ಅಕ್ರಮ ಮರಳುಗಾರಿಕೆಗೆ ಸಚಿವರ ಬೆಂಬಲ.!

ಮಂಗಳೂರು-ಅಕ್ರಮ ಮರಳುಗಾರಿಕೆ ವೇಳೆ ದಾಳಿ ನಡೆಸಿ ಪೊಲೀಸರು ವಶಕ್ಕೆ ಪಡೆದ ಲಾರಿಗಳನ್ನು ಅದರ ಮಾಲಕರಿಗೆ ವಾಪಾಸ್ ಕೊಡಿಸುವ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿರುವುದಾಗಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾಹಿತಿ ನೀಡಿದ್ದಾರೆ. ಆದ್ರೆ ಖಾದರ್ ಸಾಹೇಬರ ಈ ನಡೆ ಎಷ್ಟರ ಮಟ್ಟಿಗೆ ಸರಿ ಎಂಬ ಮಾತು ಕೇಳಿ ಬಂದಿದ್ದು, ಖಾದರ್ ಮರಳು ದಂಧೆಕೋರರ ಬೆಂಬಲಕ್ಕೆ ನಿಂತ್ರಾ ಎನ್ನುವ ಆರೋಪ ಕೇಳಿ ಬಂದಿದೆ. ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಖಾದರ್, ಮರಳು ದಂಧೆಗೆ ಪೊಲೀಸರು ಮತ್ತು ಅಧಿಕಾರಿಗಳು ದಾಳಿ ನಡೆಸಿ ಅಲ್ಲಿನ ವಸ್ತುಗಳನ್ನು ವಶಕ್ಕೆ ಪಡೆಯುತ್ತಾರೆ. ಇವುಗಳಲ್ಲಿ ಅನೇಕ ಲಾರಿಗಳಿದ್ದು, ಜಿಲ್ಲೆಯ ಪೊಲೀಸ್ ಠಾಣೆಗಳ ಮುಂಭಾಗ ಸಾಲಾಗಿ ನಿಂತಿದೆ. ಇದರಿಂದ ಲಾರಿಗಳಿಗೆ ತುಕ್ಕು ಹಿಡಿದಿದ್ದು, ಸುಖಾಸುಮ್ನನೆ ಹಾಳಾಗುತ್ತಿದೆ. ಹೀಗಾಗಿ ಆ ಲಾರಿಗಳನ್ನು ಮಾಲೀಕರಿಗೆ ಬಿಡಿಸಿ ಕೊಡಲು ಜಿಲ್ಲಾಧಿಕಾರಿ ಜೊತೆ ಚರ್ಚಿಸಿದ್ದೇನೆ. ಒಂದು ಸಭೆ ಕರೆದು ಲಾರಿಗಳನ್ನು ರಿಲೀಸ್ ಮಾಡೋ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದರು. ಆದ್ರೆ ಖಾದರ್ ಸಾಹೇಬರ ಈ ನಡೆ ಎಷ್ಟರ ಮಟ್ಟಿಗೆ ಸರಿ ಎನ್ನುವ ಮಾತು ಕೇಳಿ ಬಂದಿದೆ. ಇನ್ನು ಇದೇ ವೇಳೆ ಪತ್ರಕರ್ತರು ಖಾದರ್ ಅವರ ನಡೆಯ ಬಗ್ಗೆ ಪ್ರಶ್ನೆ ಮಾಡಿದ್ರು. ಅಕ್ರಮಕ್ಕೆ ಬೆಂಬಲ ಸರಿಯಾ ಅಂತ ಕೇಳಿದ್ರು. ಈ ವೇಳೆ ಸಮಜಾಯಿಷಿ ನೀಡಿದ ಸಚಿವ ಖಾದರ್, ನೀವು ಹೇಳೋದು ಸರಿ. ಹೀಗಾಗಿ ನಾನು ಕೂಡ ಹೆಚ್ಚು ಮಾತನಾಡಲ್ಲ. ಆದ್ರೆ ಮಾನವೀಯತೆ ದೃಷ್ಟಿಯಿಂದ ಡಿಸಿಯವರಿಗೆ ಹೇಳಿದೆ ಅಷ್ಟೇ. ಅನೇಕರು ಸಾಲ ಮಾಡಿ ಲಾರಿ ಖರೀದಿಸಿರುತ್ತಾರೆ. ಆದ್ರೆ ಈ ರೀತಿ ಆದಾಗ ಮನೆ ನೋಡಿಕೊಳ್ಳೋದು ಕಷ್ಟ. ಹೀಗಾಗಿ ಇದನ್ನು ಮಾನವೀಯತೆ ದೃಷ್ಟಿಯಿಂದ ಕಾನೂನು ವ್ಯಾಪ್ತಿಯಲ್ಲಿ ಸರಿ ಪಡಿಸಲು ಹೇಳಿದ್ದೇನೆ ಎಂದರು. ಅದರೆ ಈ ರೀತಿ ಅಕ್ರಮ ಲಾರಿಗಳ ಪರ ಸಚಿವರೇ ಬ್ಯಾಟ್ ಬೀಸಿರೋದು ಸರಿಯಲ್ಲ ಎಂಬ ಮಾತುಗಳು ಕೇಳಿ ಬಂದಿದೆ.
Leave A Reply