ನಾಳೆ ಮಂಗಳೂರಿಗೆ ಅಮೀತ್ ಶಾ ಭೇಟಿ!
ಮಂಗಳೂರು– ನವೆಂಬರ್ 13 ರಂದು ಮಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಳೆ ಆಗಮಿಸಲಿದ್ದಾರೆ , ಗುರುವಾರ ನಡೆಯುವ ಆರ್ ಎಸ್ ಎಸ್ ಬೈಠಕ್ ನಲ್ಲಿ ಭಾಗಿಯಾಗಲಿದ್ದಾರೆ.
ನಾಳೆ ಸಂಜೆ 5 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ರಾಷ್ಟ್ರದಾದ್ಯಂತ ಆರ್ ಎಸ್ ಎಸ್ ಅಖಿಲ ಭಾರತ ಬೈಠಕ್ ನಡೆಯುತ್ತಿದ್ದು,ನವೆಂಬರ್ 8 ರಿಂದ 16 ರವರೆಗೆ ಏಕಕಾಲದಲ್ಲಿ ವಾರಣಾಸಿ ಹಾಗೂ ಮಂಗಳೂರಿನಲ್ಲಿ ಈ ಬೈಠಕ್ ನಡೆಯುತ್ತಿದೆ.
ನಾಳೆ ಮಂಗಳೂರಿಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುರುವಾರ ಸಂಘನಿಕೇತನದಲ್ಲಿ ಆರೆಸ್ಸೆಸ್ ಬೈಠಕ್ ನಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ದೇಶದಾದ್ಯಂತ ಸಂಚಲನ ಮೂಡಿಸಿರುವ ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತ ವಿಚಾರದ ಬಗ್ಗೆ ಅಮಿತ್ ಶಾ ಆರ್ ಎಸ್ ಎಸ್ ನಾಯಕರೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ. ಮಂಬರುವ ಲೋಕ ಸಭಾ ಚುನಾವಣೆಗೆ ಮಂಗಳೂರಿನಲ್ಲಿ ನಡೆಯುವ ಬೈಠಾಕ್ ನಲ್ಲಿ ಕೆಲವೊಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕೂಡ ಇದೆ.
Leave A Reply