• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸತ್ಯ ಬರೆದರೆ, ಹೇಳಿದರೆ ಆವತ್ತು ನಾನು, ನಿನ್ನೆ ಸಂತೋಷ್ ತಮ್ಮಯ್ಯ, ನಾಳೆ….?

hanumantha kamath Posted On November 13, 2018


  • Share On Facebook
  • Tweet It

ಸುಳ್ಳಿನ ಆಯುಷ್ಯ ದೊಡ್ಡದಿರಬಹುದು. ಆದರೆ ಸತ್ಯಕ್ಕೆ ಸಾವಿಲ್ಲ. ಈ ವಾಕ್ಯಗಳು ಇವತ್ತು ನನ್ನ ವಿಷಯದಲ್ಲಿ ಸಾಬೀತಾಗಿವೆ. ಮಂಗಳೂರಿನ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದದ ಅಖಂಡ ಭಜನಾ ಸಪ್ತಾಹದ ಮೊದಲ ದಿನದ ದೇವರ ಸೇವೆಯಲ್ಲಿದ್ದ ನನಗೆ ಇವತ್ತು ಕರ್ನಾಟಕ ಹೈಕೋರ್ಟ್ ಕೊಟ್ಟಿರುವ ತೀರ್ಪು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ. ಹೌದು, ಅದು 2013 ರ ವಿಧಾನಸಭಾ ಚುನಾವಣಾ ಸಮಯ. ಮಂಗಳೂರು ನಗರ ದಕ್ಷಿಣದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜೆ ಆರ್ ಲೋಬೋ ಅವರಿಗೆ ಕಾಂಗ್ರೆಸ್ ಟಿಕೆಟು ಕೊಟ್ಟಿತ್ತು. ರಾಜಕಾರಣಕ್ಕೆ ಪ್ರವೇಶಿಸುವ ಮೊದಲು ಲೋಬೋ ಸರಕಾರಿ ಅಧಿಕಾರಿಯಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಕೂಡ ಆಗಿದ್ದರು. ಆ ಸಂದರ್ಭದಲ್ಲಿ ಏಶಿಯನ್ ಡೆವಲಪ್ ಮೆಂಟ್ ಬ್ಯಾಂಕ್ ನಿಂದ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಕೋಟ್ಯಾಂತರ ರೂಪಾಯಿ ಸಾಲ ಬಂದಿತ್ತು. ಆ ಹಣದಿಂದ ಎಷ್ಟು ಅಭಿವೃದ್ಧಿ ಆಗಿದೆ, ಏನೆಲ್ಲಾ ಕೆಲಸ ಕಾರ್ಯ ಆಗಿದೆ ಎಂದು ಪ್ರಶ್ನೆಗಳನ್ನು ಪಟ್ಟಿ ಮಾಡಿ ಇದಕ್ಕೆ ಉತ್ತರ ಕೊಡಿ ಕಾಂಗ್ರೆಸ್ ಅಭ್ಯರ್ಥಿಯವರೇ ಎಂದು ಪ್ರಶ್ನಿಸಿ ಮಂಗಳೂರಿನ ಪ್ರಸಿದ್ಧ ಪತ್ರಿಕೆಗೆ ಕಳುಹಿಸಿಕೊಟ್ಟಿದ್ದೆ. ಅದನ್ನು ಅವರು ಪ್ರಕಟಿಸಿದ್ದರು. ನಾನು ಆಗಿನ ಕಾಂಗ್ರೆಸ್ ಅಭ್ಯರ್ಥಿಗೆ ಕೇಳಿದ ಪ್ರಶ್ನೆಗಳಿಗೆ ನಂತರ ಅವರಿಂದ ಯಾವುದೇ ಉತ್ತರ ಬಂದಿರಲಿಲ್ಲ.

ನನ್ನ ಹೆಸರನ್ನು ಯಾಕೆ ಎಳೆದು ತರಲಾಯಿತೋ..

