• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇಷ್ಟು ನಿಕೃಷ್ಟ ರಾಜಕೀಯ ಮಾಡುವ ಪರಿಸ್ಥಿತಿ ಖಾದರ್ ಮತ್ತು ಮೊಯಿಲಿ ಅವರಿಗೆ ಬರಬಾರದಿತ್ತು!!

hanumantha kamath Posted On November 21, 2018


  • Share On Facebook
  • Tweet It

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಅವರು ಒಂದು ವಿಷಯದಲ್ಲಿ ಗಟ್ಟಿ ನಿಲುವು ಮಾಡಿಕೊಂಡಿದ್ದಾರೆ. ಅದೇನೆಂದರೆ ತಾನು ಇಡೀ ಜಿಲ್ಲೆಗೆ ಒಬ್ಬನೇ ಕಾಂಗ್ರೆಸ್ ಶಾಸಕನಾಗಿ ಆಯ್ಕೆಯಾದರೂ ಪರವಾಗಿಲ್ಲ. ಉಳಿದ ಏಳು ಜನ ಭಾರತೀಯ ಜನತಾ ಪಾರ್ಟಿಯಿಂದ ಗೆದ್ದಿರುವ ಶಾಸಕರಿಗೆ ಬುದ್ಧಿ ಕಲಿಸುತ್ತೇನೆ ಅಂತ ಮನಸ್ಸಿನಲ್ಲಿಯೇ ದೃಢ ನಿಶ್ಚಯ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು ಹೆಣೆದಿರುವ ಗೇಮ್ ಪ್ಲಾನ್ ಕುಟಿಲ ನೀತಿಯ ಪರಾಕಾಷ್ಟೆ ಎಂದೇ ಹೇಳಬಹುದು. ಪ್ರಾರಂಭದಲ್ಲಿ ಮಾಧ್ಯಮದವರು ಕೇಳುವಾಗ ತಾನು ಜಿಲ್ಲೆಯ ಎಲ್ಲಾ ಶಾಸಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾ ಬಂದಿದ್ದ ಸಚಿವ ಯುಟಿ ಖಾದರ್ ಆವತ್ತಿನಿಂದಲೇ ಉಳಿದ ಶಾಸಕರನ್ನು ಸೈಡ್ ಲೈನ್ ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗಂತೂ ಇದು ಯಾವ ಪ್ರಮಾಣದಲ್ಲಿ ಇದೆ ಎಂದರೆ ಕಂದಾಯ ಅದಾಲತ್ ಗೂ ಶಿಷ್ಟಾಚಾರದಂತೆ ನಿಗದಿತ ಅವಧಿಯೊಳಗೆ ಕರೆಯುವ ಕೆಲಸ ಮಾಡಿಲ್ಲ. ಮೊನ್ನೆ ಪ್ರಗತಿ ಪರಿಶೀಲನಾ ಸಭೆಯಲ್ಲಂತೂ ಕರೆಯಲೇಬೇಕಿತ್ತು. ಅವತ್ತೂ ಕರೆದಿಲ್ಲ. ಇಂತಹ ಪದ್ಧತಿಯನ್ನು ಯುಟಿ ಖಾದರ್ ಆದಷ್ಟು ಬೇಗ ಕೈ ಬಿಟ್ಟರೆ ಈ ಸರಕಾರ ಇರುವ ತನಕ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಸುಲಲಿತವಾಗುತ್ತದೆ. ಖಾದರ್ ಅವರಿಗೆ ತಾವು ಏನು ಮಾಡಿದರೂ ತಮ್ಮ ಕ್ಷೇತ್ರದಲ್ಲಿ ಸೋಲಲ್ಲ ಎನ್ನುವ ಭಾವನೆ ಇರಬಹುದು. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅವರು ಸೋಲಬೇಕು ಎಂದು ನಾನು ಹೇಳುತ್ತಿಲ್ಲ. ಅದು ಅವರ ಕ್ಷೇತ್ರದ ಜನರಿಗೆ ಬಿಟ್ಟ ವಿಷಯ. ಆದರೆ ತಾವೊಬ್ಬರೇ ಮಿಂಚಬೇಕು, ಉಳಿದ ಬಿಜೆಪಿ ಶಾಸಕರು ಮೂಲೆಗುಂಪಾಗಬೇಕು ಎಂದು ಅವರು ಕೈಗೊಂಡಿರುವ ಸಿಂಗಲ್ ಏಜೆಂಡಾ ಮಾತ್ರ ದೇವರು ಒಪ್ಪುವಂತದ್ದು ಅಲ್ಲ.

