• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪ್ರಿನ್ಸಿಪಾಲರಿಗೆ ಹೊಡೆದರೆ ಡಿಗ್ರಿ ಸಿಗಬಹುದು, ಜ್ಞಾನ ಅಲ್ಲ!!

Hanumantha Kamath Posted On March 29, 2019
0


0
Shares
  • Share On Facebook
  • Tweet It

ನಳಿನ್ ಕುಮಾರ್ ಕಟೀಲ್ ಅವರ ವಿದ್ಯಾಭ್ಯಾಸವನ್ನು ಹಿಡಿದುಕೊಂಡು ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಮಿಥುನ್ ರೈ ಅವರಿಗೆ ಹೋಲಿಸಿದರೆ ನಳಿನ್ ಅವರು ಕಲಿತದ್ದು ಕಡಿಮೆ ಎಂದು ಅನಿಸಬಹುದು. ಆದರೆ ನಳಿನ್ ಅವರು ಜನರ ಮಧ್ಯದಲ್ಲಿ ಕೆಲಸ ಮಾಡಿ ಬಂದವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಸೇವೆ ಮಾಡಿದವರು. ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿ ಜನರ ನಾಡಿಮಿಡಿತ ಅರಿತವರು. ಅವರು ಯಾರನ್ನೂ ಹೆದರಿಸಿ ಬೆದರಿಸಿ ಯುವ ಮೋರ್ಚಾ ಅಧ್ಯಕ್ಷರಾಗಿಲ್ಲ. ತಮ್ಮ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಬೇರೆ ಆಕಾಂಕ್ಷಿಗಳಿಗೆ ಹೆದರಿಸಿ ಧಮ್ಕಿ ಹಾಕಿ ಚುನಾವಣೆಗೆ ಸ್ಪರ್ಧಿಸದಂತೆ ಮಾಡಿಲ್ಲ. ಆಂತರಿಕ ಚುನಾವಣೆಯಲ್ಲಿ ತಮ್ಮ ತೋಳ್ಬಲ, ಧನಬಲ ಪ್ರದರ್ಶಿಸಿ ಯುವ ಅಧ್ಯಕ್ಷ ಸ್ಥಾನವೂ ಏರಿದವರಲ್ಲ. ನಳಿನ್ ಕುಮಾರ್ ಎಲ್ಲಿಯ ತನಕ ತ್ಯಾಗ ಮಾಡಿದ್ದಾರೆ ಎಂದರೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯತ್ವ ಬಂದಾಗ ಅದನ್ನು ನಯವಾಗಿ ತಿರಸ್ಕರಿಸಿದವರು. ತಮಗೆ ಹುದ್ದೆ ಬೇಡಾ, ಪಕ್ಷ ಅಧಿಕಾರಕ್ಕೆ ಬರಲಿ ಎಂದು ಆಶಿಸಿದವರು. ಅವರಿಗೆ ಸಂಸದ ಸ್ಥಾನಕ್ಕೆ ಟಿಕೆಟ್ ಕೊಡಲು ತೀರ್ಮಾನಿಸಿದಾಗ ತಮಗೆ ಟಿಕೆಟ್ ಬೇಡಾ ಎಂದು ಅತ್ತಿದ್ದರಂತೆ. ಆದರೆ ಮಿಥುನ್ ರೈ ತಮಗೆನೆ ಟಿಕೆಟ್ ಕೊಡಬೇಕು ಎಂದು ಹಟ ಮಾಡಿ ಯಾರ್ಯಾರ ಕೈ ಕಾಲು ಹಿಡಿದು ಟಿಕೆಟ್ ಗಿಟ್ಟಿಸಿಕೊಂಡವರು. ಅವರು ನಳಿನ್ ಅವರ ಪಕ್ಷಸೇವೆಯ ಬಗ್ಗೆ ಒಂದಿಷ್ಟು ಅರಿತುಕೊಳ್ಳಬೇಕು. 2009 ರಲ್ಲಿ ಲೋಕಸಭಾ ಟಿಕೆಟ್ ನಳಿನ್ ಅವರನ್ನು ಹುಡುಕಿ ಬಂದಿತ್ತು. ಆಗ ಅವರ ಎದುರಿಗೆ ಇದ್ದವರು ಕಾನೂನು ಪದವಿಧರ ಜನಾರ್ಧನ ಪೂಜಾರಿಯವರು. ಜನಾರ್ಧನ ಪೂಜಾರಿಯವರೇ ಆಗ ನಳಿನ್ ಅವರ ವಿದ್ಯಾಭ್ಯಾಸದ ಬಗ್ಗೆ ಮಾತನಾಡಿಲ್ಲ. ಎರಡನೇ ಬಾರಿ ಒಂದೂವರೆ ಲಕ್ಷ ಮತಗಳ ಅಂತರದಿಂದ ನಳಿನ್ ಗೆದ್ದದ್ದು ಅದೇ ಕಾನೂನು ಪದವಿಧರ ಪೂಜಾರಿಯವರ ವಿರುದ್ಧ. ನಾಲ್ವತ್ತು ಸಾವಿರದಿಂದ ಒಂದು ಲಕ್ಷದ ನಲ್ವತ್ತೆರಡು ಸಾವಿರಕ್ಕೆ ಮತಗಳ ಅಂತರ ಹಿಗ್ಗಿತ್ತೆ ವಿನ: ಕಡಿಮೆ ಆಗಲಿಲ್ಲ. ಪೂಜಾರಿಯವರ ಕಾನೂನು ಪದವಿಗೆ ಹೋಲಿಸಿದರೆ ಮಿಥುನ್ ರೈ ಅವರದ್ದು ಏನೂ ಇಲ್ಲ. ಆದರೂ ಈ ಬಾರಿ ನಳಿನ್ ಅವರ ವಿದ್ಯಾಭ್ಯಾಸವನ್ನು ಯುವ ಕಾಂಗ್ರೆಸ್ಸಿಗರು ಎತ್ತಿದ್ದಾರೆ.

