ಗಡಿಯಾಚೆಗಿನ ಸರ್ಜಿಕಲ್ ಸ್ಟ್ರೈಕ್ ಗಾಗಿಯೇ ಸ್ಪೆಶಲ್ ಫೋರ್ಸ್ ಅಸ್ಥಿತ್ವಕ್ಕೆ…!?
Posted On December 4, 2018
ದೆಹಲಿ_ಭಾರತಕ್ಕೆ ಸಮುದ್ರ ಮಾರ್ಗ ಹಾಗೂ ವೈಮಾನಿಕ ದಾಳಿಗಳ ಅಪಾಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ರ್ಜಿಕಲ್ ಸ್ಟ್ರೈಕ್ ನಡೆಸುವುದಕ್ಕಾಗಿಯೇ ವಿಶೇಷ ತಂಡವನ್ನು ಅಸ್ಥಿತ್ವಕ್ಕೆ ತರಲು ಯೋಜನೆ ರೂಪಿಸುತ್ತಿದೆ.
ಭಾರತೀಯ ಸೇನೆಯ ಮೂರೂ ವಿಭಾಗದಿಂದ ನುರಿತ ಅತ್ಯುತ್ತಮ ಯೋಧರನ್ನೊಳಗೊಂಡ ಸರ್ಜಿಕಲ್ ಸ್ಟ್ರೈಕ್ ತಂಡವನ್ನು ಅಸ್ಥಿತ್ವಕ್ಕೆ ತರವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಎನ್ ಡಿ ಟಿವಿ ವರದಿ ಪ್ರಕಟಿಸಿದ್ದು, ಸರ್ಕಾರ ಅಸ್ಥಿತ್ವಕ್ಕೆ ತರಲು ಯೋಜನೆ ರೂಪಿಸಿರುವ ಸೇನಾ ತಂಡ 2016 ರ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಅನಿರೀಕ್ಷಿತವಾಗಿ ಶತ್ರುಗಳ ಪ್ರದೇಶಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಅತಿ ಹೆಚ್ಚು ಹಾನಿಯುಂಟುಮಾಡಿ ಕಡಿಮೆ ಸಮಯದಲ್ಲಿ ವಾಪಸ್ಸಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಯೋಜನೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಯೋಜನೆಯಾಗಿದೆ. ತಂಡದಲ್ಲಿ ವಾಯುಪಡೆ, ನೌಕಾ ಪಡೆ, ಸೇನಾ ಪಡೆಗಳ ಗರುಡ, ಮಾರ್ಕೋ, ಪಾರಾಗಳಿಂದ ಯೋಧರನ್ನೊಳಗೊಂಡಿರಲಿದ್ದು ಅಮೆರಿಕದ ನೇವಿ ಸೀಲ್ಸ್ ಯೋಧರಿಗೆ ನೀಡುವ ಮಾದರಿಯಲ್ಲಿ ತರಬೇತಿ ನೀಡಲಾಗುತ್ತದೆ.
ಪಾಕಿಸ್ತಾನದಿಂದ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಹಾಗೂ ಒಳನುಸುಳುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶತ್ರು ದೇಶವನ್ನು ಒತ್ತಡದಲ್ಲಿ ಸಿಲುಕಿಸಲು ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ, ಬಜೆಟ್ ನಲ್ಲಿ ಈ ತಂಡದ ಕಾರ್ಯನಿರ್ವಹಣೆಗಾಗಿಯೇ ಪ್ರತ್ಯೇಕ ಅನುದಾನವೂ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
- Advertisement -
Leave A Reply