ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು
Posted On November 28, 2018
0
ಮಂಗಳೂರು- ಕದ್ರಿ ಪಾರ್ಕ್ ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ. ಮಂಗಳೂರಿನ ಆಕಾಶವಾಣಿ ಬಳಿ ಇರುವ ಕದ್ರಿ ಪಾರ್ಕ್ ನ ಒಳಗಡೆ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ.
ಪ್ರೇಮಿಗಳಿಬ್ಬರನ್ನು ಕಾಸರಗೋಡು ಮೂಲದವರು ಎಂದು ಹೇಳಲಾಗಿದೆ. ಸಂಜೆ ವಿಹಾರಕ್ಕೆಂದು ಬಂದಿದ್ದ ಜೋಡಿ, ಕೆಲಕಾಲ ಕದ್ರಿ ಪಾರ್ಕ್ ನಲ್ಲಿ ಸುತ್ತಾಡಿದ್ದರು ಎಂದು ಹೇಳಲಾಗಿದ್ದು, ನಂತರ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಕ್ಷಣವೇ ಸ್ಥಳೀಯರು ಜೋಡಿಯನ್ನು ಆಸ್ಪತ್ರೆ ಸಾಗಿಸಿದ್ದಾರೆ. ಘಟನೆ ಕುರಿತಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
December 23, 2025









