• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಆಂಟೋನಿಯ ಎಂಜಿಲು ತಿನ್ನುತ್ತಿರುವವರು ಮುಖ ಒರೆಸಿಕೊಳ್ಳಿ!! ಮಂಗಳೂರಿಗೆ 165 ನೇ ಸ್ಥಾನ..

Hanumantha Kamath Posted On March 7, 2019


  • Share On Facebook
  • Tweet It

ಟೆಸ್ಟ್ ರ್ಯಾಂಕಿಂಗ್ ನಲ್ಲಿ ಒಂದನೇ ಸ್ಥಾನದಲ್ಲಿದ್ದ ಭಾರತದ ಕ್ರಿಕೆಟ್ ತಂಡ ಮುಂದಿನ ವರ್ಷ ಸಡನ್ನಾಗಿ ಎಂಟನೇ ಸ್ಥಾನಕ್ಕೆ ಇಳಿದರೆ ನೀವು ಏನು ಹೇಳುತ್ತಿರಿ. ಕಳಪೆ ಪ್ರದರ್ಶನ ಎನ್ನುತ್ತೀರಿ. ಹಾಗೆ ಮಂಗಳೂರು ನಗರ ಕೂಡ ಸ್ವಚ್ಚತೆಯಲ್ಲಿ 55 ನೇ ಸ್ಥಾನದಿಂದ ಈ ವರ್ಷ ಒಮ್ಮಿಂದೊಮ್ಮೆಲೇ 165 ನೇ ಸ್ಥಾನಕ್ಕೆ ಇಳಿದರೆ ನೀವು ಏನು ಹೇಳುತ್ತೀರಿ. ಮಂಗಳೂರಿನಲ್ಲಿ ಗಲೀಜು ಹೆಚ್ಚಾಗಿದೆ. ನನಗೆ ಇದೇ ಬೇಸರ ಮತ್ತು ಅಸಹ್ಯ ಉಂಟು ಮಾಡುತ್ತಿರುವುದು.

