ನೋಡಬೇಕು. ಒಂದು ನಗರದ ಅಭಿವೃದ್ಧಿ ಎಂದರೆ ಅಗಲ ಕಿರಿದಾದ ರಸ್ತೆಗಳನ್ನು ಅಗಲ ಮಾಡುವುದು ಕೂಡ ಪ್ರಮುಖವಾಗಿರುವ ಕಾರ್ಯಕ್ರಮ. ಕಳೆದ ಐದು ವರ್ಷಗಳ ಆಡಳಿತದಲ್ಲಿ ಮಂಗಳೂರಿನ ಯಾವ ರಸ್ತೆಯನ್ನು ಅಗಲ ಮಾಡುವ ಕೆಲಸಕ್ಕೆ ಪಾಲಿಕೆ ಕೈ ಹಾಕಿದೆ ಎನ್ನುವುದನ್ನು ಅದು ದಾಖಲೆ ಆಧಾರದಲ್ಲಿ ಹೇಳಬೇಕು. ಇಲ್ಲವೇ ಇಲ್ಲ, ಒಂದೇ ಒಂದು ರಸ್ತೆಯನ್ನು ಅಗಲ ಮಾಡಲು ಕಾಂಗ್ರೆಸ್ಸಿನ ಅತಿರಥ ಮಹಾರಥರು ಮನಸ್ಸು ಮಾಡಲೇ ಇಲ್ಲ. ಹಾಗಂತ ಕೆಲವು ರಸ್ತೆಗಳನ್ನು ಅಗಲ ಮಾಡಲು ಇವರು ಕೈ ಹಾಕಿದ್ದಾರೆ. ಅವು ಯಾವುದು ಗೊತ್ತಾ? ಯಾವ ರಸ್ತೆಯ ಕೊನೆಯಲ್ಲಿ ಪಾಲಿಕೆಯ ಕಾರ್ಫೊರೇಟರ್ ಗಳ ಮಾನಸ ಪಿತರು ವಸತಿ ಸಮುಚ್ಚಯ ಕಟ್ಟಲು ಹೊರಡುತ್ತಾರಲ್ಲ, ಅಂತಹ ರಸ್ತೆಗಳನ್ನು ಅಗಲ ಮಾಡಲು ನಮ್ಮ ಕಾರ್ಪೋರೇಟರ್ ಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಅದು ಜನರ ಮೇಲಿನ ಪ್ರೀತಿಯಿಂದಲ್ಲ, ಬಿಲ್ಡರ್ ಗಳ ಒತ್ತಾಯದಿಂದ. ಅಷ್ಟಕ್ಕೂ ಒಂದು ರಸ್ತೆಯನ್ನು ಅಗಲ ಮಾಡಬೇಕಾದರೆ ಮೊದಲು ಜಾಗ ಕಳೆದುಕೊಳ್ಳುವ ಮನೆಯವರಿಗೆ ಪಾಲಿಕೆ ನೋಟಿಸ್ ಕೊಡಬೇಕು. ಅದರ ಸ್ಕೆಚ್ ತಯಾರು ಮಾಡಬೇಕು. ಪೇಪರ್ ಡಾಕ್ಯುಮೆಂಟ್ ಎಲ್ಲ ರೆಡಿ ಮಾಡಬೇಕು. ರಸ್ತೆ ಅಗಲೀಕರಣ ಎಂದರೆ ಅದಕ್ಕಾಗಿಯೇ ಹೊಸ ಹೊಸ ಕಾನೂನು ಬಂದಿದೆ. ಅದನ್ನೆಲ್ಲಾ ಪಾಲಿಸಬೇಕು. ಆದರೆ ನಮ್ಮ ಪಾಲಿಕೆ ಅದನ್ನೆಲ್ಲ ಗಾಳಿಗೆ ತೂರುತ್ತಿದೆ ಎನ್ನುವುದಕ್ಕೆ ಇತ್ತೀಚೆಗೆ ಅನೇಕ ಉದಾಹರಣೆಗಳು ಸಿಗುತ್ತವೆ. ಇವತ್ತಿನ ಜಾಗೃತ ಅಂಕಣದಲ್ಲಿ ನಾನು ಹೇಳುವ ವಿಷಯ ಯಾವುದು ಎಂದರೆ ಹೆಚ್ಚು ಜನರು, ಅಸಂಖ್ಯಾತ ವಾಹನಗಳು ಸಂಚರಿಸುವ ರಸ್ತೆಗಳನ್ನು ಬಿಟ್ಟು ಪಾಲಿಕೆಯವರು ಯಾರೂ ಹೆಚ್ಚು ಹೋಗದ ಆದರೆ ಭವಿಷ್ಯದಲ್ಲಿ ಯಾವುದೋ ಬಿಲ್ಡರ್ ಗೆ ಉಪಯೋಗವಾಗಲಿರುವ ರಸ್ತೆಯೊಂದನ್ನು ಅಗಲ ಮಾಡಲು ಹೊರಟಿರುವುದು. ಆವತ್ತು ಅಗಲ ಮಾಡಿದ ಕಡೆ ಈಗ ಕಾಂಕ್ರೀಟ್… ಭಾರತೀಯ ಜನತಾ ಪಾರ್ಟಿ ಹಿಂದಿನ ಬಾರಿ ನಮ್ಮ ಪಾಲಿಕೆಯಲ್ಲಿ ಆಡಳಿತದಲ್ಲಿ ಇದ್ದಾಗ ಗಣಪತಿ ಹೈಸ್ಕೂಲ್ ರಸ್ತೆ ಮತ್ತು ಭವಂತಿ ರಸ್ತೆಯನ್ನು ಅಗಲ ಮಾಡಲು ಹೊರಟಿತ್ತು. ಅದರಂತೆ ಕೆಲವು ಬಿಲ್ಡಿಂಗ್ ಗಳ ಜಾಗಗಳನ್ನು ಕೂಡ ತೆಗೆದುಕೊಂಡಿದ್ದರು. ನಂತರ ಪಾಲಿಕೆಗೆ ಚುನಾವಣೆ ಬಂದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ತುಳಸಿಕಟ್ಟೆಗೂ ತೆರಿಗೆ ಹಾಕುತ್ತದೆ ಎಂದು ಗುಮ್ಮ ತೋರಿಸಿ, ಜನಾರ್ಧನ ಪೂಜಾರಿಯವರಿಂದ ಭರವಸೆ ಕೊಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅದು ಬೇರೆ ವಿಷಯ. ಆ ಕುರಿತು ಪ್ರತ್ಯೇಕವಾಗಿ ಮುಂದೆ ಯಾವತ್ತಾದರೂ ಹೇಳುತ್ತೇನೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಯಾಕೆ ಜನದಟ್ಟಣೆಯ ರಸ್ತೆಗಳನ್ನು ಅಗಲ ಮಾಡಿಲ್ಲ ಎನ್ನುವುದು ಸದ್ಯದ ಪ್ರಶ್ನೆ. ಅದರೊಂದಿಗೆ ಬಿಲ್ಡರ್ ಗಳ ಪಾಲಿಗೆ ಭವಿಷ್ಯದಲ್ಲಿ ಲಾಭ ಕೊಡುವ ರಸ್ತೆಯನ್ನು ಮಾತ್ರ ಅಗಲ ಮಾಡಲು ಕೈ ಹಾಕಿರುವುದು ತಾಜಾ ಉದಾಹರಣೆ. ನಮ್ಮ ಪಾಲಿಕೆಯಲ್ಲಿರುವ ಆಡಳಿತ ಪಕ್ಷದವರು ಎಷ್ಟು ಹೇಡಿಗಳು ಎಂದರೆ ಯಾವ ರಸ್ತೆಯನ್ನು ಅಗಲ ಮಾಡಿ ಅಲ್ಲಿ ಕಾಂಕ್ರೀಟ್ ಹಾಕಿ ಜನರಿಗೆ ಅನುಕೂಲ ಮಾಡಿಕೊಡಬೇಕೋ ಹಾಗೆ ಮಾಡದೇ ಬಿಜೆಪಿ ಅವಧಿಯಲ್ಲಿ ಯಾರೆಲ್ಲ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಟ್ಟಿದ್ದರೂ ಆ ಬಿಟ್ಟುಕೊಟ್ಟ ಜಾಗಗಳಲ್ಲಿ ಮಾತ್ರ ಕಾಂಕ್ರೀಟಿಕರಣ ಮಾಡಿದ್ದಾರೆ. ಯಾರು ಬಿಟ್ಟು ಕೊಟ್ಟಿಲ್ಲವೋ ಅವರಿಂದ ಒಂದಿಂಚೂ ಜಾಗ ತೆಗೆದುಕೊಳ್ಳುವ ಪ್ರಯತ್ನ ಮಾಡಿಲ್ಲ. ಕಾನೂನಿನಲ್ಲಿ ಏನಿದೆ ಎಂದರೆ ಒಂದು ರಸ್ತೆ ಅಗಲೀಕರಣ ಮಾಡುವಾಗ ಜಾಗದ ಮಾಲೀಕರು ಎಷ್ಟು ವಿನಂತಿ ಮಾಡಿದರೂ ಬಿಟ್ಟುಕೊಡದೇ ಇದ್ದರೆ ಅಂತಹ ಜಾಗಗಳನ್ನು ಭೂಸ್ವಾಧೀನ ಮಾಡಿಕೊಳ್ಳಬಹುದು. ಆದರೆ ನಮ್ಮ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಯಾವ ದಾಕ್ಷಿಣ್ಯಕ್ಕೆ ಬಿದ್ದಿದ್ದರೋ ಗೊತ್ತಿಲ್ಲ, ಇವತ್ತಿಗೂ ಕೇವಲ ಟಿಡಿಆರ್ ತೋರಿಸಿ ವಿನಂತಿಯೇ ಮಾಡುತ್ತಿದ್ದಾರೆ ವಿನ: ಸ್ವಾಧೀನ ಮಾಡುವ ಗಂಡಸುತನ ತೋರಿಸಿಲ್ಲ. ಮೇರಿಹಿಲ್ ನಲ್ಲಿ ಅಗತ್ಯ ಏನಿದೆ… ಆದರೆ ಅದೇ ಮತ್ತೊಂದು ಕಡೆ ತುಂಬಾ ಜನರಿಗೆ ಅಗತ್ಯ ಬೀಳದ ರಸ್ತೆಯೊಂದನ್ನು ಅಗಲ ಮಾಡಲು ಹೊರಟು ಬಿಟ್ಟಿದ್ದಾರೆ. ಅದು ಯಾವುದೇಂದರೆ ಮೇರಿಹಿಲ್ ಹೆಲಿಪ್ಯಾಡ್ ಗೆ ಹೋಗುವ ರಸ್ತೆ. ಆ ರಸ್ತೆಯಲ್ಲಿ ದಿನನಿತ್ಯ ಎಷ್ಟು ಜನ ಹೋಗುತ್ತಾರೆ ಎನ್ನುವುದನ್ನು ಕೈಬೆರಳಿನ ಸಹಾಯದಿಂದ ಲೆಕ್ಕ ಹಾಕಿ ಹೇಳಬಹುದು. ಆದರೆ ಆ ರಸ್ತೆಯನ್ನು ಅಗಲ ಮಾಡಲು ಪಾಲಿಕೆ ವಿಪರೀತ ಉತ್ಸಾಹ ತೋರುತ್ತಿದೆ. ಅದಕ್ಕಾಗಿ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದೆ. ಇವರು ಹೀಗೆ ಮಾಡುವುದರಿಂದ ಒಂದು ವಿಷಯ ಗ್ಯಾರಂಟಿ ಆಗುತ್ತದೆ. ಅದೇನೆಂದರೆ ಬರುವ ದಿನಗಳಲ್ಲಿ ಆ ರಸ್ತೆಯ ಕೊನೆಯಲ್ಲಿ ಯಾವುದಾದರೂ ಬೃಹತ್ ವಸತಿ ಸಮುಚ್ಚಯ ಆಗಬಹುದು ಅಥವಾ ಆ ರಸ್ತೆಯಲ್ಲಿ ಇರುವ ಯಾವುದಾದರೂ ಸಂಸ್ಥೆಯ ಮಾಲೀಕರಿಂದ ಅಗಲ ಮಾಡಿ ಎಂದು ಪಾಲಿಕೆಗೆ ಒತ್ತಡ ಬಿದ್ದಿರಬಹುದು. ಇತ್ತ ಜಿಎಚ್ ಎಸ್ ರಸ್ತೆಯಲ್ಲಿ ಜಾಗ ಬಿಟ್ಟು ಕೊಡಲ್ಲ ಎಂದು ಹೇಳಿದ ಮಾಲೀಕರ ವಿರುದ್ಧ ಮಾತನಾಡುವ ಧೈರ್ಯ ಇಲ್ಲದವರು ಅತ್ತ ಮೇರಿಹಿಲ್ ನಲ್ಲಿ ಯಾರಿಗೋ ಲಾಭ ಮಾಡಿಕೊಡಲು ರಸ್ತೆ ಅಗಲಕ್ಕೆ “ಕೈ” ಹಾಕುತ್ತಾರೆ!�

