• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆ ಆವರಣದಲ್ಲಿಯೇ ಕಳಪೆ ಕಾಮಗಾರಿ ಆದ್ರೂ ಒಬ್ಬರೂ ಬಾಯಿ ತೆರೆದಿಲ್ಲ!!

Hanumantha Kamath Posted On January 22, 2019


  • Share On Facebook
  • Tweet It

ನೀವು ಮಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಇತ್ತೀಚೆಗೆ ಯಾವತ್ತಾದರೂ ಬಂದಿದ್ದಿರಿ ಎಂದಾದರೆ ನಿಮಗೆ ಅಲ್ಲಿ ಕೆಳಗೆ ಪಾರ್ಕಿಂಗ್ ನಲ್ಲಿ ಹಾಕಿರುವ ಇಂಟರ್ ಲಾಕ್ ಕಿತ್ತೊಗಿರುವುದು ಗಮನಕ್ಕೆ ಬಂದಿರಬಹುದು. ನಾಲ್ಕೈದು ಮಂದಿ ಕುಳಿತುಕೊಂಡು ಅದನ್ನು ತೆಗೆಯುವುದು, ಇಡೋದು ಮಾಡುತ್ತಾ ಇರುವ ದೃಶ್ಯ ನೋಡ್ತಾ ಇರಬಹುದು. ಇಲ್ಲದಿದ್ದರೆ ಅದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಇವತ್ತು ಇಲ್ಲಿ ಪೋಸ್ಟ್ ಮಾಡಿದ್ದೇನೆ. ಇದರಲ್ಲಿ ವಿಶೇಷ ಏನಿದೆ ಎಂದು ನೀವು ಕೇಳಬಹುದು. ವಿಶೇಷ ಇರುವುದು ಈ ಇಂಟರ್ ಲಾಕ್ ಇತ್ತೀಚೆಗೆ ಮೂರು ವರ್ಷಗಳ ಹಿಂದೆಯಷ್ಟೇ ಹಾಕಿರುವುದು. ಆವತ್ತು ಅದಕ್ಕೆ ತಗಲಿದ್ದ ಖರ್ಚು ಭರ್ಥಿ 28 ಲಕ್ಷ. ಹಾಗಾದರೆ ಈಗ ಅಲ್ಲಿ ಕೆಲಸದವರು ಏನು ಮಾಡುತ್ತಾ ಇದ್ದಾರೆ ಎಂದು ನೀವು ಈಗ ಮತ್ತೆ ಕೇಳಬಹುದು. ಅವರು ಮೂರು ವರ್ಷಗಳ ಹಿಂದೆ ಹಾಕಿದ್ದ ಇಂಟರ್ ಲಾಕ್ ತೆಗೆದು ಮತ್ತೆ ಇಡುತ್ತಿದ್ದಾರೆ. ಅದಕ್ಕೆ ಈ ಬಾರಿ ತಗಲುವ ಖರ್ಚು ಹನ್ನೊಂದುವರೆ ಲಕ್ಷ. ನಮ್ಮ ಪಾಲಿಕೆಯವರಿಗೆ ಲಕ್ಷ, ಕೋಟಿಗಳು ಲೆಕ್ಕವೇ ಇಲ್ಲ. ಯಾಕೆಂದರೆ ತೆರಿಗೆ ಕಟ್ಟುವುದು ನಾವು ಅಲ್ಲವೇ?