ಆಂಟೋನಿ ಸಂಗ್ರಹಿಸುತ್ತಿರುವ ತ್ಯಾಜ್ಯದಲ್ಲಿ ಪಾಲಿದೆ..
ಭಾರತದ ಒಟ್ಟು 467 ನಗರಗಳು ಸ್ವಚ್ಚ ಸಂರಕ್ಷಣಾ ಪರೀಕ್ಷೆಯಲ್ಲಿ ಇದ್ದವು. ಅದರಲ್ಲಿ ಮಂಗಳೂರಿಗೆ 165 ನೇ ಸ್ಥಾನ ಬಂದಿದೆ. ನನಗೆ ಆಶ್ಚರ್ಯವಾಗುವುತ್ತಿರುವುದೇ ಇಲ್ಲಿ. ಏಕೆಂದರೆ ನಿಮ್ಮ ಮನೆಗೆ ಗುಡಿಸಿ ಒರೆಸಲು ನೀವು ಓರ್ವ ಮಹಿಳೆಯನ್ನು ಕೆಲಸಕ್ಕೆ ತೆಗೆದುಕೊಂಡಿದ್ದೀರಿ ಎಂದು ಅಂದುಕೊಳ್ಳೋಣ. ಅವಳಿಗೆ ತಿಂಗಳಿಗೆ ಏಳು ನೂರು ರೂಪಾಯಿ ಸಂಬಳ ಕೊಡುತ್ತೀರಿ ಎಂದೆ ಅಂದಾಜು ಮಾಡೋಣ. ಅವಳು ಬೇಕಾಬಿಟ್ಟಿ ಒರೆಸಿ, ಗುಡಿಸಿ ಹೋದರೆ ನೀವು ಸುಮ್ಮನೆ ಬಿಡುತ್ತೀರಾ. ಏಳು ನೂರು ರೂಪಾಯಿ ಕೊಡುವಾಗ ಯೋಚಿಸುವುದಿಲ್ಲವೇ. ಆದರೆ ನಮ್ಮ ಮಂಗಳೂರು ಮಹಾನಗರ ಪಾಲಿಕೆ ತಿಂಗಳಿಗೆ ಎರಡು ಕೋಟಿ ರೂಪಾಯಿಯನ್ನು ಗುಡಿಸಿ, ಸ್ವಚ್ಚ ಮಾಡುವವರಿಗೆ ಕೊಡುತ್ತಾ ಇದೆ. ಆದರೆ ಅವರು ಸ್ವಚ್ಚವಾಗಿ ಇಟ್ಟಿದ್ದಾರಾ ಎಂದು ನೋಡುವುದೇ ಇಲ್ಲ. ಏಕೆಂದರೆ ಮೊದಲನೇಯದಾಗಿ ಕೊಡುತ್ತಿರುವುದು ಮೇಯರ್ ಅಥವಾ ಕಮೀಷನರ್ ತಮ್ಮ ಕಿಸೆಯಿಂದ ಅಲ್ಲವೇ ಅಲ್ಲ. ಎರಡನೇಯದಾಗಿ ಕೆಳಗಿನಿಂದ ಮೇಲಿನವರ ತನಕ ಎಲ್ಲಾ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಆಂಟೋನಿ ಸಂಗ್ರಹಿಸುತ್ತಿರುವ ತ್ಯಾಜ್ಯದಲ್ಲಿ ಪಾಲಿದೆ. ಯಾವಾಗ ತಟ್ಟೆಯಲ್ಲಿ ಬಡಿಸಿರುವುದು ರುಚಿ ಇದೆ ಎಂದು ಅನಿಸಿದರೆ ಅದು ಮೋರಿಯಿಂದ ತೆಗೆದದ್ದಾ, ಅಡುಗೆಕೋಣೆಯಿಂದ ತಂದದ್ದಾ ಎಂದು ಯಾರು ನೋಡುತ್ತಾರೆ. ಹಾಗೆ ಇಲ್ಲಿ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರು ಎರಡು ಕೋಟಿಯಲ್ಲಿ ಕೊಡುವ ಕಮೀಷನ್ ಆಸೆಗೆ ಎಲ್ಲರೂ ಬಿದ್ದಿರುವುದರಿಂದ ಮಂಗಳೂರು 165ನೇ ಸ್ಥಾನ ಅಲ್ಲ, ಕೊನೆಯ ಸ್ಥಾನಕ್ಕೆ ಬಂದರೂ ಯಾರಿಗೂ ಟೆನ್ಷನ್ ಇಂದಂತೆ ಕಾಣುವುದಿಲ್ಲ.
ಆಂಟೋನಿ ಸಂಸ್ಥೆಗೆ ತಿಂಗಳಿಗೆ ಎರಡು ಕೋಟಿ..
ಆಂಟೋನಿ ವೇಸ್ಟ್ ನವರ ವಿಷಯ ಪಕ್ಕಕ್ಕೆ ಇಡೋಣ. ಅದಕ್ಕೆ ಮತ್ತೆ ಬರ್ತೇನೆ. ಮಂಗಳೂರು ಈಗ ಇಷ್ಟಾದರೂ ಕ್ಲೀನ್ ಆಗಿರುವುದಕ್ಕೆ ರಾಮಕೃಷ್ಣ ಮಠದವರಿಗೆ ದೊಡ್ಡ ಧನ್ಯವಾದ ಅರ್ಪಿಸಬೇಕು. ಅವರು ಐದು ವರ್ಷಗಳಿಂದ ಪ್ರತಿ ವಾರ ಮಂಗಳೂರಿನ ವಿವಿಧ ಭಾಗಗಳಲ್ಲಿ ಕ್ಲೀನ್ ಮಾಡಿಕೊಂಡು ಬರುತ್ತಿದ್ದಾರೆ. ತಂಡೋಪತಂಡದಲ್ಲಿ ನಮ್ಮ ನಾಗರಿಕರು ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಚ್ಚತೆ ಮಾಡಿಕೊಂಡು ಬರುತ್ತಿದ್ದಾರೆ. ಅವರು ಕ್ಲೀನ್ ಮಾಡಿಟ್ಟುಕೊಂಡು ಹೋದ ಸ್ಥಳಗಳನ್ನು ಆಂಟೋನಿ ವೇಸ್ಟ್ ನವರು ಮ್ಯಾನೇಜ್ ಮಾಡಿಕೊಂಡು ಹೋದರೂ ಸಾಕಿತ್ತು, ಅದನ್ನು ಕೂಡ ಇವರು ಮಾಡಿಲ್ಲ. ಅದರೊಂದಿಗೆ ಇನ್ನೂ ಅನೇಕ ಸಂಘ, ಸಂಸ್ಥೆಗಳು ಆಗಾಗ ಕ್ಲೀನ್ ಅಭಿಯಾನ ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ಈ ಪಾಲಿಕೆಯವರು ಆಭಾರಿಯಾಗಿರಬೇಕು. ಹೀಗೆ ರಾಮಕೃಷ್ಣ ಮಠ ಹಾಗೂ ಕೆಲವು ಸಂಘ ಸಂಸ್ಥೆಗಳ ನಾಗರಿಕರು ನಿಸ್ವಾರ್ಥ ಸೇವೆ ಮಾಡುತ್ತಿದ್ದರೆ ಆಂಟೋನಿ ವೇಸ್ಟ್ ಮಾತ್ರ ಎರಡು ಕೋಟಿ ತೆಗೆದುಕೊಂಡು ಮಂಗಳೂರಿನಲ್ಲಿ ಮಾಡುತ್ತಿರುವುದಾದರೂ ಏನು?
ಆಂಟೋನಿ ಸಂಸ್ಥೆಗೆ ತಿಂಗಳಿಗೆ ಎರಡು ಕೋಟಿ ಕೊಡುವುದು ಅವರು ಉದ್ಧಾರವಾಗಲಿ ಮತ್ತು ನಮ್ಮ ಪಾಲಿಕೆ ಸದಸ್ಯರನ್ನು, ಅಧಿಕಾರಿಗಳನ್ನು ಉದ್ಧಾರ ಮಾಡಲಿ ಎಂದಲ್ಲ. ನಿಯಮ ಪ್ರಕಾರ 560 ಕ್ಲೀನರ್ ಗಳನ್ನು ಆಂಟೋನಿಯವರು ಮಂಗಳೂರು ನಗರದ ರಸ್ತೆಗಳನ್ನು ಗುಡಿಸಲು ಇಟ್ಟುಕೊಂಡಿರಬೇಕಾಗುತ್ತದೆ. ಏಕೆಂದರೆ ಕೆಲವು ರಸ್ತೆಗಳನ್ನು ನಿತ್ಯ, ಕೆಲವು ಎರಡು ದಿನಕ್ಕೊಮ್ಮೆ, ಕೆಲವು ವಾರಕ್ಕೊಮ್ಮೆ ಗುಡಿಸಬೇಕಾಗುತ್ತದೆ. ಆದರೆ ನೀವು ಯಾವತ್ತಾದರೂ ಮಂಗಳೂರಿನ ಯಾವುದಾದರೂ ರಸ್ತೆಯನ್ನು ಆಂಟೋನಿಯವರು ಗುಡಿಸಿದ್ದು ನೋಡಿದ್ದೀರಾ:? 560 ಗುಡಿಸಬೇಕಾದವರ ಬದಲಿಗೆ 50 ಜನ ಕೂಡ ಇರದಿದ್ದರೆ ಆಂಟೋನಿಯವರಿಗೆ ಎರಡು ಕೋಟಿ ಕೊಡುವುದು ಯಾಕೋ
  • Share On Facebook
  • Tweet It


- Advertisement -


Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
Hanumantha Kamath March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Hanumantha Kamath March 30, 2023
Leave A Reply

  • Recent Posts

    • ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
  • Popular Posts

    • 1
      ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • 2
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 3
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 4
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 5
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search