ಮೇಯರ್ ಅವರೇ ನೀವು ಹೀಗೆನಾ…

ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಆಯೋಜನೆಗೊಂಡಿತ್ತು. ಆ ಸಭೆಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹಾಗೂ ಉತ್ತರ ಶಾಸಕ ಡಾ|ಭರತ್ ಶೆಟ್ಟಿಯವರನ್ನು ಉದ್ದೇಶಪೂರ್ವಕವಾಗಿ ಹೊರಗಿಡುವ ಪ್ರಯತ್ನ ಮಾಡಲಾಗಿದೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಎರಡೂ ಭಾಗದ ಶಾಸಕರ ಉಪಸ್ಥಿತಿ ಕಡ್ಡಾಯ. ಅದರಲ್ಲಿಯೂ ಪಾಲಿಕೆಯ ವ್ಯಾಪ್ತಿಯ ಪ್ರಗತಿ ಪರಿಶೀಲನೆ ಎಂದರೆ ಆ ಭಾಗದ ಇಬ್ಬರು ಶಾಸಕರು ಇರಲೇಬೇಕು. ಅವರಿಗೆ ಗೊತ್ತಿಲ್ಲದೆ ಪ್ರಗತಿ ಚಿಂತನೆ ಹೇಗೆ ಸಾಧ್ಯ? ಖಾದರ್ ಅವರಂತೂ ಪಾಲಿಕೆ ವ್ಯಾಪ್ತಿಯವರಲ್ಲ. ಆದ್ದರಿಂದ ಅವರು ಸ್ಥಳೀಯ ಶಾಸಕರನ್ನು ಕರೆದು ಕೂರಿಸಿ ಅಭಿಪ್ರಾಯ ಕೇಳಬೇಕಿತ್ತು. ಉತ್ತರ ಮತ್ತು ದಕ್ಷಿಣದ ಇಬ್ಬರೂ ಶಾಸಕರು ವಿದ್ಯಾವಂತರು. ಸಾಮಾನ್ಯ ಜ್ಞಾನವೂ ಚೆನ್ನಾಗಿದೆ. ಜನರಿಗೆ ಬೇಕಾಗುವ ಅಭಿವೃದ್ಧಿಯ ಬಗ್ಗೆ ಚಿಂತನೆ ಇದೆ. ಕರೆದು ಸಲಹೆ ಕೇಳಿದ್ರೆ ಖಾದರ್ ಕಳೆದುಕೊಳ್ಳುವಂತದ್ದು ಏನೂ ಇರಲಿಲ್ಲ. ಆದರೆ ಆ ಇಬ್ಬರೂ ಶಾಸಕರು ಬಂದರೆ ತಮಗೆ ಅಪಾಯ ಎಂದು ಖಾದರ್ ಅವರಾಗಲಿ, ಮೇಯರ್ ಭಾಸ್ಕರ್ ಮೊಯಿಲಿ ಅವರಾಗಲಿ ಅಂದುಕೊಂಡರಾ ಎನ್ನುವುದು ಪ್ರಶ್ನೆ.