ನಾಚಿಕೆ, ಮಾನ, ಮರ್ಯಾದೆ ಶಬ್ದಗಳು ಇವರಿಗೆ ಗೊತ್ತೆ ಇಲ್ಲ…

ಈಗ ಮತ್ತೊಮ್ಮೆ ಈ ಫೋಟೋಗಳನ್ನು ನೋಡಿ. ನಮ್ಮಲ್ಲಿ ತುಂಬಾ ಜನರಿಗೆ ತಮ್ಮ ಮನೆ, ಅಂಗಡಿ, ಆಫೀಸು, ಫ್ಯಾಕ್ಟರಿಗಳ ಆವರಣಗಳಲ್ಲಿ ಇಂಟರ್ ಲಾಕ್ ಹಾಕಿಸಿ ಗೊತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ಇಂಟರ್ ಲಾಕ್ ಹಾಕಿಸುವುದು ಸಾಮಾನ್ಯ. ಅದನ್ನು ಹೇಗೆ ಅಳವಡಿಸುವುದು ಎನ್ನುವುದು ಅನೇಕರಿಗೆ ನೋಡಿ, ಕೇಳಿ ಒಂದಿಷ್ಟು ಜ್ಞಾನ ಇರುತ್ತದೆ. ಇನ್ನು ಲಕ್ಷಗಟ್ಟಲೆ ಖರ್ಚು ಬರುವುದರಿಂದ ಗುತ್ತಿಗೆದಾರರಿಗೆ ಇಂಟರ್ ಲಾಕ್ ಅಳವಡಿಸುವುದು ಚೆನ್ನಾಗಿ ಗೊತ್ತಿದೆ ಎಂದು ಗ್ಯಾರಂಟಿಯಾದರೆ ಮಾತ್ರ ಅಂತವರಿಗೆ ನೀವು ನಿಮ್ಮ ಆರ್ಡರ್ ಕೊಡುತ್ತೀರಿ. ಆತ ಕಳಪೆ ಕೆಲಸ ಮಾಡುತ್ತಿದ್ದಾನೆ ಎಂದು ಅನಿಸಿದ ಕೂಡಲೇ ವಿಶ್ವಯುದ್ಧ ಮಾಡಲು ಮುಂದಾಗುತ್ತೀರಿ. ಆದರೆ ನಮ್ಮ ಪಾಲಿಕೆಯಲ್ಲಿ ಹಾಗಲ್ಲ. ಯಾರದ್ದೋ ಹಣವಲ್ಲವೇ. ಪಾಲಿಕೆಯ ಮೇಯರ್ ಅವರದ್ದು ಏನೂ ಹೋಗುವುದಿಲ್ಲ. ಪಾಲಿಕೆ ಕಮೀಷನರದ್ದು ಏನೂ ಹೋಗುವುದಿಲ್ಲ. ಇನ್ನು ನಾವು ಅಭಿವೃದ್ಧಿಯ ಹರಿಕಾರರು ಎಂದು ಆಯ್ಕೆ ಮಾಡಿ ಕಳುಹಿಸಿರುವ ನಮ್ಮ ವಾರ್ಡುಗಳ ಕಾರ್ಪೋರೇಟರ್ ಗಳದ್ದು ಕೂಡ ಯಾವುದೂ ಹೋಗುವುದಿಲ್ಲ. ಆದ್ದರಿಂದ ಗುತ್ತಿಗೆದಾರನೊಬ್ಬ ಪಾಲಿಕೆಯ ಆವರಣದಲ್ಲಿಯೇ ಅತ್ಯಂತ ಕಳಪೆ ಕಾಮಗಾರಿ ಮಾಡಿದ್ರು ಒಬ್ಬರೇ ಒಬ್ಬರು ಬಂದು ನೋಡುವುದಿಲ್ಲ. ಈ ಇಂಟರ್ ಲಾಕ್ ಎಷ್ಟು ಕಳಪೆಯಾಗಿತ್ತು ಎಂದರೆ ಅದರ ಮೇಲೆ ಪಾಲಿಕೆ ಇಂಜಿನಿಯರ್ಸ್ ಗಳ ವಾಹನ ಚಲಿಸುವಾಗಲೇ ಅದರ ಅನುಭವ ಅವರಿಗೆ ಆಗುತ್ತಿತ್ತು. ಆದರೂ ಯಾರೂ ಕೂಡ ಮಾತನಾಡಿಲ್ಲ. ಅದರ ಪರಿಣಾಮವಾಗಿ ಮೂರು ವರ್ಷಗಳ ಹಿಂದೆ 28 ಲಕ್ಷ ಖರ್ಚು ಮಾಡಿದ ಹಾಕಿಸಿದ್ದ ಇಂಟರ್ ಲಾಕ್ ಈಗ ಮತ್ತೊಮ್ಮೆ ಹನ್ನೊಂದುವರೆ ಲಕ್ಷ ಕೇಳುತ್ತಿದೆ. ಪಾಲಿಕೆಯವರು ಒಂದು ಚೂರು ನಾಚಿಕೆ, ಮಾನ, ಮರ್ಯಾದೆ ಇಲ್ಲದೇ ಸ್ಯಾಂಕ್ಷನ್ ಮಾಡಿದ್ದಾರೆ. ಇದನ್ನು ಸ್ಯಾಂಕ್ಷನ್ ಮಾಡುವುದು ನಗರ ಯೋಜನಾ ಅಭಿವೃದ್ಧಿ ಸ್ಥಾಯಿ ಸಮಿತಿ. ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಇದ್ದರೂ ಸ್ಥಾಯಿ ಸಮಿತಿಗಳು ಎಂದು ಮಾಡುತ್ತಾರಲ್ಲ, ಅದರಲ್ಲಿ ಇಬ್ಬಿಬ್ಬರು ವಿಪಕ್ಷ ಅಂದರೆ ಬಿಜೆಪಿಯ ಸದಸ್ಯರನ್ನು ನೇಮಿಸಿರುತ್ತಾರೆ. ಎಲ್ಲವನ್ನು ಆಡಳಿತ ಪಕ್ಷದ ಕೈಯಲ್ಲಿ ಕೊಡುವುದು ಬೇಡಾ, ಒಂದಿಷ್ಟು ಕೇಳುವವರು ಯಾರಾದರೂ ಇರ್ಲಿ ಎನ್ನುವ ಕಾರಣಕ್ಕೆ. ಆದರೆ ಸ್ಥಾಯಿ ಸಮಿತಿಯಲ್ಲಿರುವ ಬಿಜೆಪಿ ಸದಸ್ಯರು ಕೂಡ ಮೀಟಿಂಗ್ ಸಮಯದಲ್ಲಿ ಬಾಯಲ್ಲಿ ಅಂಬಡೆ ತುರುಕಿ ಸುಮ್ಮನೆ ಕೂತುಕೊಂಡಿರುತ್ತಾರೇನೋ ಎಂದು ಅನಿಸುತ್ತದೆ. ಅಷ್ಟಕ್ಕೂ ಇಂಟರ್ ಲಾಕ್ ಹಾಕಿರುವ ಆ ಗುತ್ತಿಗೆದಾರ ಹೇಗೆ ಕಳಪೆ ಕಾಮಗಾರಿ ಮಾಡಿದ್ದಾರೆ ಎನ್ನುವುದನ್ನು ನಿಮಗೆ ವಿವರಿಸುತ್ತೇನೆ.