ನನ್ನ ಪ್ರಶ್ನೆಗಳು ಪ್ರಕಟವಾಗಿದ್ದ ಆ ಪತ್ರಿಕೆಯ ಪುಟವನ್ನು ಯಾರೋ ಕಟ್ ಮಾಡಿ ಅದರ ಪ್ರತಿಗಳ ಪ್ರಿಂಟ್ ತೆಗೆದು ಹಂಚಲು ಸಿದ್ಧ ಮಾಡಿಕೊಂಡಿದ್ದರು. ಹಾಗೆ ಅಂಬಾಸಿಡರ್ ಕಾರಿನಲ್ಲಿ ಅದರ ಪ್ರಿಂಟ್ ಗಳನ್ನು ಹಂಚಲು ತೆಗೆದುಕೊಂಡು ಹೋಗುತ್ತಿದ್ದಾಗ ಅದನ್ನು ಪೊಲೀಸರು ಹಿಡಿದಿದ್ದಾರೆ. ಆ ಪ್ರತಿಗಳಲ್ಲಿ ನನ್ನ ಹೆಸರು ಇದ್ದ ಕಾರಣಕ್ಕೆ ನನ್ನ ಮೇಲೆ ದೂರು ಹಾಕಲಾಗಿತ್ತು. ನನ್ನ ಹೆಸರು ಪ್ರಕರಣದಲ್ಲಿ ಯಾಕೆ ಎಳೆದು ತರಲಾಗಿತ್ತು ಎನ್ನುವುದರ ಬಗ್ಗೆ ಸಮಂಜಸ ಕಾರಣ ಪೊಲೀಸರ ಬಳಿಯೂ ಇರಲಿಲ್ಲ. ಯಾಕೆಂದರೆ ಪ್ರಿಂಟ್ ಗಳನ್ನು ಸಾಗಿಸುತ್ತಿದ್ದ ವಾಹನದಲ್ಲಿ ನಾನು ಇರಲಿಲ್ಲ ಅಥವಾ ನನ್ನ ಸೂಚನೆಯ ಮೇಲೆ ಅವು ಸಾಗಾಟವಾಗುತ್ತಲೂ ಇರಲಿಲ್ಲ. ಯಾರೋ ತಮ್ಮ ಸ್ವಾರ್ಥಕ್ಕೆ ಮಾಡಿದ ಕೆಲಸಕ್ಕೆ ನಾನು ಜವಾಬ್ದಾರಿಯಾಗುವ ಸಾಧ್ಯತೆ ಕೂಡ ಇರಲಿಲ್ಲ. ಆದರೆ ಅನಗತ್ಯವಾಗಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿ ಹಾಕಲಾಯಿತು. ಅದರಲ್ಲಿ ದೊಡ್ಡ ದೊಡ್ಡವರ “ಕೈ” ಇತ್ತು ಎನ್ನುವುದಕ್ಕೆ ಯಾವುದೇ ಸಂಶಯವಿರಲಿಲ್ಲ. ಮಂಗಳೂರಿನ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಬೇರೆಯವರಿಗಿಂತ ಒಂದಿಷ್ಟು ಹೆಚ್ಚೇ ಧೈರ್ಯ ಮಾಡಿ ನಮ್ಮ ಊರಿಗೆ ಬಂದ ಸಾಲದ ಹಣವನ್ನು ಏನು ಮಾಡಿದ್ದೀರಿ ಎಂದು ಕೇಳಿದ್ದೇ ತಪ್ಪಾ? ಬಹುಶ: ಬೇರೆ ಯಾರಾದರೂ ನನ್ನ ಜಾಗದಲ್ಲಿ ನಿಂತು ಪ್ರಶ್ನೆ ಕೇಳಿದ್ದರೂ ಅದರಲ್ಲಿ ತಪ್ಪಿರಲಿಲ್ಲ. ಯಾಕಂದರೆ ಯಾವುದೇ ಅನುದಾನ, ಸಾಲ ಇದೆಲ್ಲ ನಮ್ಮ ತೆರಿಗೆಯ ಹಣದ ಪರೋಕ್ಷ ಅವತಾರಗಳೇ. ಅವು ಸರಿಯಾಗಿ ಖರ್ಚಾಗಿದೆಯಾ ಎಂದು ಕೇಳುವಂತಹ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದ್ದೇ ಇರುತ್ತದೆ. ಆದರೆ ನಾವ್ಯಾಕೆ ಸುಮ್ಮನೆ ಪ್ರಶ್ನೆ ಕೇಳಿ ಹಾಳಾಗುವುದು ಎಂದು ಯಾರೂ ಪ್ರಶ್ನಿಸುವ ಧೈರ್ಯ ಮಾಡುವುದಿಲ್ಲ. ಅದೆಲ್ಲ ಆಗಿ ನಾಲ್ಕೂವರೆ ವರ್ಷಗಳ ಆದ ನಂತರ ಈ ಪ್ರಕರಣದ ಬಗ್ಗೆ ನಾನು ನಮ್ಮ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಮಾಡಿ ನನ್ನ ಮೇಲೆ ಹಾಕಿರುವ ಸುಳ್ಳು ದೂರಿನ ಬಗ್ಗೆ ನ್ಯಾಯ ಕೇಳಿದೆ. ಅನ್ಯಾಯ ಆದ ಕಡೆ ಪ್ರಶ್ನೆ ಮಾಡಿದ್ದು ತಪ್ಪಾ ಎಂದು ಹೈಕೋರ್ಟಿನ ಮೊರೆ ಹೋಗಿದ್ದೆ. ನನ್ನ ಪರವಾಗಿ ಯುವ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದರು. ಅಂತಿಮವಾಗಿ ನನ್ನ ಮೇಲೆ ಯಾರೋ “ಕೈ” ಆಡಿಸಿ ದಾಖಲಿಸಿದ ಸುಳ್ಳು ದೂರನ್ನು ಮಾನ್ಯ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ. ಆ ಮೂಲಕ ನ್ಯಾಯ ನನಗೆ ಒಲಿದಿದೆ. ಸತ್ಯವನ್ನು ಎತ್ತಿ ಹಿಡಿದು
ಅನ್ಯಾಯದ ವಿರುದ್ಧ ಹೋರಾಡಲು ನನಗೆ ಇದರಿಂದ ಮತ್ತಷ್ಟು ನೈತಿಕ ಸ್ಥೈರ್ಯ ಬಂದಿದೆ. ಅದಕ್ಕಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಗೂ ನನ್ನ ಪರವಾಗಿ ವಾದಿಸಿದ ವಕೀಲ ಅರುಣ್ ಶ್ಯಾಮ್ ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ.