ಭಾಸ್ಕರ್ ಮೊಯಿಲಿ ಮೇಯರ್ ಆದ ನಂತರ ನಾನು ಅವರ ಬಗ್ಗೆ ಬರೆದದ್ದೇ ಕಡಿಮೆ. ಯಾಕೆಂದರೆ ಇದ್ದುದ್ದರಲ್ಲಿಯೇ ಒಂದಿಷ್ಟು ಸಜ್ಜನ ರಾಜಕಾರಣಿ ಎನಿಸಿಕೊಂಡವರು. ಕಾಂಗ್ರೆಸ್ಸಿನ ಹಲವು ಸದಸ್ಯರಿಗೆ ಇರುವಂತಹ ಪೊಗರು ಭಾಸ್ಕರ ಮೊಯಿಲಿ ಅವರಿಗೆ ಇದ್ದಂತಿಲ್ಲ. ಆದರೆ ಮಾಧ್ಯಮದವರು ಶಾಸಕರನ್ನು ಯಾಕೆ ಸಭೆಗೆ ಕರೆದಿಲ್ಲ ಎಂದು ಕೇಳಿದ್ದಕ್ಕೆ ಮೇಯರ್ ಮೊಯಿಲಿ “ಮರೆತು ಹೋಯು”್ತ ಎಂದರಂತೆ. ಪ್ರಗತಿ ಪರಿಶೀಲನೆಯಂತಹ ಮಹತ್ತರ ಸಭೆಗಳಿಗೆ ಶಾಸಕರನ್ನು ಕರೆಯಲು ಮರೆತು ಹೋಯ್ತು ಎಂದರೆ ಇವರಿಗೆ ಇನ್ನೆಂತಹ ಅಭಿವೃದ್ಧಿ ಮಾಡಲು ನೆನಪಿರುತ್ತೆ ಎನ್ನುವುದು ಪ್ರಶ್ನೆ. ಹಾಗಂತ ಹಿಂದೆ ದಕ್ಷಿಣದ ಮತ್ತು ಉತ್ತರದ ಶಾಸಕರನ್ನು ಮರೆಯದೇ ಇಂತಹ ಸಭೆಗಳಿಗೆ ಕರೆಯಲಾಗುತ್ತಿತ್ತು. ಈಗ ಜಾಣ ಮರೆವು ಏಕೆಂದರೆ ಅದರ ಹಿಂದಿದೆ ಪ್ರಬಲ ಕಾರಣ.