ಇಂಟರ್ ಲಾಕ್ ಹಾಕುವುದು ಹೇಗೆ..

ಯಾವುದೇ ಇಂಟರ್ ಲಾಕ್ ಹಾಕುವಾಗ ಮೊದಲಿಗೆ ಕೆಳಗೆ ಮರಳನ್ನು ಹಾಕಲಾಗುತ್ತದೆ. ಮರಳಿನ ಅಂದರೆ ಹೊಯಿಗೆಯ ಮೇಲೆ ಇಂಟರ್ ಲಾಕ್ ಜೋಡಿಸಲಾಗುತ್ತದೆ. ಅದರ ನಂತರ ಮತ್ತೆ ಇಂಟರ್ ಲಾಕ್ ಮೇಲೆ ಮರಳನ್ನು ಸುರಿಯಲಾಗುತ್ತದೆ. ಬಳಿಕ ಅದನ್ನು ಗುಡಿಸಲಾಗುತ್ತದೆ. ಆಗ ಮರಳು ಇಂಟರ್ ಲಾಕ್ ಗಳ ನಡುವಿರುವ ಜಾಗದಲ್ಲಿ ಹೋಗಿ ಕೂತುಬಿಡುತ್ತದೆ. ಇನ್ನು ತುಂಬಾ ಜಾಗದಲ್ಲಿ ಇಂಟರ್ ಲಾಕ್ ಹಾಕಲು ಇದ್ದರೆ ಪ್ರತಿ ಐದು ಮೀಟರ್ ಗೆ ಒಂದೊಂದು ಬ್ಯಾಂಡ್ (ಸಿಮೆಂಟ್ ತಡೆ) ನಿರ್ಮಿಸಲಾಗುತ್ತದೆ. ಹೀಗೆ ಮಾಡಿದರೆ ಮಾತ್ರ ಅದು ಧೀರ್ಘ ಬಾಳಿಕೆ ಬರುತ್ತದೆ. ಮೂರು ವರ್ಷದ ಹಿಂದೆ ಇಂಟರ್ ಲಾಕ್ ಮಾಡಿದ್ದ ಗುತ್ತಿಗೆದಾರ ಇಂಟರ್ ಲಾಕ್ ಮೇಲೆ ಮರಳು ಹಾಕದೇ ಇದ್ದ ಕಾರಣ ಮೂರೇ ತಿಂಗಳೊಳಗೆ ಅವು ಸಡಿಲಗೊಂಡಿದ್ದವು. ಆಗಲೇ ಇದು ಪಾಲಿಕೆಯಲ್ಲಿ ಸಂಬಂಧಪಟ್ಟವರಿಗೆ ಗೊತ್ತಿತ್ತು. ಆದರೆ ಯಾರೂ ಮಾತನಾಡಲೇ ಇಲ್ಲ. ಯಾಕೆಂದರೆ ಆ ಗುತ್ತಿಗೆದಾರ ಇವರಿಗೆ ಬಿಸ್ಕಿಟ್ ಹಾಕಿರುತ್ತಾರಲ್ಲ, ಇವರು ಬಾಯಿ ಆ ಮಾಡಿದರೆ ಬಿಸ್ಕಿಟ್ ಬೀಳುತ್ತದೆ. ಅದಕ್ಕೆ ಯಾರೂ ಮಾತನಾಡಲು ಹೋಗಲೇ ಇಲ್ಲ. ಎರಡು ವರ್ಷಗಳ ತನಕ ಯಾವುದೇ ಕಾಮಗಾರಿಯ ನಿರ್ವಹಣಾ ಅವಧಿ ಎಂದು ಇರುತ್ತದೆ. ಆ ಸಮಯದಲ್ಲಿ ಕಾಮಗಾರಿಯಲ್ಲಿ ಏನಾದರೂ ಸಮಸ್ಯೆ ಆದರೆ ಅದನ್ನು ಆ ಗುತ್ತಿಗೆದಾರನೇ ಸರಿ ಮಾಡಬೇಕು. ಆಗ ಅವನಿಗೆ ಮತ್ತೆ ಖರ್ಚಾಗುತ್ತದೆ. ಆಗ ಆತ ಕೊಡಬೇಕಾದವರಿಗೆ ತನ್ನ ವಿರುದ್ಧ ಮಾತನಾಡಿದವರಿಗೆ ಏನೂ ಕೊಡುವುದಿಲ್ಲ. ಯಾವಾಗ ಎರಡು ವರ್ಷದ ಅವಧಿ ಮುಗಿಯಿತೋ ಇವರೆಲ್ಲ ಮತ್ತೊಂದು ಫೈಲ್ ತೆಗೆದು ಅದನ್ನು ರಿಸೇಟ್ ಮಾಡಲು ಅನುದಾನ ಎಂದು ಹಣ ಬಿಡುಗಡೆ ಮಾಡುತ್ತಾರೆ. ನಮ್ಮ ನಿಮ್ಮ ಹಣ ಮತ್ತೆ ಪೋಲಾಗುತ್ತದೆ. ನಾವು ಒಂದು ಸಾವಿರ ದುಡಿಯಲು ಅದೆಷ್ಟು ಕಷ್ಟಪಡಬೇಕು ಎನ್ನುವುದು ನಮಗೆ ಗೊತ್ತು. ಇವರು ಲಕ್ಷಗಟ್ಟಲೆ ಕಣ್ಣುಮುಚ್ಚಿ ವೇಸ್ಟ್ ಮಾಡಿಬಿಡುತ್ತಾರೆ!

  • Share On Facebook
  • Tweet It




Trending Now
ಎಷ್ಟು ಇಂಚಿನ ಪೈಪ್ ಹಾಕಬೇಕು ಎಂದು ಗೊತ್ತಿಲ್ಲದವರಿಗೆ ಎಷ್ಟು ಕೋಟಿ ಬಂದರೆಷ್ಟು?
Hanumantha Kamath February 16, 2019
ಮೇಯರ್ ಕೊನೆಯ ಸುದ್ದಿಗೋಷ್ಟಿಯಲ್ಲಿ ಹೇಳದೇ ಇದ್ದ ಕಾಮಗಾರಿಗಳ ಪಟ್ಟಿ ನನ್ನ ಬಳಿ ಇದೆ!!
Hanumantha Kamath February 15, 2019
Leave A Reply

