ಪಾಲಿಕೆಯವರಿಗೆ ಕಟ್ಟಡ ಬಾಡಿಗೆ, ನೀರಿನ ಬಿಲ್ ಸರಿಯಾಗಿ ವಸೂಲಿ ಮಾಡಲು ಏನು ಸಂಕಟ!!
ನಾನು ನೀವು ಚಿಕ್ಕವರಿದ್ದಾಗ ಅಥವಾ ಶಾಲೆಗೆ ಹೋಗುತ್ತಿದ್ದಾಗ ನಮಗೆ ತಂದೆ ದಿನದ ಖರ್ಚಿಗೆಂದು ಐದು ರೂಪಾಯಿ ಕೊಡುತ್ತಿದ್ದರು ಎಂದು ಇಟ್ಟುಕೊಳ್ಳೋಣ. ನಾವು ಅದರಲ್ಲಿ ಎರಡು ರೂಪಾಯಿ ಮಾತ್ರ ಖರ್ಚು ಮಾಡಿ ಉಳಿದ ಹಣವನ್ನು ಹಾಗೆ ತಂದೆಗೆ ತಂದುಕೊಟ್ಟರೆ ನಮ್ಮನ್ನು ಬುದ್ಧಿವಂತ ಮಗು ಎಂದೇ ಎಲ್ಲರೂ ಹೊಗಳುತ್ತಿದ್ದರು. ನಮ್ಮ ಮಂಗಳೂರು ಮಹಾನಗರ ಪಾಲಿಕೆ ಕೂಡ ಇದೇ ಲಾಜಿಕ್ ಬಳಸಿ ತನ್ನನ್ನು ತಾನು ಬುದ್ಧಿವಂತ ಎಂದು ತೋರಿಸಿಕೊಡುವ ಉಮ್ಮೇದಿನಲ್ಲಿದ್ದಂತೆ ಕಾಣುತ್ತದೆ. ಆದರೆ ಅದಕ್ಕೆ ಗೊತ್ತಿಲ್ಲ, ಅದನ್ನು ಜನರು ಬುದ್ಧಿವಂತ ಅಲ್ಲ ಬುದ್ಧಿ”ವಂತೆ” ಎನ್ನುತ್ತಿದ್ದಾರೆ ಅಂತ. ವಿಷಯ ಏನೆಂದರೆ ಕೇಂದ್ರ ಸರಕಾರದ ಹದಿನಾಲ್ಕನೇ ಹಣಕಾಸು ಆಯೋಗದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಹಣ ಬರುತ್ತದೆ. ಹಾಗಂತ ಪಾಲಿಕೆಯಲ್ಲಿ ಮೇಯರ್ ಆಗಲೀ, ಕಮೀಷನರ್ ಆಗಲಿ ತಮ್ಮ ಚೇಂಬರ್ ನಲ್ಲಿ ಕುಳಿತು ದೆಹಲಿಗೆ ಫೋನ್ ಮಾಡಿ ” ಸ್ವಲ್ಪ ಹಣ ಬೇಕಿತ್ತು ಮಾರಾಯ್ರೆ, ಬೇಗ ಕಳುಹಿಸಿಕೊಡಿ, ಸದ್ಯ ನಿಮ್ಮಲ್ಲಿ ಇದ್ದಷ್ಟು ಕಳುಹಿಸಿಕೊಡಿ. ಇಲ್ಲಿ ಜನ ಫುಟ್ ಪಾತ್, ಡ್ರೈನೇಜ್, ನೀರು ಎಂದು ಬೊಬ್ಬೆ ಹೊಡೆಯುತ್ತಾರೆ, ಹಾಗೆ ಹಣ ಬೇಕು ಅಂತ ಫೋನ್ ಮಾಡಿದ್ದು” ಎಂದು ಹೇಳಲು ಆಗುವುದಿಲ್ಲ. 14ನೇ ಫೈನಾನ್ಸ್ ಕಮೀಷನ್ ನಲ್ಲಿ ಹಣ ಬರಲಿಕ್ಕೆ ಅದರದ್ದೇ ಆಗಿರುವ ನೀತಿನಿಯಮಾವಳಿಗಳಿವೆ. ಅದು ಏನು ಎಂದು ಮೊದಲು ನೋಡೋಣ. ಎಂತಹ ಯೂಸ್ ಲೆಸ್ ಜನ ಇದ್ದಾರೆ ಮಾರಾಯ್ರೆ… ಮೊದಲನೇಯದಾಗಿ ಪಾಲಿಕೆ ಕಡೆಯಿಂದ ಎರಡು ವರ್ಷಗಳ ಅಡಿಟ್ ವರದಿ ಕೇಂದ್ರಕ್ಕೆ ಕೊಡಬೇಕು. ಒಬ್ಬ ಸ್ಟ್ರಿಕ್ ಗಂಡ ತನ್ನ ಸಂಬಳವನ್ನು ಹೆಂಡತಿಯ ಕೈಯಲ್ಲಿ ಕೊಟ್ಟು ಯಾವುದ್ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂದು ಲೆಕ್ಕ ಕೇಳುತ್ತಾನಲ್ಲ, ಅಷ್ಟು ಸುಲಭದ ಪ್ರಕ್ರಿಯೆ ಅಲ್ಲ ಇದು. ಪಾಲಿಕೆಯ ಅಡಿಟ್ ವರದಿಯಲ್ಲಿ ಮುಖ್ಯವಾಗಿ ಹಿಂದಿನ ವರ್ಷಕ್ಕಿಂತ ಈ ವರ್ಷ ಪಾಲಿಕೆಗೆ ಎಷ್ಟು ಹೆಚ್ಚು ಆದಾಯ ಬಂದಿದೆ ಎನ್ನುವುದನ್ನು ಅಡಿಟ್ ವರದಿಯಲ್ಲಿ ತೋರಿಸಬೇಕು. ಹಿಂದಿನ ವರ್ಷಕ್ಕಿಂತ ಈ ವರ್ಷ ಉತ್ತಮ ಆದಾಯ ಬಂದಿದೆ ಎಂದಾದರೆ ಮಾತ್ರ ಅನುದಾನ ಕೊಡುವ ನಿರ್ದಾರಕ್ಕೆ ಕೇಂದ್ರದಲ್ಲಿ ಕುಳಿತವರು ನಿಶ್ಚಯಿಸುತ್ತಾರೆ. ಉತ್ತಮವಾಗಿರುವ ಆದಾಯ ಗಳಿಕೆ ತೋರಿಸಿದ್ರೆ ಮಾತ್ರ ಅನುದಾನ, ಇಲ್ಲದಿದ್ದರೆ ಪಾಲಿಕೆಯವರೇ ತಟ್ಟೆ ಹಿಡಿದು ಹೊರಡಬೇಕು. ನಮ್ಮ ಪಾಲಿಕೆಯವರು ಎಂತಹ ಮಹಾನ್ ಆಲಸಿಗಳು ಎಂದರೆ 16-17 ಮತ್ತು 17-18 ರಂದು ಬರಿ ಕಂಬಳಿ ಹೊದ್ದು ಮಲಗಿದ್ದು ಮಾತ್ರ. ಎಲ್ಲಿಯ ತನಕ ಎಂದರೆ ಪಾಲಿಕೆಗೆ ಬರಬೇಕಾದ ಬಾಡಿಗೆಯ ಒಟ್ಟು ಸಂಗ್ರಹವಾದದ್ದೇ 66% ಮಾತ್ರ. ಇದು ಹೇಗೆ ಎಂದರೆ ನೀವು ಹತ್ತು ಮನೆ ಬಾಡಿಗೆ ಕೊಟ್ಟು ಆರರದ್ದು ಮಾತ್ರ ವಸೂಲಿ ಮಾಡಿದರೆ ನಿಮ್ಮನ್ನು ಚಾಣಾಕ್ಷ್ಯ ಎನ್ನುವುದಾ, ಆಲಸಿ ಎನ್ನುವುದಾ. ಇನ್ನು ನೀರಿನ ಬಿಲ್ ಸಂಗ್ರಹವಾದದ್ದೇ 56%. ಮನೆ ತೆರಿಗೆ ಮತ್ತು ಕಟ್ಟಡ ತೆರಿಗೆ 