ಕರೆದರೆ ಏನು ಸಮಸ್ಯೆ ಆಗುತ್ತೆ…

ಮೊದಲನೇಯದಾಗಿ ಈಗ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದ್ದು ಆಗಿಲ್ಲದೇ ಇರುವುದು. ಶಾಸಕರನ್ನು ಕರೆದರೆ ಅವರು ಆ ಬಗ್ಗೆ ಖಂಡಿತ ಧ್ವನಿ ಎತ್ತುತ್ತಾರೆ. ಜನರ ತೆರಿಗೆಯ ಹಣವನ್ನು ಕಳಪೆ ಕಾಮಗಾರಿ ಮಾಡಿ ಪೋಲು ಮಾಡುತ್ತಿರುವ ಪಾಲಿಕೆಯ ಆಡಳಿತದ ಬಗ್ಗೆ ಆಕ್ಷೇಪ ಎತ್ತುತ್ತಾರೆ. ಇದರಿಂದ ಆಡಳಿತ ಮಾಡುತ್ತಿರುವ ಕಾಂಗ್ರೆಸ್ಸಿಗೆ ಕೆಟ್ಟ ಹೆಸರು ಬರುತ್ತದೆ. ಆರು ತಿಂಗಳ ಹಿಂದೆ ಹಾಗಿರಲಿಲ್ಲ. ಪಾಲಿಕೆ ಮಾಡಿದ್ದೇ ಅಭಿವೃದ್ಧಿ. ಹಾಕಿದ್ದೇ ಡಾಂಬರು, ತಿಂದ್ದದ್ದೇ ಮರಳು, ಸಿಮೆಂಟ್. ಯಾಕೆಂದರೆ ಉತ್ತರ, ದಕ್ಷಿಣದಲ್ಲಿ ಅವರದ್ದೇ ಪಕ್ಷದ ಶಾಸಕರು. ಇವರು ಮಾಡಿದ್ದ ಅಕ್ರಮ, ಕಳಪೆ ಕಾಮಗಾರಿಗಳಿಗೆ ವಿರೋಧ ಎನ್ನುವುದೇ ಇರಲಿಲ್ಲ. ಒಳಚರಂಡಿಯಿಂದ ಹಿಡಿದು ಶಾಸಕರು ಮನೆಯ ಮೇಲೆ ಹೆಚ್ಚುವರಿ ಅಂತಸ್ತು ಕಟ್ಟುವ ತನಕ ಅವರದ್ದೇ ಸಾಮ್ರಾಜ್ಯ. ಪಾಲಿಕೆಯೂ ನಮ್ಮದೇ, ಜಿಲ್ಲೆಯೂ ನಮ್ಮದೇ, ರಾಜ್ಯವೂ ನಮ್ಮದೇ, ಕಳಪೆಯಾಗಲಿ, ಅಕ್ರಮವಾಗಲಿ ಕೇಳುವವರು ಯಾರು ಎನ್ನುವ ಪದ್ಯ ಎಲ್ಲಾ ಕಾಂಗ್ರೆಸ್ಸಿಗರು ಹಾಡಿದ್ದೇ ಹಾಡಿದ್ದು. ಇವರ ಈ ಮನಸ್ಥಿತಿಯಿಂದ ರೋಸಿ ಹೋದ ಮತದಾರ ಈ ಬಾರಿ ಬದಲಾವಣೆ ಬಯಸಿದ. ಆದರೆ ಖಾದರ್ ಅದೃಷ್ಟ ಒಳ್ಳೆಯದಿತ್ತು. ಬೀಸಿದ ಸುನಾಮಿಯಲ್ಲಿ ತೇಲಿ ಪಾರಾದರು. ಸದ್ಯ ಪಾಲಿಕೆಯ ಕಾಂಗ್ರೆಸ್ ಆಡಳಿತ ಐಸಿಯುನಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿದೆ. ನಾಡಿದ್ದು ಫೆಬ್ರವರಿಯ ತನಕ ಹೇಗಾದರೂ ರಾಜಕೀಯ ಮಾಡಿ ಉಳಿದುಕೊಳ್ಳುವ ಗಡಿಬಿಡಿಯಲ್ಲಿ ಪಾಲಿಕೆಯ ಶಾಶ್ವತ ಕಾರ್ಪೋರೇಟರ್ ಗಳಂತೆ ಇರುವವರು ವರ್ತಿಸುತ್ತಿದ್ದಾರೆ. ಇನ್ನು ಪ್ರಗತಿ ಪರಿಶೀಲನಾ ಸಭೆಯಂತದ್ದು ಮಾಡುವಾಗ ಬಿಜೆಪಿ ಶಾಸಕರು ಬಂದು ಅದರ ಕ್ರೆಡಿಟ್ ತೆಗೆದುಕೊಳ್ಳುವುದು ಬೇಡಾ ಎಂದು ಅಂತವರೇ ಮೇಯರ್ ಅವರಿಗೆ ಕಿವಿಯೂದಿರಬಹುದು. ಖಾದರ್ ಅವರಿಗೂ ಇದು ಸರಿ ಎನಿಸಿರಬಹುದು. ಇನ್ನು ಅಧಿಕಾರಿಗಳು ” ಸರಕಾರಿ ಕಾರ್ಯಕ್ರಮಗಳಿಗೆ ಬಿಜೆಪಿ ಶಾಸಕರನ್ನು ಕರೆಯಿರಿ ಎಂದರೆ ಕರೆಯುತ್ತಾರೆ, ಕರೆಯಬೇಡಿ ಎಂದರೆ ಕರೆಯಲ್ಲ” ತಪ್ಪು ಮಾಡಿದ ನಂತರ ಅದು ಅಧಿಕಾರಿಗಳ ಜವಾಬ್ದಾರಿ ಎಂದು ತಪ್ಪಿಸಿಕೊಳ್ಳುವ ಮೇಯರ್ ಭಾಸ್ಕರ ಮೊಯಿಲಿಯವರಿಗಾಗಲಿ, ಸಚಿವ ಖಾದರ್ ಅವರಿಗಾಗಲಿ ಇಂತದ್ದೇಲ್ಲ ನಾವು ಹೇಳಬೇಕಾಗಿಲ್ಲ. ಏಕೆಂದರೆ ಇಬ್ಬರೂ ರಾಜಕೀಯದ ಸಮುದ್ರದಲ್ಲಿ ತಿಮಿಂಗಿಲಗಳು. ಸದ್ಯ ಹೊಸ ಶಾಸಕರು ಹೊಸ ಮನ್ವಂತರಕ್ಕೆ ಇಂತದ್ದೆಲ್ಲ ಇನ್ನಷ್ಟು ದಿನ ಸಹಿಸಿಕೊಳ್ಳಬೇಕೋ ಏನೋ!

  • Share On Facebook
  • Tweet It


- Advertisement -


Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
hanumantha kamath July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
hanumantha kamath July 1, 2022
Leave A Reply

  • Recent Posts

    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
  • Popular Posts

    • 1
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 2
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 3
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 4
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 5
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search