ಯುವಜನತೆಗೆ ಹುಚ್ಚು ಹಿಡಿಸಿರೋ ಪಬ್ಜಿ ಎಷ್ಟು ಲಾಭ ಗಳಿಸಿದೆ ಗೊತ್ತಾ…?
ಇತ್ತೀಚೆಗೆ ಯುವಜನತೆಗೆ ಪಬ್ಜಿ ಗೇಮ್ ಹುಚ್ಚು ಹಿಡಿದಿದೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಆಫೀಸ್ , ಕಾಲೇಜು, ಮನೆ ಎಲ್ಲಿ ನೋಡಿದ್ರೂ ಒಬ್ರಲ್ಲ ಒಬ್ಬರು ಪಬ್ಜಿ ಆಡ್ತಿರೋರು ಸಿಕ್ತಾರೆ. ಪಬ್ಜಿ ಇದ್ರೆ ಊಟ ಬೇಡ, ನಿದ್ದೆ ಬೇಡ ಅನ್ನೋ ಥರ ಆಗಿದೆ. ಯುವ ಜನತೆಗೆ ಹುಚ್ಚು ಹಿಡಿಸಿರೋ ಪಬ್ಜಿ ಗೇಮ್ ಮಾತ್ರ ತಯಾರಕರಿಗೆ ಕೋಟಿ ಕೋಟಿ ಆದಾಯ ಗಳಿಸಿ ಕೊಡುತ್ತಿದೆ ಅಂದ್ರೆ ನಂಬ್ಲೇಬೇಕು..!
ಸೆನ್ಸಾರ್ ಟವರ್ ಎಂಬ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ, ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ 7 ದಿನಗಳಲ್ಲಿ ಐಓಎಸ್ ಹಾಗೂ ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಪಬ್ಜಿ ಆಡೋರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಇದರಿಂದ ಪಬ್ಜಿಯ ಒಟ್ಟಾರೆ ಆದಾಯ ಕಳೆದ ವಾರಕ್ಕಿಂತ 165% ಹೆಚ್ಚಾಗಿದೆ. ಸುಮಾರು 32 ಕೋಟಿ ಇದ್ದ ಪಬ್ಜಿ ಆದಾಯ 85 ಕೋಟಿಗೆ ಏರಿಕೆಯಾಗಿದೆ.
ಹಾಗೇ ಮೊಬೈಲ್ ಐಓಎಸ್ನಲ್ಲಿ ಪಬ್ಜಿ, ಕಳೆದ ವಾರ ಮತ್ತೊಂದು ಫೇಮಸ್ ಗೇಮ್ ಫೋರ್ಟ್ನೈಟ್ನ ಆದಾಯವನ್ನು 43% ನಷ್ಟು ಮೀರಿಸಿದೆ ಎಂದು ಈ ವರದಿ ಹೇಳಿದೆ. ಕಳೆದ ಏಪ್ರಿಲ್ನಿಂದ ಪಬ್ಜಿ ತನ್ನ ಹಣಗಳಿಕೆ ಶುರು ಮಾಡಿದ್ದು, ಕಡಿಮೆ ಸಮಯದಲ್ಲೇ ಹೆಚ್ಚು ಆದಾಯ ಗಳಿಸುತ್ತಿದೆ.
Leave A Reply