  • Recent Posts

    • ಎಷ್ಟು ಇಂಚಿನ ಪೈಪ್ ಹಾಕಬೇಕು ಎಂದು ಗೊತ್ತಿಲ್ಲದವರಿಗೆ ಎಷ್ಟು ಕೋಟಿ ಬಂದರೆಷ್ಟು?
    • ಮೇಯರ್ ಕೊನೆಯ ಸುದ್ದಿಗೋಷ್ಟಿಯಲ್ಲಿ ಹೇಳದೇ ಇದ್ದ ಕಾಮಗಾರಿಗಳ ಪಟ್ಟಿ ನನ್ನ ಬಳಿ ಇದೆ!!
    • ಸೋರಿ ಹೋಗಿರುವ ಎರಡು ಕೋಟಿ ಪತ್ತೆ ಹಚ್ಚಲು ಕಾಮನ್ ಸೆನ್ಸ್ ಬೇಕು, ಸಿಎ ಡಿಗ್ರಿ ಅಲ್ಲ!!
    • ಟ್ರೇಡ್ ಲೈಸೆನ್ಸ್ ನವೀಕರಣದ ಕೊನೆಯ ದಿನ ಹತ್ತಿರ ಬಂದಂತೆ ಇದೇನು ಉಪಟಳ!!
    • ಈ ಬಾರಿಯ ಬಜೆಟ್‍ನಲ್ಲೂ ಕುಮಾರಸ್ವಾಮಿಯವರು ಕರಾವಳಿಗೆ ಮಲತಾಯಿ ಧೋರಣೆ ಮಾಡಿದ್ರಾ?!
    • ತೆರಿಗೆ, ಬಿಲ್ ವಸೂಲಿ ಮಾಡುವುದು ಪಾಲಿಕೆಯ ಹಕ್ಕು, ಭಿಕ್ಷೆ ತೆಗೆದುಕೊಂಡ ಹಾಗೆ ಅಂಗಲಾಚಬಾರದು!!
    • ಯಕ್ಷಗಾನ ಕಲಾವಿದನ ಮೇಲೆ ಬ್ರಹ್ಮಾಸ್ತ್ರ ಬಿಟ್ಟ ರೈಗಳು ಮಾಡಿದ್ದು ಸರಿಯಾ ಪೊಲೀಸರೇ?
    • ಕಾಂಕ್ರೀಟಿಕರಣದ ನಡುವೆ ಹೀಗೊಂದು ಹೊಸ ಡಸ್ಟ್ ಬಿನ್!!
    • ಶ್ರೀನಿವಾಸ್ ಕಾಲೇಜಿನವರೇ ನಿಮ್ಮ ಅಂಗೈ ಅಗಲದ ಜಾಗದಲ್ಲಿ ರಸ್ತೆ ಅಗಲ ಮಾಡೋಕೆ ಆಗಲ್ಲ!!
    • ಮುಳುಗುವ ಹಡಗಿನಲ್ಲಿ ತೂತು ಕೊರೆದ ಪಾಲಿಕೆಯ ಕೊನೆಯ ಬಜೆಟ್!!
  • Popular Posts

    • 1
      ಎಷ್ಟು ಇಂಚಿನ ಪೈಪ್ ಹಾಕಬೇಕು ಎಂದು ಗೊತ್ತಿಲ್ಲದವರಿಗೆ ಎಷ್ಟು ಕೋಟಿ ಬಂದರೆಷ್ಟು?
    • 2
      ಮೇಯರ್ ಕೊನೆಯ ಸುದ್ದಿಗೋಷ್ಟಿಯಲ್ಲಿ ಹೇಳದೇ ಇದ್ದ ಕಾಮಗಾರಿಗಳ ಪಟ್ಟಿ ನನ್ನ ಬಳಿ ಇದೆ!!
    • 3
      ಸೋರಿ ಹೋಗಿರುವ ಎರಡು ಕೋಟಿ ಪತ್ತೆ ಹಚ್ಚಲು ಕಾಮನ್ ಸೆನ್ಸ್ ಬೇಕು, ಸಿಎ ಡಿಗ್ರಿ ಅಲ್ಲ!!
    • 4
      ಟ್ರೇಡ್ ಲೈಸೆನ್ಸ್ ನವೀಕರಣದ ಕೊನೆಯ ದಿನ ಹತ್ತಿರ ಬಂದಂತೆ ಇದೇನು ಉಪಟಳ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia, Mangalore - 1

Press enter/return to begin your search