ಭಜನೆ ಯಕ್ಷಗಾನ ಆರಕ್ಷಕರ ನಿದ್ದೆಗೆಡಿಸುತ್ತಿವೆಯಂತೆ ಹಾಗಾದರೆ ಹಿಂದೂ ಸಮಾಜ ಇವರ ನಿದ್ದೆಗೆಡಿಸುವ ಕಾಲ ಬಂದಿದೆಯಲ್ಲವೇ ?
ವರ್ಷಂಪ್ರತಿ ನಡೆಯುವಂತೆ ಮಾಹಾಶಿವನ ಪ್ರೀತ್ಯರ್ಥವಾಗಿ ಶಿವಜಾಗರಣೆ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆದಿದೆ ಅಂತೆಯೇ ಕಾವೂರು ಮಹಾಲಿಂಗೇಶ್ವರ ದೇವಳದಲ್ಲೂ ಯಕ್ಷಗಾನ ಹಾಗೂ ಭಜನಾ ಸೇವೆಗಳ ಸಹಿತಾದಿ ನಡೆದಿದೆ.
ಇದರ ಬಗ್ಗೆ ಗಂಧಗಾಳಿಯಿಲ್ಲದ ಐಜಿಪಿ ಅರುಣ್ ಎನ್ನುವಾತ ತನ್ನ ಸಿಬ್ಬಂದಿಗಳ ಜೊತೆ ಏಕಾಏಕಿ ದೇವಳಕ್ಕೆ ನುಗ್ಗಿ ನೆರೆದಿರುವ ಭಕ್ತರನ್ನು ಅವಾಚ್ಯವಾಗಿ ನಿಂದಿಸಿ ಯಕ್ಷಗಾನದ ಮೈಕ್ ಕಿತ್ತು ಜೊತೆಗೆ ಭಜಕರನ್ನು ಬೆದರಿಸಿದ್ದಾನೆ ,ಇದು ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ನಾಶಮಾಡುವ ಹುನ್ನಾರವೋ ಗೊತ್ತಿಲ್ಲ ಆದರೆ ಇಂತಹ ಘಟನೆಯೊಂದು ನಡೆದು ಅದಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿರೋಧ ಒಡ್ಡದೇ ಇರುತಿದ್ದರೆ ಅಂದು ನಮ್ಮ ಆಚರಣೆಯೇ ಸ್ಥಗಿತವಾಗುತ್ತಿತ್ತು .
ಬಹುಶಃ ನಮ್ಮ ಐಜಿಪಿಯವರಿಗೆ ಈ ರೀತಿಯ ಧೈರ್ಯ ಬಂದಿರುವುದು ಹಿಂದೂಗಳ ಆಚರಣೆ ಕಂಡಾಗ ಮಾತ್ರ ಅಂತಾ ಅನಿಸುತ್ತದೆ ಯಾಕೆಂದರೆ ದಿನಾಮೊಳಗುವ ಇತರ ಧರ್ಮದ ಮೈಕ್ ಶಬ್ದ ಈ ಪೋಲೀಸಪ್ಪನ ಕಿವಿಗೆ ಬಿದ್ದಂತಿಲ್ಲ .ಇದು ಸಣ್ಣ ವಿಚಾರವಂತೂ ಖಂಡಿತಾ ಅಲ್ಲ ಈ ಬಗ್ಗೆ ನಮ್ಮ ಸರ್ವ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಈ ಅಧಿಕಾರಿಯನ್ನು ಮನೆಗೆ ಕಳುಹಿಸಬೇಕಿದೆ ಇಲ್ಲವಾದಲ್ಲಿ ಮುಂದೊಂದು ದಿನ ತುಳುನಾಡಿನ ಯಕ್ಷಗಾನಕ್ಕೂ ಸಮಯದ ನಿರ್ಬಂಧ ಬೀಳಬಹುದು ಜೊತೆಗೆ ಭಜನೆ ಮಾಡಲೂ ಕಷ್ಟಪಡಬೇಕಾಗಬಹುದು .
Leave A Reply