ಗೆಲ್ಲುವ ಗ್ಯಾರಂಟಿ ಇಲ್ಲ, ಆದರೆ ಟಿಕೆಟ್ ಕೊಡಿ ಎಂದ ಆಕಾಂಕ್ಷಿಗಳ ಮನವಿಗೆ ವೇಣುಗೋಪಾಲ್ ಟೆನ್ಷನ್!!
ನನಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ, ಆದರೆ ಬೇರೆ ಕಾಂಗ್ರೆಸ್ಸ್ ಅಭ್ಯರ್ಥಿಗಳು ತೆಗೆಯುವುದಕ್ಕಿಂತ ಹೆಚ್ಚು ಮತಗಳನ್ನು ಪಡೆಯಬಲ್ಲೆ ಎಂದು ರಮಾನಾಥ್ ರೈ ಹೈಕಮಾಂಡ್ ಸಭೆಯಲ್ಲಿ ತಮ್ಮ ಪಕ್ಷದ ರಾಷ್ಟ್ರೀಯ ನಾಯಕರ ಎದುರು ಹೇಳಿದರಂತೆ. ಅದು ಬಂಟ್ವಾಳದ ಮಾಜಿ ಶಾಸಕರೂ, ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರೂ ಆದ ರಮಾನಾಥ ರೈ ಅವರ ಕಾನ್ಪಿಡೆನ್ಸ್. ಅವರ ಮಾತುಗಳನ್ನು ಕೇಳಿ ಗೊಂದಲಕ್ಕೆ ಬಿದ್ದವರು ರಾಜ್ಯ ಉಸ್ತುವಾರಿ ವೇಣುಗೋಪಾಲ್. ರೈಗಳ ಮಾತನ್ನು ಕೇಳಿದ ನಂತರ ಮಿಥುನ್ ರೈಗೆ ಬಿಫಾರಂ ಕೊಡಲು ರೆಡಿ ಮಾಡಿದ್ದ ದಾಖಲೆಗಳನ್ನು ಮತ್ತೆ ಒಳಗೆ ತೆಗೆದು ಇಟ್ಟರಂತೆ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್. ರಮಾನಾಥ ರೈ ಅವರು ಹೇಳಿದ್ದರಲ್ಲಿ ಯಾವ ಉತ್ಪೇಕ್ಷೆಯೂ ಇಲ್ಲ. ರೈ ಕ್ಯಾಪೆಸಿಟಿಯೇ ಅದು. ಅವರು ಮನಸ್ಸು ಮಾಡಿ ಆಖಾಡಕ್ಕೆ ಇಳಿದರೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳರಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬಲ್ಲರು. ಅದೇ ಅವರು ಒಂದು ಕ್ಷಣ ಮೈ ಮರೆತು ಅಲ್ಲಾನ ಕೃಪೆಯಂತಹ ಹೇಳಿಕೆ ಕೊಟ್ಟರು ಅಂದರೆ ಅದೇ ಕಾಂಗ್ರೆಸ್ಸಿನಿಂದ ಗೆದ್ದ ಏಳು ಶಾಸಕರು ಕೂಡ ಮಕಾಡೆ ಮಲಗಿ ಬಿಡುತ್ತಾರೆ. ಇವತ್ತಿಗೂ ತಮ್ಮ ಸೋಲಿಗೆ ರೈಗಳ ಅಲ್ಲಾನ ಕೃಪೆ ಹೇಳಿಕೆಯೇ ಕಾರಣ ಎಂದು ಉಳಿದ ಸೋತ ಶಾಸಕರು ಅಂದುಕೊಂಡಿದ್ದಾರೆ. ಅದು ಬಿಟ್ಟರೆ ರೈಗಳಲ್ಲಿ ಇವತ್ತಿಗೂ ಹೋರಾಡುವ ಛಲ ಇದೆ.