  • Share On Facebook
  • Tweet It


- Advertisement -


Trending Now
ಮಂಗಳೂರಿನ ಕಥೆ ಏನಾಗಿತ್ತು?
Tulunadu News November 29, 2023
42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
Tulunadu News November 28, 2023
Leave A Reply

  • Recent Posts

    • ಮಂಗಳೂರಿನ ಕಥೆ ಏನಾಗಿತ್ತು?
    • 42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
    • ಕಾಂತಾರಾ - 1 ತುಳು ಭಾಷೆಗೆ ಡಬ್ ಆಗಲ್ವಾ?
    • ಮೀನಿನ ರೇಟ್ ಜಾಸ್ತಿ ಆಗಲು ಏನು ಕಾರಣ ಗೊತ್ತಾ?
    • ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ!
    • ದುಬಾರಿ ಗಿಫ್ಟ್ ಸಿಗದ ಕೋಪ, ಹೆಂಡತಿ ಹೊಡೆದು ಗಂಡ ಮೃತ್ಯು!
    • ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಜೋರು ಮಾಡಬಾರದಾ?
    • ಸರಕಾರಕ್ಕೆ ಶಾಲೆಯಲ್ಲಿ ಶಿಕ್ಷಣಕ್ಕಿಂತ ಆಹಾರವೇ ಮುಖ್ಯವಾಯಿತೇ!
    • ಬಸ್ ಕಂಡಕ್ಟರ್ ಗೆ ಚಾಕು ಹಾಕಿದವನ ಕಾಲಿಗೆ ಶೂಟ್ ಮಾಡಿ ಬಂಧಿಸಿದ ಯುಪಿ ಪೊಲೀಸರು
    • ಚೀನಾದಲ್ಲಿ ಮತ್ತೊಂದು ಸೋಂಕು, ಎಚ್ಚರವಹಿಸಲು ಭಾರತ ನಿರ್ಧಾರ
  • Popular Posts

    • 1
      ಮಂಗಳೂರಿನ ಕಥೆ ಏನಾಗಿತ್ತು?
    • 2
      42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
    • 3
      ಕಾಂತಾರಾ - 1 ತುಳು ಭಾಷೆಗೆ ಡಬ್ ಆಗಲ್ವಾ?
    • 4
      ಮೀನಿನ ರೇಟ್ ಜಾಸ್ತಿ ಆಗಲು ಏನು ಕಾರಣ ಗೊತ್ತಾ?
    • 5
      ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search