ಸಂತೋಷ್ ತಮ್ಮಯ್ಯ ಅವರನ್ನು ಮಧ್ಯರಾತ್ರಿ ಬಂಧಿಸಿದರು..

ನಮ್ಮ ಊರು, ಜಿಲ್ಲೆ, ರಾಜ್ಯದಲ್ಲಿ ಹೀಗೆ ತಮಗೆ ಆಗದವರು ಪ್ರಶ್ನಿಸಿದರು ಎನ್ನುವ ಕಾರಣಕ್ಕೆ ಅವರ ಮೇಲೆ ಸುಳ್ಳು ಕೇಸ್ ಹಾಕಿ ತೊಂದರೆ ಕೊಡುವ ಸಂಪ್ರದಾಯ ನನ್ನ ಮೇಲೆ ಮೊದಲನೇಯದ್ದು ಅಲ್ಲ, ಕೊನೆಯದ್ದೂ ಅಲ್ಲ. ನಿನ್ನೆ ಮಧ್ಯರಾತ್ರಿ ಹೊಸದಿಗಂತದ ಅಂಕಣಕಾರ ಸಂತೋಷ್ ತಮ್ಮಯ್ಯ ಅವರನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಸಂತೋಷ್ ತಮ್ಮಯ್ಯ ತಮ್ಮ ನೇರ ಬರವಣಿಗೆಯಿಂದ ಜನಮಾನಸದಲ್ಲಿ ಪ್ರೀತಿ ಸಂಪಾದಿಸಿದವರು. “ನಾನು ಕೂಡ ನಗರದ ನಕ್ಸಲ್” ಎಂದು ಬೋರ್ಡ್ ಬರೆಸಿ ಕುತ್ತಿಗೆಗೆ ಹಾಕಿಕೊಂಡವರನ್ನು ಪೊಲೀಸರು ಬಂಧಿಸುವುದಿಲ್ಲ. ಅದೇ ಸತ್ಯ ಹೇಳಿದ ಬಲಪಂಥಿಯ ಲೇಖಕರನ್ನು ಬಂಧಿಸಿ ಅದು ಕೂಡ ನಟ್ಟ ಮಧ್ಯರಾತ್ರಿಯಲ್ಲಿ ಬಂಧಿಸಿ ರಾಜ್ಯ ಸರಕಾರ ತನ್ನ ವಿಕೃತಿ ತೋರಿಸುತ್ತದೆ. ನಮ್ಮ ರಾಜ್ಯದಲ್ಲಿ ಯಾರೂ ಅಧಿಕಾರದಲ್ಲಿ ಇರುತ್ತಾರೋ ಅವರಿಗೆ ಹಿತವಾದದ್ದನ್ನು ಬರೆದರೆ, ಖುಷಿಯಾಗುವುದನ್ನು ಹೇಳಿದರೆ ಅಂತವರಿಗೆ ಬಿರುದು ಬಾವಲಿ ಹುಡುಕಿಕೊಂಡು ಬರುತ್ತದೆ. ಅದೇ ಸತ್ಯ ಹೇಳಿದರೆ ಸಂತೋಷ್ ತಮ್ಮಯ್ಯನವರಿಗೆ ಆದ ಗತಿಯೇ ಆಗುತ್ತದೆ ಎಂದು ರಾಜ್ಯ ಸರಕಾರ ತೋರಿಸಿಕೊಟ್ಟಿದೆ. ಅಷ್ಟಕ್ಕೂ ಇಂತಹ ಪ್ರಕರಣದಲ್ಲಿ ಪೊಲೀಸರು ಮಧ್ಯರಾತ್ರಿ ಬಂದು ಬಂಧಿಸುವ ಅಗತ್ಯ ಏನಿತ್ತು ಎನ್ನುವುದು ಯಕ್ಷ ಪ್ರಶ್ನೆ. ಸಂತೋಷ್ ತಮ್ಮಯ್ಯ ಭಯೋತ್ಪಾಕರಲ್ಲ, ದೇಶದ್ರೋಹದ ಯಾವುದೇ ಕೆಲಸ ಮಾಡಿಲ್ಲ. ಅವರು ಒಬ್ಬರು ನಿರ್ಭಿತ ಲೇಖಕರು. ಅಂತವರನ್ನು ಹೇಡಿಯಂತೆ ಮಧ್ಯರಾತ್ರಿ ಮನೆಗೆ ಸುತ್ತುವರಿದು ಬಂಧಿಸುವ ಅಗತ್ಯ ಏನಿತ್ತು ಎನ್ನುವುದನ್ನು ರಾಜ್ಯ ಸರಕಾರ ಮತ್ತು ಗೃಹ ಇಲಾಖೆ ಹೇಳಬೇಕು. ಹೀಗೆ ಇಲಾಖೆಗಳನ್ನು ದುರುಪಯೋಗ ಮಾಡಿ ಸರಕಾರ ತನಗೆ ಆಗದವರ ಧ್ವನಿಯನ್ನು ಅಡಗಿಸುವ ಕೆಲಸ ಮಾಡುವುದನ್ನು ಪ್ರಜ್ಞಾವಂತ ಸಮಾಜ ಖಂಡಿಸಬೇಕು. ಇವತ್ತಿನ ಕಾಲದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರೇ ಕಡಿಮೆ ಆಗಿದ್ದಾರೆ. ಹಾಗಿರುವಾಗ ಕೋಟ್ಯಾಂತರ ಸಾಲದ ಹಣವನ್ನು ಎಲ್ಲಿ ಉಪಯೋಗಿಸಿದ್ದಿರಿ ಎಂದು ಕೇಳಿದ ನನ್ನಂತವರನ್ನು, ಟಿಪ್ಪುವಿನ ನೈಜ ಮುಖವನ್ನು ಅನಾವರಣ ಮಾಡಿದ್ದಾರೆ ಎಂದು ಸಂತೋಷ್ ತಮ್ಮಯ್ಯ ಅಂತವರಿಗೆ ಹೀಗೆ ತೊಂದರೆ ಕೊಡುವ ಮೂಲಕ ಕೌರವರಿಗೆ ವಿಕೃತ ಆನಂದ ಸಿಗಬಹುದು. ಆದರೆ ಸತ್ಯ ಸಾಯಲ್ಲ ಎನ್ನುವುದನ್ನು ಅವರ್ಯಾರು ಮರೆಯಬಾರದು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
hanumantha kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
hanumantha kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search