415 ಲಕ್ಷ ಬಾಕಿ ಬರಲು ಇದೆ. ಇಷ್ಟೆಲ್ಲ ಲೋಪದೋಷ ಇಟ್ಟುಕೊಂಡ ಮೇಲೆ ನಮಗೆ ಕೇಂದ್ರದ ಹದಿನಾಲ್ಕನೇ ಹಣಕಾಸು ಯೋಜನೆಯವರು ಹಣ ಕೊಡಬೇಕು ಎಂದರೆ ನಮ್ಮ ಪಾಲಿಕೆ ಕಮೀಷನರ್ ಮತ್ತು ಮೇಯರ್ ಕೇಂದ್ರದ ಅಳಿಯರಾ? ನಷ್ಟವಾದದ್ದು ಸಾಮಾನ್ಯ ಜನರಿಗೆ… ಹಾಗೆ ಇವರ ಈ ನೀರಸ ಕೆಲಸದಿಂದ ಪಾಲಿಕೆಗೆ ಬರಬೇಕಾದ ಅನುದಾನ ಕೇಂದ್ರದಿಂದ ಬಂದೇ ಇಲ್ಲ. ಇದರಲ್ಲಿ ಕಳೆದುಕೊಂಡದ್ದು ಯಾರು? ನಾವು, ನೀವು ಸಾಮಾನ್ಯ ಜನ. ನಾವೇನು ಪಾಲಿಕೆಯವರಿಗೆ ಎಲ್ಲರಿಂದಲೂ ಬಾಡಿಗೆಯನ್ನು ಸರಿಯಾಗಿ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೆವಾ? ನಾವು ನೀರಿನ ಬಿಲ್ ಸರಿಯಾಗಿ ವಸೂಲಿ ಮಾಡಬೇಡಿ ಎಂದಿದ್ದೇವಾ? ಇವರಿಗೆ ಸರಿಯಾಗಿ ವಸೂಲಿ ಮಾಡದೇ ಇರಲು ಪ್ರಭಾವಿಗಳ, ತಲೆತಲಾಂತರದಿಂದ ಇದ್ದಂತೆ ಇರುವ ಕಾಂಗ್ರೆಸ್ ಮನಪಾ ಸದಸ್ಯರ ಒತ್ತಡ ಇರಬಹುದು. ಅದರಿಂದ ಕಳೆದುಕೊಂಡದ್ದು ಮಾತ್ರ ನಾವು. ಹೀಗೆ ಅನುದಾನ ಬರದೇ ಇರುವುದರಿಂದ ನಮ್ಮ ರಸ್ತೆಯ ಕಾಂಕ್ರೀಟಿಕರಣ, ಡ್ರೈನೇಜ್, ಬೀದಿದೀಪ, ಕುಡಿಯುವ ನೀರು ಅವ್ಯವಸ್ಥೆ ಸರಿಯಾಗದೇ ಇದ್ದರೆ ಪಾಲಿಕೆಯಲ್ಲಿ ಕುಳಿತಿರುವ ಬಿಳಿ ಪ್ಯಾಂಟ್, ಬಿಳಿ ಶರ್ಟ್ ನ ಯಾವುದೇ ಹಿರಿಯ ಕಾರ್ಫೋರೇಟರ್ ಕೊಡುವುದಿಲ್ಲ. ಕಳೆದುಕೊಂಡದ್ದು ನಾವು. ಒಂದು ವೇಳೆ ಕಾಂಗ್ರೆಸ್ಸಿನವರಿಗೆ ಸರಿಯಾದ ಅಡಿಟ್ ವರದಿ ಕೊಟ್ಟು ಉತ್ತಮ ಆದಾಯ ಏರಿಕೆ ಆಗುವಂತೆ ಮಾಡಿ ಅದರಿಂದ ಅನುದಾನ ತರಲು ಆಗದೇ ಇದ್ದಲ್ಲಿ ಮುಂದಿನ ಬಾರಿ ನಾವು ಸ್ಪರ್ಧೆ ಮಾಡಲ್ಲ ಎಂದು ಹೇಳಲಿ.�
Leave A Reply