ಟಫ್ ಫೈಟ್ ಮಿಥುನ್ ರೈಯಿಂದ…
ಮಿಥುನ್ ರೈ ಅವರ ವಯಸ್ಸಿಗಿಂತ ಹೆಚ್ಚು ರಾಜಕೀಯ ಅನುಭವ ರಮಾನಾಥ ರೈ ಅವರಿಗಿದೆ. ಬಂಟ್ವಾಳದಲ್ಲಿ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳು ಎದ್ದು ಕಾಣುತ್ತವೆ. ಸರಿಯಾಗಿ ಹೇಳಬೇಕೆಂದರೆ ರೈ ಅತೀ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ತಂದದ್ದು ತಮ್ಮ ಕಳೆದ ಬಾರಿಯ ಶಾಸಕ ಅವಧಿಯಲ್ಲಿಯೇ. ಆದರೆ ಜನರು ಅದೇ ಅವಧಿಯಲ್ಲಿ ಅವರನ್ನು ಸೋಲಿಸಿಬಿಟ್ಟರು. ಬಂಟ್ವಾಳದ ಗೆಸ್ಟ್ ಹೌಸಿನಲ್ಲಿ ಯಾರೋ ಬೆಂಬಲಿಗರು ಮಾಡಿದ ವಿಡಿಯೋ, ಕಲ್ಲಡ್ಕ ಶಾಲೆಯ ಊಟದ ವಿಷಯ, ಅಲ್ಲಾನ ಕೃಪೆ ರೈಗಳನ್ನು ಸೋಲಿಸಿದ್ದು ಬಿಟ್ಟರೆ ರೈಗಳು ಅಭಿವೃದ್ಧಿ ಮಾಡಿಲ್ಲ ಎಂದು ಜನ ಹೇಳುತ್ತಿಲ್ಲ. ಅಂತಹ ರೈಗಳು ಈ ಬಾರಿ ತಮ್ಮ ರಾಜಕೀಯ ಜೀವನದಲ್ಲಿ ಒಂದು ಟಿಕೆಟಿಗಾಗಿ ತಮ್ಮ ಅನುಭವದ ವಯಸ್ಸಿನಷ್ಟು ಅಲ್ಲದವರೊಂದಿಗೆ ಸ್ಪರ್ಧೆಗೆ ಇಳಿಯಬೇಕಾಯಿತು. ಅದನ್ನು ನೋಡಿ ಸಿದ್ಧರಾಮಯ್ಯ ಅವರೇ ಬೇಸರಪಟ್ಟರು ಎನ್ನುವ ಸುದ್ದಿ ಇದೆ. ರೈಗಳಿಗೆ ಕೊಟ್ಟು ಬಿಡಿ ಎಂದು ಅವರು ಹೇಳಿದ್ದು ಡಿಕೆಶಿ ತಮ್ಮ ಶಿಷ್ಯನಿಗೆ ಕೊಡಿ ಎಂದು ಹೇಳಿದ್ದಾರೆ.
ಬಿಲ್ಲವರಿಗೆ ಬೇರೆ ಕಡೆ ಇಲ್ಲ..
ಆದರೆ ವೇಣುಗೋಪಾಲ್ ಥಿಯರಿಯೇ ಬೇರೆ. ಅವರ ಪ್ರಕಾರ ಅದು ಬಿಲ್ಲವರ ಸೀಟು. ಅಲ್ಲಿ ಅವರಿಗೆ ಕೊಡಬೇಕು ಎಂದು ಹೇಳಿ ವಿನಯ ಕುಮಾರ್ ಸೊರಕೆ ಅಥವಾ ಹರಿಪ್ರಸಾದ್ ಅವರಿಗೆ ಕೊಡೋಣ. ನಮಗೆ ಉಡುಪಿಯಲ್ಲಿ ಬಿಲ್ಲವರಿಗೆ ಕೊಡಲು ಆಗಿಲ್ಲ. ದಕ್ಷಿಣ ಕನ್ನಡದಲ್ಲಿ ಕೊಟ್ಟರೆ ಒಳ್ಳೆಯದು ಎಂದಿದ್ದಾರೆ. ಹಾಗಾದರೆ ತಮಗೆ ಕೊಡಿ ಎಂದು ರಾಹುಲ್ ನಿವಾಸದಲ್ಲಿಯೇ ಕೂತು ಹರಿಪ್ರಸಾದ್ ಫೋನ್ ಮಾಡಿದ್ದಾರೆ. ಆದರೆ ನಿಮಗೆ ಲೋಕಲ್ ಕನೆಕ್ಷನ್ ಇಲ್ವಲ್ಲಾ ಎಂದು ವೇಣುಗೋಪಾಲ್ ಹೇಳಿದ್ದಕ್ಕೆ ಅದರ ಚಿಂತೆ ನನಗೆ ಬಿಡಿ ಎಂದು ಹರಿಪ್ರಸಾದ್ ಹೇಳಿದ್ದಾರೆ. ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾ ಕಚೇರಿಯಿಂದ ಎರಡು ಕಿ.ಮೀ ದೂರ ಬಂದು ಟಿಕೆಟ್ ಹರಿಪ್ರಸಾದ್ ಗೆ ಅಂತೆ ಎಂದು ನೋಡಿ. ಯಾರು ಕಾಂಟ್ರಾಕ್ಟರಾ ಎಂದು ಕಿಸಕ್ಕನೆ ನಗುತ್ತಾರೆ. ರಾಹುಲ್ ಗಾಂಧಿಯವರ ಆಪ್ತರು ಎನ್ನುವ ಕಾರಣಕ್ಕೆ ಟಿಕೆಟ್ ಕೊಟ್ಟರೆ ಅಲ್ಲಿ ಬಿಜೆಪಿಗೆ ಸುಲಭವಾಗುತ್ತದೆ ಎಂದು ವೇಣು, ಸಿದ್ಧರಾಮಯ್ಯನವರಿಗೆ ಹೇಳಿದ್ದಕ್ಕೆ ಹಾಗಾದರೆ ವಿನಯ ಕುಮಾರ್ ಸೊರಕೆಗೆ ಕೊಡಿ ಎಂದು ಸಿದ್ದು ಹೇಳಿದ್ದಾರೆ. ಸೊರಕೆಯವರಿಗೆ ಹೇಗೂ ಉಡುಪಿಯಲ್ಲಿ ಅವಕಾಶ ಇಲ್ಲ. ಮಂಗಳೂರಿನಲ್ಲಿ ನಿಲ್ಲಿ ಎಂದು ದಿನೇಶ್ ಗುಂಡುರಾವ್ ಹೇಳಿದ್ದಾರೆ. ಆದರೆ ಅಲ್ಲಿ ಮುಸ್ಲಿಮರು ಸೊರಕೆ ವಿರುದ್ಧ ಇದ್ದಾರೆ ಎಂದು ಅಲ್ಲಿಯೇ ಇದ್ದ ಮೊಯ್ದೀನ್ ಬಾವ, ಮೊಬೈಲಿನಲ್ಲಿ ಮಾಜಿ ಮೇಯರ್ ಅಶ್ರಫ್ ಸುದ್ದಿಗೋಷ್ಟಿಯ ವಿಡಿಯೋ ತೋರಿಸಿದ್ದಾರೆ. ಹಾಗಾದರೆ ಮೊಯ್ದೀನ್ ಬಾವ ನೀವು ನಿಲ್ತೀರೇನ್ರಿ ಎಂದು ಸಿದ್ದು ಕೇಳಿದ್ದಕ್ಕೆ ಐವನ್ ಡಿಸೋಜಾ, ಸೋಲುವುದೇ ಆದರೆ ನನಗೆ ಕೊಡಿ ಎಂದು ತಮಾಷೆ ಮಾಡಿದ್ದಾರೆ. ಅಲ್ಲಿಗೆ ಕೊನೆಯದಾಗಿ ನಾಯಕರು ಈ ವಿಷಯವನ್ನು ರಾಷ್ಟ್ರೀಯ ನಾಯಕರ ಟೇಬಲ್ಲಿಗೆ ವರ್ಗಾಯಿಸಿದ್ದಾರೆ. ರಾಹುಲ್ ಗಾಂಧಿ ಯೂತ್ ಗೆ ದೇಂಗೇ ಎಂದು ಹೇಳಿ ಸಹಿ ಹಾಕಿರುವುದರಿಂದ ಮಿಥುನ್ ರೈ ಅವರಿಗೆ ಟಿಕೆಟ್ ಸಿಕ್ಕಿದೆ. ಅಷ್ಟರಲ್ಲಿ ಮಿಥುನ್ ರೈ ಬಜರಂಗದಳ ವಿರುದ್ಧ, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮಾತನಾಡಿದ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಕಥೆಗಳನ್ನು ಐವನ್ ಡಿಸೋಜಾ, ಸಿದ್ಧರಾಮಯ್ಯನವರ ಮುಂದೆ ಹಿಡಿದಿದ್ದಾರೆ. ಕಥೆ ಇಂಟರೆಸ್ಟಿಂಗ್ ಟ್ವಿಸ್ಟ್ ಪಡೆದುಕೊಂಡಿದೆ!!
Leave A Reply