ಕಂಬಳದಲ್ಲಿ ದಿಕ್ಕು ತಪ್ಪಿ ಓಡಿದ ಕೋಣ…!!!
Posted On December 3, 2018
0

ಉಡಪಿ_ ದೈವ ಕಂಬಳದ ಆಚರಣೆಯ ಸಂದರ್ಭದಲ್ಲಿ ಕೋಣವೊಂದು ದಿಕ್ಕು ತಪ್ಪಿ ಓಡಿ ಓರ್ವನನ್ನು ತಿವಿಯಲು ಮುಂದಾದ ಘಟನೆ ಉಡುಪಿ ಜಿಲ್ಲೆಯ ಚೇರ್ಕಾಡಿಯಲ್ಲಿ ನಡೆದಿದೆ.
ಚೇರ್ಕಾಡಿಯಲ್ಲಿ ಹರಕೆಗಾಗಿ ಕಂಬಳ ಕೋಣಗಳನ್ನು ಓಡಿಸಲಾಗುತ್ತಿತ್ತು. ಶನಿವಾರ ಕೋಣಗಳ ಪೈಪೋಟಿಯಲ್ಲ, ಬದಲಿಗೆ ಹರಕೆ ಹೊತ್ತು ನಡೆಸುವ ದೈವ ಕಂಬಳ. ಈ ವೇಳೆ ಕೋಣವೊಂದು ಕಂಬಳದ ಗದ್ದೆ ಬಿಟ್ಡು ಬೇರೆಕಡೆಗೆ ಓಡಿದೆ.ಇದೇ ವೇಳೆ ಕಂಬಳ ವೀಕ್ಷಿಸುತ್ತಿದ್ದ ಜನರೂ ಚಲ್ಲಾಪಿಲ್ಲಿಯಾಗಿದ್ದಾರೆ.
ಇನ್ನೂ ಎದುರಲ್ಲಿದ್ದ ವ್ಯಕ್ತಿಯೋರ್ವನಿಗೆ ಕೋಣವು ಕೊಂಬಿನಲ್ಲಿ ತಿವಿಯಲು ಮುಂದಾಗಿದೆ. ಅದೃಷ್ಡವಶಾತ್ ಕೋಣದ ತಿವಿತಕ್ಕೆ ಒಳಗಾದ ವ್ಯಕ್ತಿಗೆ ಯಾವುದೇ ತೊಂದರೆಯಾಗಿಲ್ಲ. ಕಂಬಳದಲ್ಲಿ ಈಗ ಕೋಣಗಳಿಗೆ ಬೆತ್ತದೇಟು ಹಾಕಲು ನಿರ್ಬಂಧ ಇದೆ. ಹೀಗಾಗಿ ಕೋಣ ಓಡಿಸುವ ವ್ಯಕ್ತಿಯ ನಿಯಂತ್ರಣಕ್ಕೆ ಕೋಣ ಕೆಲವೊಮ್ಮೆ ಸಿಗುವುದಿಲ್ಲ. ಹೀಗಾಗಿಯೇ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
- Advertisement -