ಮಿಥುನ್ ಮೇಲೆ ಕೇಸುಗಳಿವೆ..

ನಳಿನ್ ದೊಡ್ಡ ದೊಡ್ಡ ಕಾಲೇಜುಗಳ ಮೆಟ್ಟಿಲು ಹತ್ತದೇ ಇರಬಹುದು. ಆದರೆ ಕಾಲೇಜಿಗೆ ಹೋಗಿ ವಿದ್ಯೆ ಕಲಿಸಿದ ಪ್ರಿನ್ಸಿಪಾಲರ ಮೇಲೆ ಹಲ್ಲೆ ಮಾಡಿಲ್ಲ. ಬೇರೆಯವರ ಹಾಗೆ ನಳಿನ್ ಅವರಿಗೆ ತಮಗೆ ತುಂಬಾ ವಿದ್ಯೆ ಇದೆ. ದೊಡ್ಡ ಡಿಗ್ರಿ ಇದೆ ಎನ್ನುವುದು ತಲೆಗೆ ಹತ್ತಿಲ್ಲ. ಅದಕ್ಕಾಗಿ ಅವರು ಹತ್ತು ವರ್ಷದಿಂದ ಸಂಸದರಾಗಿ ಜನಪ್ರಿಯರಾಗಿದ್ದಾರೆ. ವಿದ್ಯೆ ವಿನಯವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕೆಲವರಿಗೆ ಅದು ಅಹಂಕಾರವನ್ನು ತಂದುಕೊಡುತ್ತದೆ. ಅಂತವರು ಚಿನ್ನ ಕದ್ದ ದರೋಡೆ ಕೇಸಿನಲ್ಲಿ ಸಿಕ್ಕಿಬೀಳುತ್ತಾರೆ. ತಮ್ಮ ಪಕ್ಷದ ಆಂತರಿಕ ಚುನಾವಣೆಯಲ್ಲಿ ಚೀಟಿಂಗ್ ಮಾಡುತ್ತಾರೆ. ತಮ್ಮದೇ ಪಬ್ ನಲ್ಲಿ ಕ್ರಿಶ್ಚಿಯನ್ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಮುಗಿಸಲು ಹೋಗುತ್ತಾರೆ. ತಮಗಿಂತ ಹಿರಿಯರಾದ ಸಂಘ ಪರಿವಾರದ ನಾಯಕರಿಗೆ ಏಕವಚನದಲ್ಲಿ ವೇದಿಕೆಯ ಮೇಲೆ ಬೈಯುತ್ತಾ ನಿಲ್ಲುತ್ತಾರೆ. ತಮ್ಮ ಪಕ್ಷದ ಭ್ರಷ್ಟರೊಬ್ಬರ ಮೇಲೆ ಐಟಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದಾಗ ಮಂಗಳೂರಿನ ಐಟಿ ಇಲಾಖೆಯ ಕಚೇರಿಯ ಒಳಗೆ ನುಗ್ಗಿ ಕನ್ನಡಿ ಒಡೆಯುತ್ತಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಾರೆ. ಇದೆಲ್ಲ ತುಂಬಾ ಕಲಿತಿದ್ದೇವೆ ಎನ್ನುವ ಅಹಂಕಾರ ಕೊಟ್ಟಿರುವ ಬಳುವಳಿ. ನಳಿನ್ ಅವರಿಗೆ ಇದೆಲ್ಲಾ ಯಾವುದೂ ಇಲ್ಲ. ಅವರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಹೋಗುತ್ತಾರೆ. ಅದರಿಂದ ಅವರ ಲೋಕಸಭಾ ಕ್ಷೇತ್ರಕ್ಕೆ ಹದಿನಾರು ಸಾವಿರ ಕೋಟಿ ರೂಪಾಯಿ ಅನುದಾನ ಬಂದಿದೆ. ಇನ್ನು ಇಂಗ್ಲೀಷ್, ಹಿಂದಿ ಗೊತ್ತಿದ್ದವರು ತಮ್ಮ ಕ್ಷೇತ್ರವನ್ನು ತುಂಬಾ ಅಭಿವೃದ್ಧಿ ಮಾಡಿದ್ದಾರೆ, ಉಳಿದವರು ಏನೂ ಮಾಡಿಲ್ಲ ಎನ್ನುವ ಭಾವನೆ ತಪ್ಪು.

ವಿದ್ಯೆ ಬೇರೆ, ಜ್ಞಾನ ಬೇರೆ..

ಅಷ್ಟಕ್ಕೂ ಮಿಥುನ್ ರೈ ಅವರ ಒಂದು ಕ್ಲಿಪಿಂಗ್ ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿದೆ. ಅವರು ಎರಡು ನಿಮಿಷ ಮಾತನಾಡುವಾಗ ಹತ್ತು ಸಲ ಒಂದೇ ಶಬ್ದವನ್ನು ಬಾರಿ ಬಾರಿ ಹೇಳಿದ್ದಾರೆ. ನೀವು ಸಂಸದರಾಗಿ ಚುನಾಯಿತರಾದರೆ ನಿಮ್ಮ ವಿಝನ್ ಏನು ಎಂದು ಮಾಧ್ಯಮದವರು ಕೇಳಿದ್ದರು. ಅದಕ್ಕೆ ಅವರು ತಾನು ಬೆಳಿಗ್ಗೆ ಎದ್ದ ಬಳಿಕ ಮಧ್ಯಾಹ್ನದ ತನಕ ಏನು ಮಾಡಿದ್ದೇನೆ ಎಂದು ಹೇಳಿದ್ದಾರೆ. ತದನಂತರ ಎನ್ನುವ ಶಬ್ದವನ್ನು ಅನೇಕ ಬಾರಿ ಒಂದೇ ವಾಕ್ಯದಲ್ಲಿ ಉಚ್ಚರಿಸುತ್ತಾ ಹೋಗಿದ್ದಾರೆ. ನಾನು ಇದನ್ನೆಲ್ಲ ದೊಡ್ಡ ಅಪರಾಧ ಎಂದು ಹೇಳುತ್ತಿಲ್ಲ. ಆದರೆ ನಳಿನ್ ಅವರ ವಿದ್ಯೆಯ ಬಗ್ಗೆ ಮಾತನಾಡುವ ಮೊದಲು ತಾವು ಪ್ರಿನ್ಸಿಪಾಲರಿಗೆ ಹಲ್ಲೆ ಮಾಡಿ ಕೇವಲ ಡಿಗ್ರಿ ಪಡೆದುಕೊಂಡದ್ದು ಮಾತ್ರವೇ ವಿನ: ಜ್ಞಾನವನ್ನು ಅಲ್ಲ ಎಂದು ಮಿಥುನ್ ಅರ್ಧ ಮಾಡಿಕೊಳ್ಳಬೇಕು!

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search